More

    ರೈತರು, ಕಾರ್ಮಿಕರಿಗೆ ಕೇಂದ್ರದ ಕೊಡುಗೆ: ತಜ್ಞರು ಏನಂತಾರೆ?

    ಬೆಂಗಳೂರು: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ರೈತರು, ಕಾರ್ಮಿಕರು ಮತ್ತು ಇತರ ದುರ್ಬಲ ವರ್ಗದವರಿಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಕೆಲವು ಪರಿಹಾರ ಕ್ರಮಗಳು ಅತ್ಯುತ್ತಮವಾಗಿವೆ ಎಂದು ನಾಡಿನ ಕೆಲವು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗುರುವಾರದ ಸುದ್ದಿಗೋಷ್ಠಿ ನಂತರ ಪ್ರತಿಕ್ರಿಯೆ ನೀಡಿರುವ ಕಲಬುರಗಿಯ ಆರ್ಥಿಕ ತಜ್ಞೆ ಸಂಗೀತಾ ಕಟ್ಟಿ ಅವರು, ದೇಶ ಸ್ವಾವಲಂಬಿಯಾಗಬೇಕೆಂದರೆ ನಮ್ಮಲ್ಲೇ ಕೆಲವು ಸಂರಚನಾ ಬದಲಾವಣೆಗಳನ್ನು (ಸ್ಟ್ರಕ್ಚರಲ್ ಚೇಂಜಸ್) ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಅದಕ್ಕೆ ರಾಜ್ಯ ಸರ್ಕಾರಗಳು ಮತ್ತು ಸಾರ್ವಜನಿಕರು ಸಿದ್ಧರಾಗಬೇಕು ಎಂದು ಹೇಳಿದರು.

    ಇದನ್ನೂ ಓದಿ     VIDEO| ಉಡುಪಿ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ!

    ವಲಸೆ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿರುವುದಿಲ್ಲವಾದ್ದರಿಂದ ಅವರನ್ನು ಗುರುತಿಸಿ ಪರಿಹಾರ ನೀಡುವುದು ಸ್ವಲ್ಪ ಕಷ್ಟವೇ. ಆದರೂ ಒಂದೇ ರಾಷ್ಟ್ರ, ಒಂದು ಕಾರ್ಡ್ ಮತ್ತಿತರ ಕೆಲವು ಕ್ರಮಗಳಿಂದಾಗಿ ಇನ್ನು ಮುಂದಿನ ದಿನಗಳಲ್ಲಿ ಫಲಾನುಭವಿಗಳನ್ನು ಗುರುತಿಸುವುದು ಸುಲಭವಾಗುತ್ತದೆ ಎಂದು ವಿವರಿಸಿದರು.

    ಕರೊನಾ ಬರೀ ಆರ್ಥಿಕ ಸಮಸ್ಯೆ ತಂದೊಡ್ಡಿಲ್ಲ. ಸಾಮಾಜಿಕ ಮತ್ತು ಮಾನಸಿಕ ಸಮಸ್ಯೆಗಳೂ ತಲೆದೋರಿವೆ. ಈಗಾಗಲೇ ಬಹಳಷ್ಟು ಕಾರ್ಮಿಕರು ನಗರಗಳನ್ನು ತೊರೆದು ತಮ್ಮ ತಮ್ಮ ಗ್ರಾಮಗಳಿಗೆ ಮರಳಿದ್ದಾರೆ. ಅವರು ಕೇಂದ್ರದ ಈ ಕೊಡುಗೆಗಳನ್ನು ಗಮನಿಸಿ ಧೈರ್ಯದಿಂದ ಮತ್ತೆ ತಮ್ಮ ಕರ್ತವ್ಯಕ್ಕೆ ಮರಳುವ ಸಾಧ್ಯತೆಗಳು ಅಧಿಕವಾಗಿವೆ ಎಂದು ಅಭಿಪ್ರಾಯಪಟ್ಟರು.

    ವಿಶ್ವನಾಥ ಭಟ್ ಸಮರ್ಥನೆ:
    ದೇಶದ ಕೃಷಿ ಕ್ಷೇತ್ರಕ್ಕೆ, ಅದರಲ್ಲೂ ವಿಶೇಷವಾಗಿ ಸಣ್ಣ ರೈತರಿಗೆ ಇನ್ನೂ ಕೆಲವು ಘೋಷಣೆಗಳು ಕೇಂದ್ರದಿಂದ ನಾಳೆ ಅಥವಾ ನಾಡಿದ್ದರಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ರಾಜ್ಯ ಬಿಜೆಪಿ ಆರ್ಥಿಕ ಪ್ರಕೋಷ್ಟದ ಮುಖ್ಯಸ್ಥ ವಿಶ್ವನಾಥ ಭಟ್ ಹೇಳಿದ್ದಾರೆ.

    ಇದನ್ನೂ ಓದಿ  ವಿವಾದಾತ್ಮಕ ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ರಾಜ್ಯ ಸಚಿವ ಸಂಪುಟ ಅಸ್ತು

    ನಿನ್ನೆ ಮತ್ತು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿರುವ ಘೋಷಣೆಗಳೇ ಅಂತಿಮವಲ್ಲ; ಕೃಷಿ ಕ್ಷೇತ್ರಕ್ಕಾಗಿ ಇನ್ನಷ್ಟು ಘೋಷಣೆಗಳನ್ನು ಮಾಡುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

    ನರಸಿಂಹಯ್ಯ ಟೀಕೆ: ರೈತರ ಬಗ್ಗೆ ನಿರ್ಮಲಾ ಅವರು ಮಾಡಿರುವ ಘೋಷಣೆಗಳಲ್ಲಿ ಏನೇನೂ ಇಲ್ಲ. ಇದರಿಂದ ಕೃಷಿ ಕ್ಷೇತ್ರಕ್ಕೆ ಯಾವ ಸಹಾಯವೂ ಆಗುವುದಿಲ್ಲ. 2700 ಕೋಟಿ ರೂ.ಗಳನ್ನು ಮಾತ್ರ ಬೆಂಬಲ ಬೆಲೆಗಾಗಿ ಕೊಟ್ಟಿದ್ದಾರೆ. ಇದು ತೀರಾ ಕಡಿಮೆ. ಅದು ಚೀಲ ಹೊಲೆಯುವುದಕ್ಕೂ ಸಾಕಾಗುವುದಿಲ್ಲ ಎಂದು ಕೃಷಿ ತಜ್ಞ ನರಸಿಂಹಯ್ಯಅವರು ಅಭಿಪ್ರಾಯಪಟ್ಟಿದ್ದಾರೆ.

    ನಿರ್ಮಲಾ ಸೀತಾರಾಮನ್ ಹೆಚ್ಚು ತಿಳಿದವರಿದ್ದಾರೆ. ಆದರೂ ರೈತರ ವಿಷಯದಲ್ಲಿ ಇಎಂಐ ಎಂಬ ಪದ ಬಳಸಿದ್ದಾರೆ. ರೈತರಿಗೆ ಆದಾಯ ಬರುವುದೇ ಆರು ತಿಂಗಳಿಗೆ, ವರ್ಷಕ್ಕೊಮ್ಮೆ ಮಾತ್ರ. ಅವರಿಗೆ ಇಎಂಐ ಪದವೇ ಅನ್ವಯಿಸುವುದಿಲ್ಲ ಎಂದು ಹೇಳಿದರು.

    ಕರೊನಾಕ್ಕೆ ರಾಜ್ಯದಲ್ಲಿ ಇಬ್ಬರು ವೃದ್ಧರ ಬಲಿ: 28 ಹೊಸ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts