More

    ಕೊಪ್ಪಲುಗದ್ದೆಯಲ್ಲಿ ಸಾಯ್ನಿಂದ ಕ್ರೀಡಾ ಸಂಕೀರ್ಣ

    ಸಾಗರ: ಗಣಪತಿ ಕೆರೆ ಪಕ್ಕದ ಕೊಪ್ಪಲಗದ್ದೆ ಜಾಗದಲ್ಲಿ 10 ಎಕರೆ ಪ್ರದೇಶದಲ್ಲಿ ಸಾಯ್ನಿಂದ ಕ್ರೀಡಾ ಸಂಕೀರ್ಣ ನಿರ್ವಿುಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಿದ್ದಪಡಿಸಿ ಮಂಜೂರಾತಿಗೆ ಲೋಸಕಭಾ ಸದಸ್ಯರ ಮೂಲಕ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡುವಂತೆ ಶಾಸಕ ಹರತಾಳು ಹಾಲಪ್ಪ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಗಣಪತಿ ಕೆರೆ ಪಕ್ಕದ ಕೊಪ್ಪಲಗದ್ದೆಯಲ್ಲಿ ಸಾಯ್ನಿಂದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಸಂಬಂಧ ಮಂಗಳವಾರ ಸ್ಥಳ ಪರಿಶೀಲಿಸಿ, ಅಧಿಕಾರಿಗಳ ಜತೆ ರ್ಚಚಿಸಿದ ಅವರು, ತಕ್ಷಣ ಪ್ರಸ್ತಾವನೆ ಸಿದ್ಧಪಡಿಸುವಂತೆ ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಮಂಜá-ನಾಥ ಸ್ವಾಮಿ ಅವರಿಗೆ ತಿಳಿಸಿದರು.

    ಕೊಪ್ಪಲಗದ್ದೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಬೇರೆಬೇರೆ ಯೋಜನೆಗಳನ್ನು ಜಾರಿಗೆ ತರುವ ಉದ್ದೇಶವಿದೆ. ಇಲ್ಲಿ ಸುಮಾರು 29 ಎಕರೆ ಜಾಗವಿದ್ದು, ಸರ್ಕಾರಕ್ಕೆ ಜಮೀನು ಕೊಡುವ ರೈತರಿಗೆ ಎಕರೆಗೆ 40 ಲಕ್ಷ ರೂ. ಪರಿಹಾರ ಕೊಡುವ ಚಿಂತನೆ ನಡೆಸಿದೆ. ಈಗಾಗಲೆ ಭೂಸ್ವಾಧೀನ ಪ್ರಕ್ರಿಯೆಗೆ ಮುಖ್ಯಮಂತ್ರಿ 5 ಕೋಟಿ ರೂ. ಮಂಜೂರು ಮಾಡಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆ ತಕ್ಷಣ ಅನುಷ್ಠಾನಕ್ಕೆ ತರುವಂತೆ ನಗರಸಭೆ ಪೌರಾಯುಕ್ತರಿಗೆ ಶಾಸಕರು ಆದೇಶಿಸಿದರು.

    29 ಎಕರೆ ಪ್ರದೇಶದಲ್ಲಿ ಸುಮಾರು 10 ಎಕರೆ ಜಾಗದಲ್ಲಿ ಸಿಂಥೆಟಿಕ್ ಟ್ರ್ಯಾಕ್, ಕ್ರೀಡಾ ಸಂಕೀರ್ಣಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತದೆ. ಕ್ರೀಡಾ ಕಾಂಪ್ಲೆಕ್ಸ್ ನಿರ್ವಣವಾದರೆ ಎಲ್ಲ ಕ್ರೀಡೆಗಳನ್ನು ಒಂದೆ ಕಡೆ ತರಲು ಸಾಧ್ಯ. ಸಿಂಥೆಟಿಕ್ ಟ್ರ್ಯಾಕ್ ನಿರ್ವಣಕ್ಕೆ ಸುಮಾರು 9 ಕೋಟಿ ರೂ. ವ್ಯಯಿಸಲಾಗುವುದು ಎಂದು ತಿಳಿಸಿದರು.

    ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಶ್ರೀರಾಮು, ಗಣೇಶ್​ಪ್ರಸಾದ್, ಅಥ್ಲೆಟಿಕ್ ಕೋಚ್ ಬಾಳಪ್ಪ ಮಾನೆ, ಎಚ್.ಜಿ.ಸುಬ್ರಹ್ಮಣ್ಯ ಭಟ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಕಂದಾಯ ಅಧಿಕಾರಿ ಸಂತೋಷಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts