More

    2024ರ ಯುದ್ಧ ಮೋದಿ vs ಕೇಜ್ರಿವಾಲ್ ನಡುವೆ ನಡೆಯಲಿದೆ​: ಕೇಂದ್ರದ ವಿರುದ್ಧ ದೆಹಲಿ ಡಿಸಿಎಂ ಆಕ್ರೋಶ

    ನವದೆಹಲಿ: ಸಿಬಿಐ ದಾಳಿಯ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಡಿಸಿಎಂ, ಅಬಕಾರಿ ಹಾಗೂ ಶಿಕ್ಷಣ ಸಚಿವ ಮನೀಶ್​ ಸಿಸೊಡಿಯಾ ವಾಗ್ದಾಳಿ ನಡೆಸಿದ್ದು, 2024ರ ಲೋಕಸಭಾ ಸಮರವು ಪ್ರಧಾನಿ ಮೋದಿ ಮತ್ತು ಅರವಿಂದ್​ ಕೇಜ್ರಿವಾಲ್​ ನಡುವೆ ನಡೆಯಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ಕೇಂದ್ರವು ತನಿಖಾ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

    ಅಬಕಾರಿ ನೀತಿಗೆ ಸಂಬಂಧಿಸಿದಂತೆ ಮನೀಶ್​ ಸಿಸೊಡಿಯಾ ಮನೆ ಸೇರಿದಂತೆ ದೆಹಲಿಯ 20 ಸ್ಥಳಗಳ ಮೇಲೆ ನಿನ್ನೆ ಸಿಬಿಐ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದೆ. ದಾಳಿಯ ಬೆನ್ನಲ್ಲೇ ಇಂದು (ಆ.20) ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಸೊಡಿಯಾ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿಎಂ ಅರವಿಂದ್​ ಕೇಜ್ರಿವಾಲರ ಅಭಿವೃದ್ಧಿ ಯೋಜನೆಗಳನ್ನು ತಡೆಯಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನನ್ನ ವಿರುದ್ಧ ಅಬಕಾರಿ ನೀತಿ ಹಗರಣದ ಪ್ರಕರಣ ದಾಖಲಿಸಿದೆ ಎಂದು ಆರೋಪಿಸಿದ್ದಾರೆ.

    ಮುಂದುವರಿದು ಮಾತನಾಡಿದ ಸಿಸೊಡಿಯಾ, 2024ರ ಲೋಕಸಭಾ ಚುನಾವಣೆ ಕದನವು ಪ್ರಧಾನಿ ಮೋದಿ ಮತ್ತು ಕೇಜ್ರಿವಾಲ್​ ಮಧ್ಯೆ ನಡೆಯಲಿದೆ. ಮೋದಿ ಅವರು ಸರ್ಕಾರಗಳನ್ನು ಬೀಳಿಸುವುದರಲ್ಲಿ ಮತ್ತು ಶ್ರೀಮಂತ ವ್ಯಕ್ತಿಗಳ ಪರ ಕೆಲಸ ಮಾಡುವುದರಲ್ಲೇ ಬಿಜಿಯಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.

    ಸಿಸೊಡಿಯಾ ಅವರು ತಮ್ಮ ಮೇಲೆ ಬಂದಿರುವ ಭ್ರಷ್ಟಾಚಾರದ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದರು. ನಾನು ಮಾಡಿದ ಏಕೈಕ ಅಪರಾಧವೆಂದರೆ ಅರವಿಂದ್ ಕೇಜ್ರಿವಾಲ್ ಅವರ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದು, ಕೇಂದ್ರದವರಿಗೆ ಸಮಸ್ಯೆ ಇರುವುದು ಮದ್ಯ/ಅಬಕಾರಿ ಹಗರಣವಲ್ಲ, ಅವರ ಸಮಸ್ಯೆಯೇ ಅರವಿಂದ್ ಕೇಜ್ರಿವಾಲ್ ಎಂದರು. ನನ್ನ ವಿರುದ್ಧ ಈಗ ನಡೆಯುತ್ತಿರುವ ಪ್ರಕ್ರಿಯೆಗಳು, ನನ್ನ ನಿವಾಸ ಮತ್ತು ಕಚೇರಿ ಮೇಲಿನ ದಾಳಿಗಳೆಲ್ಲ ಕೇಜ್ರಿವಾಲ್​ ಅವರ ಅಭಿವೃದ್ಧಿ ಕೆಲಸಗಳನ್ನು ತಡೆಯಲು ಎಂದು ಆರೋಪ ಮಾಡಿದರು.

    ಅಬಕಾರಿ ನೀತಿ ಕುರಿತು ಮಾತನಾಡಿದ ಸಿಸೋಡಿಯಾ, ಇದು ದೇಶದಲ್ಲೇ ಅತ್ಯುತ್ತಮ ನೀತಿಯಾಗಿದೆ. ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಈ ನೀತಿಯ ವಿರುದ್ಧ ಪಿತೂರಿ ನಡೆಸದಿದ್ದರೆ, ದೆಹಲಿ ಸರ್ಕಾರವು ಪ್ರತಿ ವರ್ಷ ಕನಿಷ್ಠ 10,000 ಕೋಟಿ ರೂಪಾಯಿಗಳನ್ನು ಪಡೆಯುತ್ತಿತ್ತು ಎಂದು ಹೇಳಿದರು. (ಏಜೆನ್ಸೀಸ್​)

    ರೈಸ್ ಡಾಕ್ಟರ್ ಶಶಿಕುಮಾರ್ ತಿಮ್ಮಯ್ಯಗೆ ವಿಜಯರತ್ನ: ವಿಜಯವಾಣಿ, ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ರೈತನ ಭಾವನೆಗೆ ಸ್ಪಂದಿಸಿ 1.5 ಕೋಟಿ ರೂ. ಮೌಲ್ಯದ ಮನೆಯನ್ನು 500 ಅಡಿ ದೂರಕ್ಕೆ ಜರುಗಿಸುತ್ತಿದೆ ಸರ್ಕಾರ!

    ಸ್ಪೈ ಕ್ಯಾಮೆರಾ ಬಳಸಿ ಮಹಿಳೆಯರ ನಗ್ನ ವಿಡಿಯೋ ಚಿತ್ರೀಕರಣ: ಈತನ ದುಷ್ಕೃತ್ಯದ ಹಿಂದಿದ್ದ ದುರುದ್ದೇಶವಿದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts