More

    ಸರ್ಕಾರಿ ಮಾದರಿ ಶಾಲೆಗೆ ಶತಮಾನೋತ್ಸವ ಸಂಭ್ರಮ

    ಹೊಸನಗರ: ಸರ್ಕಾರಿ ಶಾಲೆಗಳು ಎಂದರೆ ವಿದ್ಯಾರ್ಥಿಗಳು ಬರೋದಿಲ್ಲ ಎಂಬ ಮಾತಿದೆ. ಆದರೆ ಅಪವಾದ ಎಂಬಂತೆ ಇಲ್ಲೊಂದು ಶಾಲೆ ದಾಖಲೆಯ 430 ವಿದ್ಯಾರ್ಥಿಗಳನ್ನು ಹೊಂದಿದೆ. ವಿಶೇಷ ಎಂದರೆ ಈ ಶಾಲೆ ಇದೀಗ ಶತಮಾನೋತ್ಸವ ಸಂಭ್ರಮದಲ್ಲಿದೆ.

    ಖಾಸಗಿ ಶಾಲೆಗಳ ಆರ್ಭಟದ ನಡುವೆಯೂ ಸರ್ಕಾರಿ ಶಾಲೆಯ ಮಹತ್ವ ಸಾರುತ್ತ ಅಭಿವೃದ್ಧಿಯ ಪಥದಲ್ಲಿರುವ ಈ ಶಾಲೆಯೇ ಹೊಸನಗರದ ಹೃದಯ ಭಾಗದಲ್ಲಿರುವ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
    ಶಾಲೆಯ ವಿಶೇಷತೆ: ದಾಖಲೆಯ 430 ವಿದ್ಯಾರ್ಥಿಗಳ ಕಲಿಕೆ. ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಬೋಧನೆ. ಪ್ರತಿ 30 ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗ. ಶಿಶು ಸ್ನೇಹಿ ಪೀಠೋಪಕರಣಗಳ ವ್ಯವಸ್ಥೆ. ಅನುಭವಿ ವಿಷಯವಾರು ತರಬೇತಿ ಹೊಂದಿದ ಬೋಧಕ ವೃಂದ, ಪ್ರತಿ ಕೊಠಡಿಯಲ್ಲಿ ಇಂಟರ್ ನೆಟ್ ಸೌಲಬ್ಯ ಮತ್ತು ಟಿವಿ ಅಳವಡಿಕೆ, ಆಂಗ್ಲ ಮಾಧ್ಯಮದಲ್ಲಿ ಎಲ್ಕೆಜಿ, ಯುಕೆಜಿ ಶಿಕ್ಷಣ, ಸುಸಜ್ಜಿತ ಗ್ರಂಥಾಲಯ, ಪ್ರತಿ ವಿದ್ಯಾರ್ಥಿಗೆ ನಾಯಕತ್ವ ತರಬೇತಿ, ಉಚಿತವಾಗಿ ನವೋದಯ ಶಾಲೆ ಪ್ರವೇಶ ಪರೀಕ್ಷೆ ತರಬೇತಿ, 7ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳನ್ನು ಈ ಶಾಲೆ ಸಾಕಾರಗೊಳಿಸಿದೆ.
    ಸ್ಕೂಲ್ ಬಸ್ ಸೌಲಭ್ಯ!: ಶಾಲಾ ವಾಹನಗಳೆಂದರೆ ಖಾಸಗಿ ಶಾಲೆಗೆ ಸೀಮಿತ ಎಂಬಂತಿದೆ. ಆದರೆ ಈ ಮಾದರಿ ಶಾಲೆ ಅದರಲ್ಲೂ ಹಿಂದೆ ಬಿದ್ದಿಲ್ಲ. ದೂರದ ಹಳ್ಳಿಗಳಿಂದ ಬರುವ ಮಕ್ಕಳಿಗೆ ಸುಗಮವಾಗುವಂತೆ ಶಾಲಾ ವಾಹನದ ವ್ಯವಸ್ಥೆಯನ್ನು ಕಲ್ಪಿಸಿ, ಈ ವ್ಯವಸ್ಥೆ ಹೊಂದಿರುವ ಏಕೈಕ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts