More

    ರಾಣಾ ಕಪೂರ್, ಮಗಳು ರಾಖಿ ಮಾತ್ರವಲ್ಲ ಇನ್ನೂ ಬೇರೆ ಕುಟುಂಬ, ಸಂಸ್ಥೆಗಳು ಯೆಸ್​ ಬ್ಯಾಂಕ್​ ವಂಚನೆಯಲ್ಲಿ ಭಾಗಿ

    ಮುಂಬೈ: ಯೆಸ್​ ಬ್ಯಾಂಕ್​ ವಂಚನೆ ಪ್ರಕರಣದಲ್ಲಿ ರಾಣಾ ಕಪೂರ್​ ಕುಟುಂಬ ಮಾತ್ರವಲ್ಲದೆ ಇನ್ನೂ ಬೇರೆ ಸಂಸ್ಥೆಗಳು ಹಾಗೂ ಕುಟುಂಬಗಳ ಪಾತ್ರದ ಬಗ್ಗೆ ಜಾರಿ ನಿರ್ದೇಶನಾಲಯ ಸಂಶಯ ವ್ಯಕ್ತಪಡಿಸಿದೆ.

    ರಾನಾ ಕಪೂರ್‌ನ ಐದು ದಿನಗಳ ಕಸ್ಟಡಿಗೆ ಕೋರಿದ್ದ ಇಡಿ, ನ್ಯಾಯಾಲಯಕ್ಕೆ ಮೌಖಿಕ ಹೇಳಿಕೆ ಸಲ್ಲಿಸಿ, ಯೆಸ್ ಬ್ಯಾಂಕ್ ಮತ್ತು ಡಿಎಚ್‌ಎಫ್‌ಎಲ್‌ನ ಆರ್ಥಿಕ ಅಕ್ರಮಗಳನ್ನು ಉಲ್ಲೇಖಿಸಲಾಗಿತ್ತು.

    ತನಿಖಾ ಸಂಸ್ಥೆ ಸಿಬಿಐ ಮಾಡಿದ ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ರಾಣಾ ಕಪೂರ್, ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದರೂ, ಅಗತ್ಯವಿದ್ದಾಗ ನಾನು ಏಜೆನ್ಸಿಯೊಂದಿಗೆ ಸಹಕರಿಸುತ್ತಿದ್ದೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

    ಜಾರಿ ನಿರ್ದೇಶನಾಲಯದ ಪ್ರಕಾರ ಕಪೂರ್​ ತನ್ನ ಮಗಳ ಸಂಸ್ಥೆಗಳಿಗೆ ಲಾಭ ತಂದುಕೊಡಲು ತಮ್ಮ ಸ್ಥಾನವನ್ನು ಬಳಸಿಕೊಂಡಿದ್ದರು. ಆದ್ದರಿಂದ ಅವರ ವಶಕ್ಕೆ ಪಡೆಯುವುದರಿಂದ ಅವರ ಮತ್ತು ಅವರ ಮಗಳ ವಿಚಾರಣೆ ನಡೆಸಲಾಗುತ್ತದೆ. ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ಹೆಚ್ಚು ತನಿಖೆ ಅಗತ್ಯ ಎಂದು ಐಡಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು.

    ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್ ವಿರುದ್ಧ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಮುಂಬೈನ 7 ಸ್ಥಳಗಳಲ್ಲಿ ದಾಳಿ ನಡೆಸಿತು. ಭಾನುವಾರ (ಮಾ.11) ರಾಣಾ ಕಪೂರ್​ ಅವರನ್ನು ವಿಶೇಷ ನ್ಯಾಯಾಲಯ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿತ್ತು.

    ರಾಣಾ ಕಪೂರ್​ನ ವರ್ಲಿಯಲ್ಲಿರುವ ಮನೆ, ಡಿಎಚ್​ಎಫ್​ಎಲ್​ ಕಚೇರಿ, ಡಿಒಐಟಿ ಅರ್ಬನ್​ ವೆಂಚರ್ಸ್​ ಇಂಡಿಯಾ ಪ್ರೈ.ಲಿ. ಕಚೇರಿ, ಬಾಂದ್ರಾದಲ್ಲಿರುವ ಕಪಿಲ್​ ವಾಧವನ್​ ಮನೆ, ಕಪೂರ್​ ಮಗಳು ರಾಖಿ ಅವರ ಮನೆ, ರಾಧಾ ಕಪೂರ್​ ಖನ್ನಾ ಅವರ ಮನೆಗಳು ಏಕಕಾಲದಲ್ಲಿ ಮೇಲೆ ಸಿಬಿಐ ದಾಳಿ ನಡೆಸಿದೆ. (ಏಜೆನ್ಸೀಸ್​) 

    ಚೆಕ್ ಬೌನ್ಸ್ ಆಗಿ ವಂಚನೆ ಆಗಿದೆಯೇ? ಪರಿಹಾರಕ್ಕೆ ವರ್ಷಾನುಗಟ್ಟಲೆ ಕಾಯಬೇಕಾಗಿಲ್ಲ, ಭವಿಷ್ಯದಲ್ಲಿ ಶೀಘ‍್ರವೇ ಸಿಗಲಿದೆ ನ್ಯಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts