More

    ಚಳಗೇರಿ-ಕರೂರ ರಸ್ತೆಯಲ್ಲಿ ಕುಸಿದ ಸಿ.ಡಿ. ಅಪಾಯದಲ್ಲೇ ಮಕ್ಕಳ ಸಂಚಾರ

    ರಾಣೆಬೆನ್ನೂರ: ತಾಲೂಕಿನ ಚಳಗೇರಿ-ಕರೂರ ಮುಖ್ಯ ರಸ್ತೆಗೆ ಅಡ್ಡಲಾಗಿ ನಿರ್ವಿುಸಿದ ಸಿಡಿ ಕುಸಿದು ಬಿದ್ದಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು ಅಪಾಯದಲ್ಲೇ ಓಡಾಡುವಂತಾಗಿದೆ.

    ಗ್ರಾಪಂ ಸುವರ್ಣ ಗ್ರಾಮ ಯೋಜನೆಯಡಿ ಸಿಡಿ (ಅಡ್ಡಚರಂಡಿ) ನಿರ್ವಿುಸಲಾಗಿತ್ತು. ನಿರಂತರ ವಾಹನ ಓಡಾಟದಿಂದ ಮೂರು ತಿಂಗಳ ಹಿಂದೆ ಒಂದು ಬದಿಯಲ್ಲಿ ಸಿಡಿ ಕುಸಿದಿತ್ತು. ಮಳೆಯಿಂದ ಇದೀಗ ಮತ್ತೊಂದು ಬದಿಯಲ್ಲೂ ಕುಸಿದು ಬಿದ್ದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

    ಈ ರಸ್ತೆ ಮಾರ್ಗವಾಗಿ ಕರೂರ ಗ್ರಾಮಕ್ಕೆ ತೆರಳುವ ಬಸ್, ಕಾರು, ಟ್ರ್ಯಾಕ್ಟರ್, ಎತ್ತಿನ ಬಂಡಿಗಳು ಸೇರಿ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತವೆ. ಸಿಡಿ ಕುಸಿದಿದ್ದರಿಂದ ಇದೀಗ ವಾಹನ ಸಂಚಾರ ಸ್ಥಗಿತಗೊಂಡಿದೆ. ಇರುವ ಸಣ್ಣ ಜಾಗದಲ್ಲಿ ವಿದ್ಯಾರ್ಥಿಗಳು ಹಾಗೂ ಬೈಕ್ ಸವಾರರು ಓಡಾಡುತ್ತಿದ್ದಾರೆ.

    ಮಳೆಯಿಂದ ರಸ್ತೆಯುದ್ದಕ್ಕೂ ಕೆಸರು ತುಂಬಿಕೊಂಡಿದ್ದು, ಕಾಲು ಜಾರಿ ವಿದ್ಯಾರ್ಥಿಗಳು ಬಿದ್ದರೆ ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಅಲ್ಲದೆ, ಕರೂರ ರಸ್ತೆ ಬಂದ್ ಆಗಿದ್ದರಿಂದ ವಾಹನಗಳು ಗ್ರಾಪಂ ಎದುರಿನ ರಸ್ತೆಯಲ್ಲಿ ಓಡಾಡಬೇಕಿದೆ. ಆದರೆ, ಈ ರಸ್ತೆ ಚಿಕ್ಕದಿರುವ ಕಾರಣ ಕಾರು, ಬಸ್ ಓಡಾಡಲು ತೀವ್ರ ತೊಂದರೆ ಎದುರಾಗಿದೆ. ಆದ್ದರಿಂದ ಗ್ರಾಪಂ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಸಿಡಿ ದುರಸ್ತಿ ಪಡಿಸುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಗ್ರಾಮದ ಚಳಗೇರಿ-ಕರೂರ ಮುಖ್ಯ ರಸ್ತೆಯ ಸಿಡಿ ಒಡೆದು ಹೋಗಿದ್ದರಿಂದ ಸಾರ್ವಜನಿಕರ ವಾಹನ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಿಡಿ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ.

    | ಶಿವನಗೌಡ ಪಾಟೀಲ, ಗ್ರಾಮಸ್ಥ

    ಚಳಗೇರಿ-ಕರೂರ ರಸ್ತೆಯ ಸಿಡಿ ಕುಸಿದು ಬಿದ್ದಿರುವುದನ್ನು ಪರಿಶೀಲಿಸಲಾಗಿದೆ. ಈ ಬಾರಿಯ 15ನೇ ಹಣಕಾಸಿನಲ್ಲಿ ಸಿಡಿ ದುರಸ್ತಿ ಮಾಡಲಾಗುವುದು.

    | ವೆಂಕಟೇಶ ಉಕ್ಕಡಗಾತ್ರಿ, ಗ್ರಾಪಂ ಪಿಡಿಒ ಚಳಗೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts