More

    ಸಿಡಿ ಕೇಸ್​ನ​ ಆರೋಪಿ ಸಹೋದರ ನಾಪತ್ತೆ: ಎಸ್​ಐಟಿಗೆ ಹೈಕೋರ್ಟ್​ ನೋಟಿಸ್​

    ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣದ ಆರೋಪಿ ಹ್ಯಾಕರ್ಸ್ ಸೋದರ ಚೇತನ್ ನಾಪತ್ತೆ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡಕ್ಕೆ(ಎಸ್ಐಟಿ) ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

    ಸಿಡಿ ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲದಿದ್ದರೂ ತಮ್ಮ ಪುತ್ರನನ್ನು ಎಸ್ಐಟಿ ಪೊಲೀಸರು ಅಕ್ರಮ ಬಂಧನದಲ್ಲಿರಿಸಿದ್ದು, ಆತನನ್ನು ನ್ಯಾಯಾಲಯದ ಎದರು ಹಾಜರುಪಡಿಸುವಂತೆ ಕೋರಿ ಚೇತನ್ ತಂದೆ ಸೂರ್ಯಕುಮಾರ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಯನ್ನ ಹೈಕೋರ್ಟ್​ ಶುಕ್ರವಾರ ನಡೆಸಿತು. ಇದನ್ನೂ ಓದಿರಿ ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

    ಪ್ರಕರಣಕ್ಕೆ ಸಂಬಂಧವಿಲ್ಲದ ಚೇತನ್‌ನನ್ನು ಪೊಲೀಸರು ವಿಚಾರಣೆಗೆಂದು ಕರೆಸಿಕೊಂಡಿದ್ದರು. ಮಾ.16ರಿಂದ ಚೇತನ್ ನಾಪತ್ತೆಯಾಗಿದ್ದು, ಆತನನ್ನು ಅಕ್ರಮ ಬಂಧನದಲ್ಲಿ ಇರಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರ ಎ.ಎಸ್.ಪೊನ್ನಣ್ಣ ವಾದಿಸಿದರು.

    ಚೇತನ್​ನನ್ನು ಬಂಧಿಸಿಲ್ಲ. ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಪೊಲೀಸರು ಸೂಚಿಸಿದ್ದರು. ಅದರಂತೆ ವಿಚಾರಣೆಗೆ ಹಾಜರಾಗಿದ್ದಾರೆ. ಮಾ.20ಕ್ಕೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಸದ್ಯ ಎಲ್ಲಿದ್ದಾರೆಂದು ತಿಳಿದಿಲ್ಲ ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದರು.

    ಈ ಕುರಿತು ಪ್ರಮಾಣಪತ್ರ ಸಲ್ಲಿಸುವುದಾಗಿ ಸರ್ಕಾರದ ಪರ ವಕೀಲರು ಹೇಳಿದ ಹಿನ್ನೆಲೆಯಲ್ಲಿ ಸಂಜೆ 4.15ಕ್ಕೆ ಹೈಕೋರ್ಟ್ ವಿಚಾರಣೆ ಮುಂದೂಡಿತು.

    ಸಿಡಿ ಕೇಸ್​ನ ಯುವತಿ ನನ್ನ ಮನೆಗೆ ಬಂದದ್ದು ನಿಜ, ನ್ಯಾಯ ಕೊಡಿಸುವ ಮುನ್ನವೇ ಆಗಬಾರದ್ದು ಆಯ್ತು: ನರೇಶ್​ಗೌಡ

    ಒಬ್ಬನೊಂದಿಗೇ ಅಮ್ಮ-ಮಗಳ ಅಕ್ರಮ ಸಂಬಂಧ! ಪ್ರಿಯಕರನೊಟ್ಟಿಗೆ ಆ ರಾತ್ರಿ ನಡೆಯಿತು ಘೋರ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts