More

    ಸಂಭ್ರಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ

    ಅರಸೀಕೆರೆ ಗ್ರಾಮಾಂತರ: ತಾಲೂಕಿನ ಜಾವಗಲ್ ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದಿವ್ಯ ರಥೋತ್ಸವ ಸಡಗರ, ಸಂಭ್ರಮದ ನಡುವೆ ಗುರುವಾರ ಅದ್ದೂರಿಯಾಗಿ ನೆರವೇರಿತು.

    ಬೆಳಗ್ಗೆಯಿಂದ ಮೂಲ ವಿಗ್ರಹಕ್ಕೆ ಅಭಿಷೇಕ ನಡೆಸಿ ಪುಷ್ಪಾಲಂಕರ ಮಾಡಿ ಪೂಜಾ ವಿಧಿವಿಧಾನ ನೆರವೇರಿಸಲಾಯಿತು. ಮಧ್ಯಾಹ್ನ ಶೃಂಗರಿಸಿದ ರಥದಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವರನ್ನು ಕುಳ್ಳಿರಿಸಿ ಭಕ್ತರ ಜಯಘೋಷದ ನಡುವೆ ಮೆರವಣಿಗೆ ನಡೆಸಲಾಯಿತು. ಭಕ್ತರು ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸುತ್ತ ರಥವನ್ನು ಎಳೆದರು.

    ಅರ್ಚಕ ಶ್ರೀವತ್ಸಾ ಪೂಜಾ ವಿಧಿವಿಧಾನ ನೆರವೇರಿಸಿದರು. ದೇವಾಲಯ ಆವರಣದಲ್ಲಿ ರಾಮಯ್ಯ ಕುಟುಂಬದವರಿಂದ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

    ತಾಲೂಕು ಆಡಳಿತಾಧಿಕಾರಿ ವೆಂಕಟೇಶ್, ಗ್ರಾಮ ಆಡಳಿತಾಧಿಕಾರಿ ಶಿವಾನಂದನಾಯ್ಕ, ಪಿಡಿಒ ರವಿ, ಸುದರ್ಶನ್, ಜಯಸಿಂಹ, ನರಸಿಂಹಸ್ವಾಮಿ, ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts