More

    ಕೆಲ ಹೊತ್ತಿನಲ್ಲೇ ಕೋರ್ಟ್​ ಮುಂದೆ ಸಿಡಿ ಲೇಡಿ ಹಾಜರ್!

    ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಯುವತಿ ಇಂದು 24ನೇ ಎಸಿಎಂಎಂ ಕೋರ್ಟ್​ಗೆ ಬಂದು ಹೇಳಿಕೆ ಕೊಡುವ ಸಾಧ್ಯತೆ ದಟ್ಟವಾಗಿದ್ದು, ಬಳಿಕ ಈ ಪ್ರಕರಣ ಹೊಸ ತಿರುವು ಪಡೆದುಕೊಳ್ಳಲಿದೆ.

    ಮತ್ತೊಂದೆಡೆ ಎಸ್‌ಐಟಿ ಈಗಾಗಲೇ 8 ಬಾರಿ ಯುವತಿಗೆ ನೋಟಿಸ್ ಜಾರಿ ಮಾಡಿದ್ದು, ಆಕೆ ವಿಚಾರಣೆಗೆ ಹಾಜರಾದ ಬಳಿಕ ಆಕೆಯ ಹೇಳಿಕೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ.

    ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಇಬ್ಬರು ಮಾಜಿ ಪತ್ರಕರ್ತರು, ಯುವತಿಯ ಪ್ರಿಯಕರ, ಕಿಂಗ್‌ಪಿನ್ ನರೇಶ್ ಗೌಡ ಪತ್ನಿ, ಯುವತಿಯ ಪಾಲಕರು ಸೇರಿ ಹಲವರನ್ನು ವಿಚಾರಣೆ ನಡೆಸಿ ಅವರ ಹೇಳಿಕೆಯನ್ನ ಎಸ್​ಐಟಿ ದಾಖಲಿಕೊಂಡಿದೆ. ಇದನ್ನೂ ಓದಿರಿ ಬೆಳಗಾವಿ ಇಂದು ರಮೇಶ್ ಜಾರಕಿಹೊಳಿ ಭೇಟಿ? 60ಕ್ಕೂ ಹೆಚ್ಚು ಕಾರುಗಳಲ್ಲಿ ಬಂದಿದ್ದಾರೆ ಬೆಂಬಲಿಗರು

    ಯುವತಿ ಹೇಳಿಕೆ ಬಳಿಕ ಎಸ್‌ಐಟಿ ಮುಂದಿನ ಕ್ರಮ ತೆಗೆದುಕೊಳ್ಳಲಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ತನಿಖಾಧಿಕಾರಿಗಳು ನಿರಾಕರಿಸಿದ್ದಾರೆ. ಇದೀಗ ಪ್ರಕರಣದ ಬಗ್ಗೆ ಯುವತಿ ಯಾವ ರೀತಿಯ ಹೇಳಿಕೆ ಕೊಡುತ್ತಾಳೆ ಎಂಬುದರ ಆಧಾರದ ಮೇಲೆ ತನಿಖೆ ಮುಂದೆ ಸಾಗಲಿದೆ.

    ಯುವತಿಯ ಪಾಲಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ನೇರವಾಗಿ ಆರೋಪ ಮಾಡಿದರೆ, ಸಿಡಿ ಲೇಡಿ ಮಾತ್ರ ರಮೇಶ್ ಜಾರಕಿಹೊಳಿ ವಿರುದ್ಧ ಆರೋಪಿಸುತ್ತಿದ್ದಾಳೆ. ಯುವತಿ ಪಾಲಕರು ‘ಇದಕ್ಕೆಲ್ಲಾ ಡಿಕೆಶಿಯೇ ಕಾರಣ. ಪ್ರಕರಣ ಬೆಳಕಿಗೆ ಬಂದ ಕೂಡಲೇ ಯುವತಿಗೆ ಹಣ ಕೊಟ್ಟು ಗೋವಾಕ್ಕೆ ಕಳುಹಿಸಿದ್ದಾರೆ’ ಎಂದು ಡಿಕೆಶಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

    ಇದಾದ ಕೆಲವೇ ನಿಮಿಷಗಳಲ್ಲಿ ಅಜ್ಞಾತ ಸ್ಥಳದಿಂದ ವಿಡಿಯೋ ಹರಿಯಬಿಟ್ಟ ಯುವತಿ ಪಾಲಕರಿಗೆ ಏನೂ ತಿಳಿದಿಲ್ಲ. ಸ್ವ-ಇಚ್ಚೆಯಿಂದ ಪಾಲಕರು ಹೀಗೆ ಹೇಳಲು ಸಾಧ್ಯವಿಲ್ಲ. ಅವರನ್ನು ಬೆದರಿಸಿ ಈ ರೀತಿ ಹೇಳಿಸಿದ್ದಾರೆ ಎಂದು ಡಿಕೆಶಿ ಪರ ಆರೋಪವನ್ನು ತಳ್ಳಿ ಹಾಕಿದ್ದಾಳೆ.

    ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ರಮೇಶ್ ಕುಮಾರ್, ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ನನಗೆ ರಕ್ಷಣೆ ನೀಡಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಸಹಾಯ ಮಾಡಬೇಕು ಎಂದು ಕೋರಿಕೊಂಡಿದ್ದಳು. ಇದೀಗ ಪಾಲಕರು ಹಾಗೂ ಯುವತಿ ನೀಡಿರುವ ಹೇಳಿಕೆಯಿಂದ ತನಿಖಾಧಿಕಾರಿಗಳಲ್ಲಿ ಗೊಂದಲ ಉಂಟಾಗಿದೆ.

    ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

    ಬೆಳಗಾವಿ ಇಂದು ರಮೇಶ್ ಜಾರಕಿಹೊಳಿ ಭೇಟಿ? 60ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ ಬೆಂಬಲಿಗರು

    ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts