More

    ಒಳ ಮೀಸಲು ತಿದ್ದುಪಡಿ ಮಾಡದಿರಿ

    ಗಂಗಾವತಿ: ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ಒಳ ಮೀಸಲು ತಿದ್ದುಪಡಿ ಕಾಯ್ದೆ ವಿರೋಧಿಸಿ ಗೋರಸೇನಾ ಜಿಲ್ಲಾ ಘಟಕ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

    ಒಂದು ಸಮುದಾಯವನ್ನು ಒಲೈಸುವ ತಂತ್ರ ಸಲ್ಲದು

    ಪರಿಶಿಷ್ಟ ಜಾತಿಗಳ ವರ್ಗೀಕರದ ಒಳಮೀಸಲಾತಿ ತಿದ್ದುಪಡಿ ಕಾಯ್ದೆಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯವಾಗಿದೆ. ಇದರಿಂದ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಕ್ಕೆ ಅನ್ಯಾಯವಾಗಲಿದೆ. ಹಲವು ವರ್ಷಗಳಿಂದಲೂ ಜಾರಿಯಲ್ಲಿರುವ ಮೀಸಲು ಕಾಯ್ದೆ ತಿದ್ದುಪಡಿಯಿಂದ ಮೇಲ್ಕಂಡ ಸಮುದಾಯದ ಶಿಕ್ಷಣ, ಔದ್ಯೋಗಿಕ, ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಒಂದು ಸಮುದಾಯವನ್ನು ಒಲೈಸುವ ಮತ್ತು ಲೋಕಸಭೆ ಚುನಾವಣೆ ಉದ್ದೇಶದಿಂದ ಒಳಮೀಸಲು ಕಾಯ್ದೆ ತಂತ್ರಗಾರಿಕೆ ರಾಜ್ಯಸರ್ಕಾರ ಅವಕಾಶ ನೀಡಿದೆ. ಬಂಜಾರ ಸಮುದಾಯಕ್ಕೆ ಸಂವಿಧಾನಿಕ ಹಕ್ಕುಗಳನ್ನು ಪಡೆಯಲು ಅಡ್ಡಿಯಾದರೆ, ಸಂಘಟನೆಯಿಂದ ಹೋರಾಟ ಮಾಡಲಾಗುತ್ತದೆ. ಕೂಡಲೇ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಗೋರಸೇನಾದ ಜಿಲ್ಲಾಧ್ಯಕ್ಷ ವೆಂಕಟೇಶ ಜಾಧವ್ ಒತ್ತಾಯಿಸಿದರು.

    ಇದನ್ನೂ ಓದಿ: ಆರ್‌ಸಿಬಿಗೆ ಹಾಂಗ್ಯೋ ಐಸ್‌ಕ್ರೀಮ್ ಪಾಲುದಾರ

    ನಗರದ ವಿರುಪಾಪುರತಾಂಡದ ಶ್ರೀ ಸೇವಾಲಾಲ್ ನಾಯ್ಕ ವೃತ್ತದಿಂದ ಪ್ರತಿಭಟನೆ ರ‌್ಯಾಲಿ ಮೂಲಕ ಆಗಮಿಸಿದ ಸದಸ್ಯರು ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡರ್‌ಗೆ ಮನವಿ ಸಲ್ಲಿಸಿದರು. ಗೋರಸೇನಾ ರಾಜ್ಯ ಉಪಾಧ್ಯಕ್ಷ ಶಿವಪ್ಪ ಜಾಗೊ ಗೋರ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಪಿ.ಲಕ್ಷ್ಮಣನಾಯ್ಕ, ಪಾಂಡುನಾಯ್ಕ, ಶಂಕರನಾಯ್ಕ, ಕೃಷ್ಣನಾಯ್ಕ, ಹನುಮಂತಪ್ಪ, ಸುರೇಶ, ಕೀರಪ್ಪ ಸೇರಿ ಮಹಿಳಾ ಸಂಘಟನೆ ಸದಸ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts