More

    ಕೇಂದ್ರ ಸರ್ಕಾರಕ್ಕೆ ಮುಂದುವರಿಯುವ ನೈತಿಕತೆ ಇಲ್ಲ

    ಹಾವೇರಿ: ಕರೊನಾ ಹಾಗೂ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಯಾವ ನೈತಿಕತೆಯೂ ಇಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ ತಿಳಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ದೇಶಗಳಲ್ಲಿ ಲಸಿಕೆಗೆ ಆದ್ಯತೆ ನೀಡಲಾಗಿದೆ. ಆದರೆ, ನಮ್ಮಲ್ಲಿ ಕರೊನಾ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮ ಕೈಗೊಳ್ಳಲಿಲ್ಲ. ಆಕ್ಸಿಜನ್, ರೆಮ್ೆಸಿವರ್, ವೆಂಟಿಲೇಟರ್ ಇನ್ನಿತರ ಅಗತ್ಯ ಔಷಧ, ಮೂಲಸೌಕರ್ಯಗಳಿಲ್ಲದೆ ಜನರು ಸತ್ತಿದ್ದಾರೆ. ಪ್ರಧಾನಿ ಮೋದಿಯವರ ತಪ್ಪಿನಿಂದಾಗಿ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇವೆಲ್ಲದಕ್ಕೂ ಮೋದಿಯವರೇ ನೇರ ಹೊಣೆ. ಲಸಿಕೆ ನೀಡುವಿಕೆಯಲ್ಲೂ ಕೇಂದ್ರ ಸರ್ಕಾರ ವಿಫಲವಾಗಿದೆ. ಪ್ರಧಾನಿ ಮೋದಿ ವಿಶ್ವಗುರುವಾಗುವ ಆತುರದಲ್ಲಿ ಬೇರೆ ದೇಶಗಳಿಗೆ ಲಸಿಕೆ ಕೊಟ್ಟಿದ್ದಾರೆ. ಆದರೆ, ಇಲ್ಲಿಯವರಿಗೆ ಲಸಿಕೆ ಇಲ್ಲದಂತಾಗಿದೆ ಎಂದು ದೂರಿದರು.

    ಬೆಲೆ ಏರಿಕೆ ನಿಯಂತ್ರಣದಲ್ಲೂ ಕೇಂದ್ರ ಸರ್ಕಾರ ವಿಫಲವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿದಾಗಲೂ ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆಯಾಗಲಿಲ್ಲ. ಕರೊನಾ ಸಂಕಷ್ಟದೊಂದಿಗೆ ಬೆಲೆ ಏರಿಕೆಯಿಂದ ಎಲ್ಲ ವರ್ಗದ ಜನರೂ ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯುತ್ ದರವನ್ನೂ ಏರಿಸಲಾಗಿದೆ. ಗ್ಯಾಸ್ ಸಿಲಿಂಡರ್, ಅಡುಗೆ ಎಣ್ಣೆ, ಬೇಳೆಕಾಳು ಎಲ್ಲ ದರ ಗಗನಕ್ಕೇರಿದೆ. ಕೇಂದ್ರ ಸರ್ಕಾರಕ್ಕೆ ಬಡ ಜನರ ಬಗ್ಗೆ ಕಾಳಜಿಯಿಲ್ಲ. ಅಚ್ಛೇ ದಿನ್, ಮನ್ಕಿ ಬಾತ್ ಎಂದು ಹೇಳುತ್ತ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

    ಮಾಜಿ ಸಂಸದ ಐ.ಜಿ. ಸನದಿ, ಪ್ರಮುಖರಾದ ಎ.ಎಂ. ಹಿಂಡಸಗೇರಿ, ರುದ್ರಪ್ಪ ಲಮಾಣಿ, ಮನೋಹರ ತಹಶೀಲ್ದಾರ್, ಬಸವರಾಜ ಶಿವಣ್ಣನವರ, ಬಿ.ಎಚ್. ಬನ್ನಿಕೋಡ, ಶ್ರೀನಿವಾಸ ಮಾನೆ, ಸೋಮಣ್ಣ ಬೇವಿನಮರದ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಕೆಪಿಸಿಸಿ ಕಾರ್ಯದರ್ಶಿ ಡಾ. ಪ್ರಕಾಶಗೌಡ ಪಾಟೀಲ, ಎಚ್. ಜಯಸಿಂಹ, ಎಸ್.ಆರ್. ಪಾಟೀಲ, ಪ್ರಕಾಶ ಕೋಳಿವಾಡ, ಈರಪ್ಪ ಲಮಾಣಿ ಇತರರಿದ್ದರು.

    ಹೊಸ ಆಯ್ಕೆ ಮಾಡಿದರೆ ಸುಮ್ಮನಿರಲ್ಲ

    ಸೂರಿಲ್ಲದವರಿಗೆ ಮನೆ ಕಲ್ಪಿಸಲು ವಸತಿ ಯೋಜನೆಯಲ್ಲಿ ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದ ವೇಳೆ ಹಾವೇರಿ ನಗರದಲ್ಲಿ ಜಿ ಪ್ಲಸ್ 1 ಮಾದರಿಯ 1,112 ಮನೆಗಳ ನಿರ್ವಣಕ್ಕೆ ಮಂಜೂರಾತಿ ದೊರಕಿತ್ತು. ಅದರಂತೆ ಫಲಾನುಭವಿ ಆಯ್ಕೆಯೂ ಆಗಿ ಟೆಂಡರ್ ಕರೆಯಲಾಗಿತ್ತು. ಆದರೆ, ಈಗಿನ ಸ್ಥಳೀಯ ಶಾಸಕರು ಫಲಾನುಭವಿಗಳ ಆಯ್ಕೆಯನ್ನು ಹೊಸದಾಗಿ ಮಾಡಲು ಹೊರಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ರೀತಿ ಹೊಸದಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಅವಕಾಶವಿಲ್ಲ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಎಂ.ಬಿ. ಪಾಟೀಲ, ಇದು ಕಾನೂನು ಉಲ್ಲಂಘನೆಯಾಗುತ್ತದೆ. ಇದನ್ನು ಮಾಡಿದರೆ ಹಗರಣವಾಗುತ್ತದೆ. ಇದನ್ನು ವಿಧಾನಸಭೆ ಅಧಿವೇಶನ ಸೇರಿದಂತೆ ಎಲ್ಲ ಕಡೆ ಆಕ್ಷೇಪ ಮಾಡಲಾಗುವುದು. ಒಮ್ಮೆ ಆಯ್ಕೆಯಾದ ಫಲಾನುಭವಿಗಳನ್ನು ಬಿಟ್ಟು ಹೊಸದಾಗಿ ಆಯ್ಕೆ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts