More

    ಸಿಬಿಎಸ್​ಇ ಪರೀಕ್ಷೆಗಳಲ್ಲಿ ಬದಲಾವಣೆಯಾಗಿದೆಯಾ? ಗೊಂದಲಗಳಿಗೆ ಕೇಂದ್ರ ಸಚಿವರೇ ನೀಡಿದ್ದಾರೆ ಸ್ಪಷ್ಟನೆ

    ನವದೆಹಲಿ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿರುವ ಕಾರಣ ವಿದ್ಯಾರ್ಥಿಗಳು ಮುಖ್ಯವಾಗಿ ಚಿಂತಿತರಾಗಿರುವುದು ಪರೀಕ್ಷೆ ಯಾವಾಗ ಎಂಬ ಬಗ್ಗೆ.

    ಎಲ್ಲ ಶಿಕ್ಷಣ ಮಂಡಳಿಗಳು, ಶಿಕ್ಷಣ ಸಚಿವರು ಹೇಳುತ್ತಿರುವುದು ಕೂಡ ಒಂದೇ ಮಾತು. ಲಾಕ್​ಡೌನ್​ ತೆರವಾದ ಬಳಿಕಷ್ಟೇ ನಿರ್ಧಾರ ಹಾಗೂ ವೇಳಾಪಟ್ಟಿ ಪ್ರಕಟವಾಗಲಿದೆ. ಆದರೆ, ಇದರ ಮಧ್ಯೆ ಹಲವು ಗೊಂದಲಗಳು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್​ಇ) ವಿದ್ಯಾರ್ಥಿಗಳನ್ನು ಕಾಡುತ್ತಿದೆ.

    10ನೇ ಹಾಗೂ 12ನೇ ತರಗತಿಯ ಸಿಬಿಎಸ್​ಸಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸುವ ಮುನ್ನವೇ ಪರೀಕ್ಷೆ ಆರಂಭವಾಗಿತ್ತು. ಕೆಲ ವಿಷಯಗಳಲ್ಲಷ್ಟೇ ಪರೀಕ್ಷೆ ಬಾಕಿಯಾಗಿದೆ. ಹೀಗಾಗಿ ಸಿಬಿಎಸ್​ಸಿ ಏಪ್ರಿಲ್​ 1ರಂದು ಅಧಿಸೂಚನೆಯನ್ನು ಹೊರಡಿಸಿ, ಮುಂದಿನ ತರಗತಿಗೆ ಪಾಸಾಗಲು ಅಗತ್ಯವಿರುವ ಮುಖ್ಯ ವಿಷಯಗಳಲ್ಲಷ್ಟೇ ಪರೀಕ್ಷೆ ನಡೆಸಲಾಗುವುದು ಎಂದು ಮಂಡಳಿ ತಿಳಿಸಿತ್ತು. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಖ್ರಿಯಾಲ್​ ಕೂಡ ಸ್ಪಷ್ಟಪಡಿಸಿದ್ದಾರೆ.

    ಸಿಬಿಎಸ್​ಸಿ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಳಿದಿರುವ ವಿಷಯಗಳ ಪೈಕಿ 29ರಲ್ಲಷ್ಟೇ ಪರೀಕ್ಷೆಗಳು ನಡೆಯಲಿವೆ ಎಂದು ಹೇಳಿದ್ದಾರೆ. ಪದವಿ ತರಗತಿಗೆ ಪ್ರವೇಶ ಪಡೆಯಲು ಮುಖ್ಯವಾಗಿರುವ ವಿಷಯಗಳನ್ನು ಪರಿಗಣಿಸಲಾಗಿದೆ ಹಾಗೂ ಪರೀಕ್ಷೆ ನಡೆಸುವ ಕನಿಷ್ಠ 10 ದಿನಗಳ ಮುಂಚಿತವಾಗಿ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ಭರವಸೆ ನೀಡಿದ್ದಾರೆ.

    ಯಾವ ವಿಷಯಗಳಲ್ಲಿ ನಡೆಯಲಿದೆ ಪರೀಕ್ಷೆ?
    12ನೇ ತರಗತಿ: ಬಿಜಿನೆಸ್​ ಸ್ಟಡೀಸ್​, ಜಿಯಾಗ್ರಫಿ, ಹಿಂದಿ (ಕೋರ್​ ಆ್ಯಂಡ್​ ಎಲೆಕ್ಟಿವ್​), ಹೋಮ್​ ಸೈನ್ಸ್​, ಸೋಷಿಯಾಲಜಿ, ಕಂಪ್ಯೂಟರ್​ ಸೈನ್ಸ್​ (ಓಲ್ಡ್​ ಆ್ಯಂಡ್​ ನ್ಯೂ), ಇನ್​ಫಾರ್ಮೇಷನ್​ ಪ್ರಾಕ್ಟೀಸ್​ (ಓಲ್ಡ್​ ಆ್ಯಂಡ್​ ನ್ಯೂ), ಇನ್​ಫಾರ್ಮೇಷನ್​ ಟೆಕ್ನಾಲಜಿ, ಬಯೋಟೆಕ್ನಾಲಜಿ ಸೇರಿ ಒಟ್ಟು 12 ವಿಷಯಗಳ ಪರೀಕ್ಷೆ ನಡೆಯಲಿದೆ.

    ಇನ್ನು 10ನೇ ಪರೀಕ್ಷೆಗಳು ಮುಗಿದಿದ್ದು, ದೆಹಲಿ ಕೆಲ ಪ್ರದೇಶಗಳಲ್ಲಷ್ಟೇ 6 ವಿಷಯಗಳು ಬಾಕಿ ಉಳಿದಿವೆ. ವಿವರಗಳಿಗೆ ಈ ಲಿಂಕ್​ ಬಳಸಿ https://bit.ly/35gfYxp

    ಮಳೆಗೆ ಮುಳುಗೋದೇಕೆ ಬೆಂಗಳೂರು? ಬಿಬಿಎಂಪಿಯಲ್ಲ, ಜ್ಯೋತಿಷಿಗಳೇ ನೀಡಬೇಕೇನೋ ಪರಿಹಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts