More

    ದಕ್ಷಿಣಕಾಶಿಯಲ್ಲಿನ ಜಾನುವಾರು ಜಾತ್ರೆ ರದ್ದು; ಜಿಲ್ಲಾಡಳಿತದ ಆದೇಶಕ್ಕೆ ಕಾರಣ ಇದು..

    ಬೆಂಗಳೂರು: ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಲ್ಲಿ ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶಿವಗಂಗೆಯಲ್ಲಿನ ಜಾನುವಾರ ಜಾತ್ರೆ ರದ್ದುಗೊಂಡಿದೆ. ರಾಸುಗಳ ಜಾತ್ರೆಯನ್ನು ಆಯೋಜಿಸದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ದೇವಾಲಯವೂ ಈ ಕುರಿತು ಪ್ರಕಟಣೆಯನ್ನು ಹೊರಡಿಸಿದೆ.

    ಶಿವಗಂಗೆಯಲ್ಲಿನ ಶ್ರೀ ಗಂಗಾಧರೇಶ್ವರ ಸ್ವಾಮಿ ಮತ್ತು ಹೊನ್ನಾದೇವಿ ದೇವಾಲಯದ ಗಿರಿಜಾಕಲ್ಯಾಣ ಮಹೋತ್ಸವದ ಪ್ರಯುಕ್ತ ಜರುಗುವ ದನಗಳ ಜಾತ್ರೆಯನ್ನು ರದ್ದುಪಡಿಸಲಾಗಿದ್ದು, ಸುತ್ತಮುತ್ತಲಿನ ರೈತ ಬಾಂಧವರು ಸಹಕರಿಸಬೇಕೆಂದು ಎಂದು ಶಿವಗಂಗೆ ಶ್ರೀ ಗಂಗಾಧರೇಶ್ವರ ಮತ್ತು ಹೊನ್ನಾದೇವಿ ಸಮೂಹ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಈವರೆಗೂ 2037 ಜಾನುವಾರುಗಳಲ್ಲಿ ಈ ರೋಗ ಕಂಡುಬಂದಿದ್ದು, 154 ಜಾನುವಾರುಗಳು ಮರಣ ಹೊಂದಿರುತ್ತವೆ. ಇದು ವೈರಾಣುನಿಂದ ಹರಡುವ ರೋಗವಾಗಿದ್ದು ಹಾಗೂ ಪ್ರಮುಖವಾಗಿ ಸೊಳ್ಳೆ, ನೊಣ, ಉಣ್ಣೆ ಇತ್ಯಾದಿ ಕೀಟಗಳಿಂದ ಹರಡುತ್ತದೆ. ಈ ರೋಗ ಕಾಣಿಸಿಕೊಂಡ ಜಾನುವಾರುಗಳು ರೋಗದಿಂದ ಸಾಕಷ್ಟು ಬಳಲುವುದರಿಂದ ಉತ್ಪಾದನೆ ಕಡಿಮೆಯಾಗುವುದಲ್ಲದೆ, ಕೆಲವೊಮ್ಮೆ ಮರಣ ಹೊಂದುತ್ತವೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 1,51,526 ಜಾನುವಾರುಗಳಿಗೆ ಲಸಿಕೆಯನ್ನು ನೀಡಲಾಗಿದ್ದು, ರೋಗ ಪೀಡಿತ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಅಲ್ಲದೆ ಜಿಲ್ಲೆಯಲ್ಲಿ ಹಲವೆಡೆ ಜಾನುವಾರು ಸಂತೆ/ಜಾತ್ರೆಗಳು ನಡೆಯಲಿದ್ದು, ಇವುಗಳಿಂದ ಜಾನುವಾರುಗಳ ಸಾಗಾಣಿಕೆ/ಚಲನವಲನದಿಂದ ಹಾಗೂ ಹಲವಾರು ಜಾನುವಾರುಗಳನ್ನು ಒಂದೆಡೆ ಸೇರಿಸುವುದರಿಂದ ರೋಗೋದ್ರೇಕವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸ್ತುತ 1,62,980 ದನ/ಎಮ್ಮೆಗಳಿದ್ದು, ರೋಗೋದ್ರೇಕವನ್ನು ನಿಯಂತ್ರಿಸದಿದ್ದಲ್ಲಿ ಸಾಕಷ್ಟು ಆರ್ಥಿಕ ನಷ್ಟ ಉಂಟಾಗುವ ಸಂಭವವಿರುವುದರಿಂದ ಜಿಲ್ಲೆಯಾದ್ಯಂತ ಜಾನುವಾರು ಜಾತ್ರೆ/ಸಂತೆ, ಜಾನುವಾರು ಸಾಗಣಿಕೆಯನ್ನು ಎರಡು ತಿಂಗಳ ಅವಧಿಗೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

    ಡಿಸೆಂಬರ್​​ನಲ್ಲಿ ಶ್ರೀ ಗಂಗಾಧರೇಶ್ವರಸ್ವಾಮಿ ದನಗಳ ಜಾತ್ರೆ ಮತ್ತು ಏಪ್ರಿಲ್​ನಲ್ಲಿ ಹೊನ್ನಾದೇವಿ ಅಮ್ಮನವರ ದನಗಳ ಜಾತ್ರೆ ನಡೆಯುತ್ತದೆ. ದನಗಳ ಜಾತ್ರೆಯಲ್ಲಿ 2 ಸಾವಿರಕ್ಕೂ ಹೆಚ್ಚು ರಾಸುಗಳು ಸೇರಲಿದ್ದು, ಅಪ್ಪಟ ನಾಟಿ ತಳಿಗಳಾದ ಅಮೃತಮಹಲ್‌, ಹಳ್ಳಿರಾಣಿ, ರೂಪಾಯಿ ಬಣ್ಣ, ಬಿಳಿ ಬಣ್ಣ, ಬಿಳಿ ಮತ್ತು ಕಪ್ಪುಮಿಶ್ರಿತ ರಾಸುಗಳು ವಿಶೇಷವಾಗಿ ಕಂಡುಬರುತ್ತವೆ. ಜಾತ್ರೆಯಲ್ಲಿ ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ನಾಗಮಂಗಲ, ಪಾಂಡವಪುರ, ಮಾಗಡಿ, ಕೊರಟಗೆರೆ, ಕೆ.ಆರ್‌.ಪೇಟೆ, ಮಂಡ್ಯ ಸೇರಿದಂತೆ ನೆರೆರಾಜ್ಯ ತೆಲಂಗಾಣದ ಅನಂತಪುರ ಜಿಲ್ಲೆಯಿಂದಲೂ ಅತ್ಯಧಿಕವಾಗಿ ರೈತರು ರಾಸುಗಳನ್ನು ಕರೆ ತರುತ್ತಾರೆ. ಈ ಭಾಗದಲ್ಲಿ ನಾಟಿ ಹಸುಗಳಿಗೆ ಯಾವ ಚರ್ಮಗಂಟು ಕಾಯಿಲೆ ಕಂಡು ಬಂದಿಲ್ಲ, ಕಳೆದ 3-4 ವರ್ಷದಿಂದ ಕರೋನಾ ಲಾಕ್ಡೌನ್, ರೋಗ, ಸೋಂಕು ಅಂತ ಹೇಳಿ ಜಾತ್ರೆಯ ಸೊಬಗು ಇಲ್ಲವಾಗಿದೆ. ನಮ್ಮ ಆಚರಣೆ, ಪದ್ಧತಿ ಮತ್ತು ಹಳ್ಳಿ ಸೊಗಡನ್ನು ನಶಿಸಿ ಹೋಗದಂತೆ ಜಿಲ್ಲಾಡಳಿತ ತೀಮಾನ ಕೈಗೊಳ್ಳಬೇಕು. ಜಾತ್ರೆಗೆ ಬರುವ ಜಾನುವಾರುಗಳನ್ನು ತಪಾಸಣೆ ನಡೆಸಿ ಎರಡು ದಿನವಾದರೂ ದನಗಳ ಜಾತ್ರೆ ನಡೆಸಲು ಅನುಮತಿ ಕೊಡಬೇಕೆಂದು ಸ್ಥಳೀಯರು ಇಂಗಿತ ವ್ಯಕ್ತಪಡಿಸಿದ್ದಾರೆ.

    ಸಂಬಂಧಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದು ಪೀಸ್​ಪೀಸ್ ಮಾಡಿದ; ಒಂದೊಂದು ತುಂಡನ್ನು ಒಂದೊಂದು ಕಡೆ ಎಸೆದ!

    ಸಾಲ ತೀರಿಸಿಲ್ಲ ಅಂತ ಆಟೋಚಾಲಕನ ಪತ್ನಿ ಮೇಲೆ ಅತ್ಯಾಚಾರ; ದೇವಸ್ಥಾನಕ್ಕೆ ಕರೆದೊಯ್ದು ಹಣೆಗೆ ಸಿಂಧೂರ ಹಚ್ಚಿ ಹೆಂಡ್ತಿ ಎಂದ!

    ಗಡಿ’ಬಿಡಿ’ಯಲ್ಲಿ ಕಾವೇರಲಿದೆ ಚಳಿಗಾಲದ ಅಧಿವೇಶನ; ನಡೆಯಲಿದ್ಯಾ ಮಹಾಮೇಳದ ‘ಧೈರ್ಯ’ ಪ್ರದರ್ಶನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts