More

    ತ್ಯಾವರೆಕೊಪ್ಪದ 30 ಎಕರೆಯಲ್ಲಿ ಹೊಸ ಕ್ರೀಡಾಗ್ರಾಮ ನಿರ್ಮಾಣ

    ಶಿವಮೊಗ್ಗ: ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಕಾರ್ಯಕ್ರಮದಡಿ ಎಸ್​ಎಜಿ (ಸ್ಪೆಷಲ್ ಏರಿಯಾ ಗೇಮ್್ಸ) ಯೋಜನೆ ಮೂಲಕ ತ್ಯಾವರೆಕೊಪ್ಪದಲ್ಲಿ 30 ಎಕರೆ ಭೂಮಿಯಲ್ಲಿ ಕ್ರೀಡಾಗ್ರಾಮ ನಿರ್ವಣಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.

    ಇದರಿಂದ ಹಾಕಿ, ಅಥ್ಲೆಟಿಕ್ಸ್ ಮುಂತಾದ ಕ್ರೀಡೆಗಳಿಗೆ ಭವಿಷ್ಯದಲ್ಲಿ ಉತ್ತೇಜನ ಸಿಗಲಿದೆ. ವಿವಿಧ ಕ್ರೀಡೆಗಳಿಗೆ ತರಬೇತಿ ನೀಡಲು ಹಾಗೂ ಕ್ರೀಡಾಕೂಟ ಆಯೋಜಿಸಲು ಅನುಕೂಲವಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ತ್ಯಾವರೆಕೊಪ್ಪದ ಸರ್ವೆ ನಂಬರ್ 50ರಲ್ಲಿ ಇರುವ 164 ಎಕರೆ ಭೂಮಿಯಲ್ಲಿ 30 ಎಕರೆಯನ್ನು ಕ್ರೀಡಾಗ್ರಾಮಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿ ಕ್ರೀಡಾ ಹಾಸ್ಟೆಲ್ ನಿರ್ವಣವಾಗಲಿದೆ. ಈ ಹಿಂದೆ ಕೆ.ಎಸ್.ಈಶ್ವರಪ್ಪ ಕ್ರೀಡಾ ಸಚಿವರಾದಾಗ ನೂತನ ಕ್ರೀಡಾಗ್ರಾಮ ನಿರ್ವಣಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದಾದ ಬಳಿಕ ನಾನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರನ್ನು ಸಂರ್ಪಸಿ ಮನವರಿಕೆ ಮಾಡಿಕೊಟ್ಟಿದ್ದರಿಂದ ಕೇಂದ್ರ ಸರ್ಕಾರ ವಿಶೇಷ ತಂಡವನ್ನು ಸ್ಥಳ ಪರಿಶೀಲನೆಗೆ ಕಳುಹಿಸಿದೆ ಎಂದು ಹೇಳಿದರು.

    ನೂತನ ಕ್ರೀಡಾಗ್ರಾಮ ನಿರ್ವಣವಾಗುವವರೆಗೆ ನೆಹರೂ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಕ್ರೀಡೆಗಳ ತರಬೇತಿ ಮುಂದುವರಿಯಲಿದೆ. ನೆಹರೂ ಕ್ರೀಡಾಂಗಣದಲ್ಲಿ ನಿರ್ವಿುಸಲು ಉದ್ಧೇಶಿಸಿದ್ದ ಕ್ರೀಡಾ ಸಂಕೀರ್ಣ ಯೋಜನೆಯನ್ನು ಕೈಬಿಡಲಾಗಿದೆ. ಅಲ್ಲಿ ಜ್ಯೂನಿಯರ್ ಹಾಕಿ ಕ್ರೀಡಾಂಗಣ ನಿರ್ವಣವಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts