More

    ಸಿದ್ದು-ಡಿಕೆಶಿ ಜತೆ ಲಕ್ಷ್ಮೀ ಏಕಾಂತ ಮಾತುಕತೆ! ಸಿಎಂಗೆ ಲಕ್ಷ್ಮೀ ಬ್ಲಾಕ್​ಮೇಲ್​ ಮಾಡ್ತಾರಾ..?

    ಬೆಂಗಳೂರು: ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣ ಹಾಗೂ 6 ಸಚಿವರು ಕೋರ್ಟ್​ಗೆ ಮೊರೆ ಹೋಗಿ ನಿರ್ಬಂಧಕಾಜ್ಞೆ ತಂದ ವಿಚಾರವಾಗಿ ಮೇಲ್ಮನೆಯಲ್ಲಿ ಸೋಮವಾರ ಪ್ರತಿಪಕ್ಷಗಳ ನಾಯಕರು ಆಕ್ಷೇಪಿಸಿದರು. ಎಸ್​ಐಟಿ ಸಿಡಿ ಪ್ರಚಾರಕರ ಬೆನ್ನುಹಿಂದೆ ಬಿದ್ದಿದೆ, ಸಂತ್ರಸ್ತ ಯುವತಿಗೆ ಅನ್ಯಾಯ ಆಗಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿಲ್ಲ. ಈ ಸಿಡಿ ಅಸಲಿಯೋ- ನಕಲಿಯೋ ಮೊದಲು ಆ ಬಗ್ಗೆ ತನಿಖೆ ಮಾಡಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಮಾಜಿ ಸಿಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಜತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಪ್ರತ್ಯೇಕವಾಗಿ ಏಕಾಂತ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

    ವಿಪಕ್ಷ ನಾಯಕರ ಕೊಠಡಿಯಲ್ಲಿ ಅರ್ಧಗಂಟೆ ಕಾಲ ಚರ್ಚೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಸಿಡಿ ಕೇಸ್ ಕುರಿತಾಗಿ ಸಿದ್ದರಾಮಯ್ಯ ಮಾಡಿದ್ದ ಅರ್ಗ್ಯುಮೆಂಟ್​ ಬಗ್ಗೆ ಅಭಿನಂದನೆ ಸಲ್ಲಿಸಿದರು. ಈ ಕೇಸ್​ನಲ್ಲಿ ಸುಖಾಸುಮ್ಮನೆ ನನ್ನ ಹೆಸರನ್ನು ಎಳೆದು ತರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿರಿ ಬಸ್​-ಆಟೋ ನಡುವೆ ಭೀಕರ ಅಪಘಾತ: 13 ಮಂದಿ ಸಾವು, ಹಲವರ ಸ್ಥಿತಿ ಗಂಭೀರ

    ಬಳಿಕ ಡಿಕೆಶಿ ಜತೆ ಪ್ರತ್ಯೇಕ ಮಾತುಕತೆ ನಡೆಸಲು ಬಂದ ಲಕ್ಷ್ಮೀ ಹೆಬ್ಬಾಳ್ಕರ್​ರನ್ನು ‘ಏನ್ರೀ ಸಿಎಂನ ಬ್ಲಾಕ್​ಮೇಲ್​ ಮಾಡ್ತಿದ್ದೀರಂತೆ?’ ಎಂದು ಡಿಕೆಶಿ ಹಾಸ್ಯಭರಿತವಾಗಿ ಕೇಳಿದರು. ಇದಕ್ಕುತ್ತರಿಸಿದ ಲಕ್ಷ್ಮೀ, ‘ಸರ್ ನಾನೇಕೆ ಬ್ಲಾಕ್​ಮೇಲ್ ಮಾಡ್ಲಿ. ಯಾರು ಹೇಳಿದ್ದು?’ ಎಂದರು. ‘ನಿಮ್ಮ ನಾಯಕ ಬಸನಗೌಡ ಪಾಟೀಲ್ ಯತ್ನಾಳ್. ನಿಮ್ಮ ಸಮುದಾಯದ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ನಾಯಕ’ ಎಂದು ಡಿಕೆಶಿ ಛೇಡಿಸಿದರು. ‘ಓ ಅವರಾ! ಅವರು ಎಲ್ಲ ಹೇಳ್ತಾರೆ ಬಿಡಿ. ಕ್ಷೇತ್ರದ ಕೆಲಸ ಮಾಡಿಸಿಕೊಂಡ್ರೆ ಬ್ಲಾಕ್​ಮೇಲ್ ಮಾಡಿದಂತೆ ಆಗುತ್ತಾ?’ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳುತ್ತಿದ್ದಂತೆ ‘ಮತ್ತೆ ನಾನು ಸದನದಲ್ಲಿ ಪ್ರಸ್ತಾಪ ಮಾಡಿದಾಗ ನೀವು ಇದಕ್ಕೆ ಧ್ವನಿ ಗೂಡಿಸಲಿಲ್ಲ…’ ಎಂದು ಡಿಕೆಶಿ ಹೇಳಿದರು. ‘ಸರ್ ದೊಡ್ಡವರು ಮಾತನಾಡುವಾಗ ಸಣ್ಣವರು ಮಧ್ಯಪ್ರವೇಶ ಮಾಡಬಾರದು ಎಂದು ಸುಮ್ಮನಿದ್ದೆ’ ಎಂದು ಲಕ್ಷ್ಮೀ ಸಮಜಾಯಿಷಿ ಕೊಟ್ಟರು.

    ಎರಡು ಮಕ್ಕಳ ತಾಯಿ ಆತ್ಮಹತ್ಯೆ! ಇಂಥ ನೀಚ ಕೆಲಸಕ್ಕೆ ಇಳಿದನಾ ಗಂಡ?

    ಒಬ್ಬನೊಂದಿಗೇ ಅಮ್ಮ-ಮಗಳ ಅಕ್ರಮ ಸಂಬಂಧ! ಪ್ರಿಯಕರನೊಟ್ಟಿಗೆ ಆ ರಾತ್ರಿ ನಡೆಯಿತು ಘೋರ ಕೃತ್ಯ

    ಪತಿಯನ್ನ ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ! ಬೇಲ್​ ಮೇಲೆ ಹೊರ ಬಂದವಳಿಂದ ಮತ್ತೊಂದು ನೀಚ ಕೃತ್ಯ

    ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts