More

    ಸುಶಾಂತ್​ ಸಿಂಗ್​ ರಜಪೂತ್​ ಪ್ರಕರಣ ಬಳಸಿಕೊಂಡು ಕೇಂದ್ರದ ಕ್ಷುಲ್ಲಕ ರಾಜಕಾರಣ

    ನವದೆಹಲಿ: ಬಾಲಿವುಡ್​ ನಟರಾಗಿದ್ದ ಸುಶಾಂತ್​ ಸಿಂಗ್​ ರಜಪೂತ್​ ಅವರ ಆತ್ಮಹತ್ಯೆ ಪ್ರಕರಣವನ್ನು ಬಳಸಿಕೊಂಡು ಬಿಹಾರ ಸರ್ಕಾರದ ನೆರವಿನಿಂದ ಕೇಂದ್ರ ಸರ್ಕಾರ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ಅಲ್ಲದೆ, ಆ ಕಳಂಕವನ್ನು ಉದ್ಧವ್​ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರಕ್ಕೆ ಅಂಟಿಸಲು ಹುನ್ನಾರ ನಡೆಸಿದೆ ಎಂದು ಶಿವಸೇನೆಯ ಮುಖಂಡ ಸಂಜಯ್​ ರಾವತ್​ ಆರೋಪಿಸಿದ್ದಾರೆ.

    ಭಾನುವಾರ ಸುದ್ದಿಗಾರರ ಜತೆ ಮಾತನಾಡಿರುವ ಅವರು ಸುಶಾಂತ್​ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸುವ ಸಾಮರ್ಥ್ಯ ಮುಂಬೈ ಪೊಲೀಸರಿಗಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಅಳಿಯನ ಕಿರುಕುಳ ತಾಳದ ತಂದೆ ನೇಣಿಗೆ ಕೊರಳೊಡ್ಡಿದ… ತಂದೆಯ ಸಾವನ್ನು ಅರಗಿಸಿಕೊಳ್ಳದ ಮಕ್ಕಳು ರೈಲಿಗೆ ತಲೆಯೊಡ್ಡಿದರು.

    ಸುಶಾಂತ್​ ಪ್ರಕರಣದ ಕುರಿತು ಬಿಹಾರ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ. ಇದಕ್ಕೂ ಮೊದಲೇ ಮುಂಬೈ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದರು. ಒಂದೇ ಪ್ರಕರಣದ ತನಿಖೆಯನ್ನು ಎರಡು ಪೊಲೀಸ್​ ಪಡೆಯವರು ಮಾಡಿದರೆ ಗೊಂದಲ ಉಂಟಾಗಿ ಆಯೋಮಯ ಸ್ಥಿತಿ ನಿರ್ಮಾಣವಾಗಬಹುದು ಎಂದು ಮುಂಬೈ ಪೊಲೀಸರು ಸುಪ್ರೀಂಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಿದ ಬೆನ್ನಲ್ಲೇ ಸಂಜಯ್​ ರಾವತ್​ ಈ ಹೇಳಿಕೆ ನೀಡಿರುವುದು ಗಮನಾರ್ಹ.

    ಬಿಹಾರ ಸರ್ಕಾರ ಮನವಿ ಮಾಡಿಕೊಂಡಿತು ಎಂಬ ಒಂದೇ ಕಾರಣಕ್ಕಾಗಿ ಸಿಬಿಐ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದಲ್ಲಿ ಎಫ್​ಐಆರ್​ ದಾಖಲಿಸಿಕೊಳ್ಳಬಾರದಿತ್ತು ಎಂದು ಮುಂಬೈ ಪೊಲೀಸರು ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದರು ಎನ್ನಲಾಗಿದೆ.

    ಮರ್ಯಾದೆಗೇಡು ಹತ್ಯೆ ಮಾಡಿ ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಯತ್ನ; ಪೊಲೀಸರಿಗೆ ಸಿಕ್ಕಿದ್ದಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts