More

    ಕೇಂದ್ರ ಸರ್ಕಾರದಿಂದ ರೈತರ ಬದುಕು ಭಸ್ಮ: ಕೆಪಿಸಿಸಿ ಮಾಧ್ಯಮ ಸಮಿತಿ ಅಧ್ಯಕ್ಷ ಉಗ್ರಪ್ಪ ಆರೋಪ

    ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ದೇಶದ ಆರ್ಥಿಕ ಹಾಗೂ ಆರೋಗ್ಯ ವ್ಯವಸ್ಥೆಯನ್ನು ಭಸ್ಮ ಮಾಡಿದ್ದಾರೆ. ಇದೀಗ ಕೃಷಿ ಕಾಯ್ದೆಗಳ ತಿದ್ದುಪಡಿ ಮೂಲಕ ರೈತರ ಬದುಕನ್ನು ಭಸ್ಮ ಮಾಡಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಆರೋಪಿಸಿದರು.

    ದೇಶದಲ್ಲಿ ಕೋವಿಡ್ ಸಂಕಷ್ಟದಲ್ಲೂ ಉದ್ಯಮಿಗಳಾದ ಅದಾನಿ, ಅಂಬಾನಿ ಅವರದ್ದು ಮಾತ್ರ ಆದಾಯ ಹೆಚ್ಚಳವಾಗಿದೆ. ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದಿತ್ತು. ಇದೀಗ ಅದಾನಿ, ಅಂಬಾನಿ ವಿರುದ್ಧ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆದಿದೆ ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತ ವಿರೋಧಿ ಕಾಯ್ದೆ ಜಾರಿಗೆ ತಂದಿದ್ದಾರೆ. ದೇಶಕ್ಕೆ ಮಾದರಿಯಾಗಿದ್ದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮೂಲಕ ಶ್ರೀಮಂತರಿಗೆ ಭೂಮಿ ಎಂಬ ಕಾಯ್ದೆ ಜಾರಿಗೊಳಿಸಿದ್ದಾರೆ. ಕೃಷಿ ಕಾಯ್ದೆ ತಿದ್ದುಪಡಿಯಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಕೃಷಿ ಜಮೀನು ಶ್ರೀಮಂತರ ಪಾಲಾದರೆ ಆಹಾರ ಧಾನ್ಯದ ಕೊರತೆಯಾಗಲಿದೆ.

    ಮೋಕಾ-ರೂಪನಗುಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಸುಂಡಿ ನಾಗರಾಜಗೌಡ, ಕಾಂಗ್ರೆಸ್ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಎಂ.ಹನುಮ ಕಿಶೋರ್, ಜಿಲ್ಲಾ ಉಪಾಧ್ಯಕ್ಷೆ ಕುಮಾರಮ್ಮ, ಮುಖಂಡ ಜೆ.ವಿ.ಮಂಜುನಾಥ ಇತರರಿದ್ದರು.

    ದೇಶದಲ್ಲಿ ರಾಜ್ಯದ ವಿಧಾನ ಪರಿಷತ್ ಬಗ್ಗೆ ವಿಶೇಷ ಗೌರವ ಇತ್ತು. ಸದನ ಎಂಬುದು ದೇವಾಲಯವಾಗಿದ್ದು, ದೇವಾಲಯದ ನತೆಗೆ ಕುಂದು ಉಂಟಾಗಿದೆ. ಪಕ್ಷಾತೀತವಾಗಿ ಯಾರೂ ಆ ರೀತಿ ನಡೆದುಕೊಳ್ಳಬಾರದಿತ್ತು. ಸದನದ ಗೌರವ ಉಳಿಸುವಲ್ಲಿ ಸರ್ಕಾರದ ಪಾತ್ರ ಪ್ರಮುಖವಾಗಿದೆ. ವಿಧಾನ ಪರಿಷತ್‌ನಲ್ಲಿ ನಡೆದ ಘರ್ಷಣೆಗೆ ಸರ್ಕಾರವೇ ಹೊಣೆಯಾಗಿದೆ. ಬಿಜೆಪಿಯವರು ಹಿಟ್ಲರ್ ಹಾಗೂ ಗೋಬೆಲ್ಸೃ್ ನೀತಿ ಅನುಸರಿಸುತ್ತಿದ್ದಾರೆ.
    | ವಿ.ಎಸ್.ಉಗ್ರಪ್ಪ ಕೆಪಿಸಿಸಿ ಮಾಧ್ಯಮ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts