More

    ಪೊಲೀಸರಿಂದ ತಪ್ಪಿಸಿಕೊಳ್ಳಲು ಸಿಗ್ನಲ್ ಆ್ಯಪ್ ಬಳಸುತ್ತಿರುವ ಸಿಡಿ ಪ್ರಕರಣದ ಕಿಂಗ್‌ಪಿನ್‌ಗಳು!

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣ ಬಹಿರಂಗವಾದ ಬಂದ ಬಳಿಕ 20 ದಿನಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಕಿಂಗ್‌ಪಿನ್‌ಗಳು ಗೌಪ್ಯ ಸಂವಹನಕ್ಕೆ ‘ಸಿಗ್ನಲ್’ ಆ್ಯಪ್ ಮೆಸೆಂಜರ್ ಬಳಸುತ್ತಿದ್ದಾರೆ ಎಂಬ ಸಂಗತಿ ವಿಶೇಷ ತನಿಖಾ ದಳದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಸಿಡಿ ಸ್ಫೋಟದ ಮಾಸ್ಟರ್ ಮೈಂಡ್ ಎನ್ನಲಾದ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತರು ಮತ್ತು ವಿವಾದಿತ ಯುವತಿ ಎಸ್‌ಐಟಿ ಗಾಳಕ್ಕೆ ಸಿಲುಕದಂತೆ ಹೊರ ರಾಜ್ಯಗಳಲ್ಲಿ ಭೂಗತವಾಗಿದ್ದಾರೆ. ಈ ಪ್ರಕರಣದ ಸಂಬಂಧ ಎಸ್‌ಐಟಿ ತನಿಖೆ ಸೇರಿದಂತೆ ಬೆಂಗಳೂರಿನಲ್ಲಿ ನಡೆದಿರುವ ಬೆಳವಣಿಗೆ ಹಾಗೂ ಹೊರ ರಾಜ್ಯಗಳಲ್ಲಿ ಸುರಕ್ಷಿತ ಆಶ್ರಯ ತಾಣಗಳ ಪಡೆಯುವ ಸಲುವಾಗಿ ಮಾತುಕತೆಗೆ ಅವರು ‘ಸಿಗ್ನಲ್’ ಆ್ಯಪ್ ಬಳಸುತ್ತಿದ್ದಾರೆ.

    ಇದನ್ನೂ ಓದಿ: ಥಲೈವಿ ಟ್ರೈಲರ್ ಬಿಡುಗಡೆ: ಜಯಲಲಿತಾ ಪಾತ್ರದಲ್ಲಿ ಮಿಂಚಿದ ಕಂಗನಾ ರನೌಟ್

    ಮೊಬೈಲ್ ಕರೆಗಳು ಹಾಗೂ ವಾಟ್ಸ್‌ಆ್ಯಪ್ ಬಳಸಿದರೆ ಪೊಲೀಸರಿಗೆ ತಮ್ಮ ಇರುವಿಕೆಯ ಸ್ಥಳದ ಜಾಡು ಸಿಗುತ್ತದೆ ಎಂದು ಎಚ್ಚರಿಕೆವಹಿಸಿರುವ ಸಿಡಿ ಸ್ಫೋಟದ ಗುಂಪು, ತನಿಖಾ ತಂಡಗಳಿಗೆ ಸಿಗ್ನಲ್ ಆ್ಯಪ್ ಬಳಸುವ ಮೂಲಕ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅಂದಹಾಗೇ ಸಿಗ್ನಲ್ ಆ್ಯಪ್​ 50 ಮಿಲಿಯನ್ ಡೌನ್ಲೋಡ್​ಗಳನ್ನು ಗೂಗಲ್ ಪ್ಲೆ ಸ್ಟೋರ್​ನಲ್ಲಿ ಕಂಡಿದೆ. ಸಂದೇಶಗಳ ಸುರಕ್ಷತೆಗೆ ಮೊದಲ ಪ್ರಾಧಾನ್ಯತೆ ಎಂದು ಈ ಆ್ಯಪ್ ಹೇಳಿಕೊಂಡಿದೆ. (ವಿಜಯವಾಣಿ).

    ಲಾಕ್‌ಡೌನ್‌ ಅವಧಿಯಲ್ಲಿನ ಬಡ್ಡಿ, ಚಕ್ರಬಡ್ಡಿ ಮನ್ನಾ ವಿವಾದ: ಸುಪ್ರೀಂ‌ಕೋರ್ಟ್‌ ಏನು ಹೇಳಿದೆ ನೋಡಿ…

    ಥಲೈವಿ ಟ್ರೈಲರ್ ಬಿಡುಗಡೆ: ಜಯಲಲಿತಾ ಪಾತ್ರದಲ್ಲಿ ಮಿಂಚಿದ ಕಂಗನಾ ರನೌಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts