More

    ಇಂಗ್ಲೆಂಡ್‌ಗೆ ಇಂದು ನೆದರ್ಲೆಂಡ್ ಸವಾಲು: 2025ರ ಚಾಂಪಿಯನ್ಸ್ ಟ್ರೋಫಿ ಅರ್ಹತೆಗೆ ಆಂಗ್ಲರಿಗೆ ಗೆಲುವು ಅನಿವಾರ್ಯ

    ಪುಣೆ: ಏಕದಿನ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದ್ದು ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಲವಾಗಿರುವ ಇಂಗ್ಲೆಂಡ್ ತಂಡವೀಗ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಅರ್ಹತೆ ಪಡೆಯಲು ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಸವಾಲಿನ ಮೊದಲ ಭಾಗವಾಗಿ ಇಂಗ್ಲೆಂಡ್ ತಂಡ ತನ್ನ 8ನೇ ಲೀಗ್ ಪಂದ್ಯದಲ್ಲಿ ಬುಧವಾರ ನೆದರ್ಲೆಂಡ್ ತಂಡವನ್ನು ಎದುರಿಸಲಿದೆ.
    ಟೂರ್ನಿಯಲ್ಲಿ ಕಳಪೆ ನಿರ್ವಹಣೆಯೊಂದಿಗೆ ಆಡಿರುವ 7 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದು, 6ರಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಅರ್ಹತೆಯಿಂದಲೂ ವಂಚಿತವಾಗುವ ಭೀತಿಯಲ್ಲಿದೆ. ಇನ್ನು ನೆದರ್ಲೆಂಡ್ ಕೂಡ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 2 ಗೆಲುವು, 5ರಲ್ಲಿ ಸೋಲು ಅನುಭವಿಸಿದ್ದು, ಅಂಕಪಟ್ಟಿಯಲ್ಲಿ ಆಂಗ್ಲರಿಗಿಂತ ತುಸು ಮೇಲೆ ಅಂದರೆ, 9ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ಡಚ್ಚರಿಗೂ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವ ಅವಕಾಶವಿರಲಿದೆ.
    ಇದೇ ಮೊದಲ ಬಾರಿಗೆ ವಿಶ್ವಕಪ್ ಆವೃತ್ತಿಯೊಂದರಲ್ಲಿ 6 ಪಂದ್ಯಗಳಲ್ಲಿ ಸೋಲುಂಡಿರುವ ಕ್ರಿಕೆಟ್ ಜನಕರು, ಉಳಿದಿರುವ 2 ಪಂದ್ಯಗಳಲ್ಲಿ ಚೇತೋಹಾರಿ ನಿರ್ವಹಣೆ ಮೂಲಕ ಟೂರ್ನಿಗೆ ವಿದಾಯ ಹೇಳುವ ಹಂಬಲದಲ್ಲಿದ್ದಾರೆ. ಟೂರ್ನಿಯಲ್ಲಿ ಬ್ಯಾಟರ್‌ಗಳ ವೈಲ್ಯ ಆಂಗ್ಲರಿಗೆ ಪ್ರಮುಖ ಹಿನ್ನಡೆಯಾಗಿದೆ. ಜಾನಿ ಬೇರ್‌ಸ್ಟೋ, ಡೇವಿಡ್ ಮಲಾನ್ ನಿರೀಕ್ಷಿತ ಆರಂಭ ಒದಗಿಸುವಲ್ಲಿ ಎಡವಿದರೆ, ಅನುಭವಿ ಜೋ ರೂಟ್ ಅಸ್ಥಿರ ನಿರ್ವಹಣೆ ತೋರುತ್ತಿದ್ದಾರೆ. ಭಾರತೀಯ ಪಿಚ್‌ನಲ್ಲಿ ಪರಿಣಾಮಕಾರಿ ಎನಿಸದ ಇಂಗ್ಲೆಂಡ್ ಬೌಲಿಂಗ್ ವಿಭಾಗ ಹಿಂದಿನ ಪಂದ್ಯದಲ್ಲಿ ತುಸು ಲಯಕ್ಕೆ ಮರಳಿದರೂ, ಬ್ಯಾಟರ್‌ಗಳು ಸೂಕ್ತ ಬೆಂಬಲ ನೀಡಲಿಲ್ಲ. ನಾಯಕ ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್ ವೈಲ್ಯ ತಂಡಕ್ಕೆ ಮುಳುವಾಗಿದೆ. ನೆದರ್ಲೆಂಡ್ ಎದುರು ಏಕದಿನ ಕ್ರಿಕೆಟ್ ಇತಿಹಾಸದ ಗರಿಷ್ಠ ಮೊತ್ತ ಪೇರಿಸಿದ ದಾಖಲೆ ಹೊಂದಿರುವ ಇಂಗ್ಲೆಂಡ್ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.
    ಇನ್ನು ನೆದರ್ಲೆಂಡ್ ತಂಡಕ್ಕೂ ಬ್ಯಾಟರ್‌ಗಳ ವೈಲ್ಯವೇ ಹಿನ್ನಡೆ ಆಗಿದೆ. ನಾಯಕ ಸ್ಕಾಟ್ ಎಡ್ವರ್ಡ್ಸ್ ಹೊರತುಪಡಿಸಿ ಇತರ ಬ್ಯಾಟರ್‌ಗಳು ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಂಡಿಲ್ಲ. ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ಎದುರಿನ ಗೆಲುವಿನಿಂದ ಆತ್ಮಬಲ ಹೆಚ್ಚಿಸಿಕೊಂಡಿರುವ ಡಚ್ಚರು, ಹಾಲಿ ಚಾಂಪಿಯನ್ನರಿಗೆ ಆಘಾತ ನೀಡುವ ತವಕದಲ್ಲಿದ್ದಾರೆ.

    ಏಕದಿನ ಮುಖಾಮುಖಿ-6
    ಇಂಗ್ಲೆಂಡ್- 6
    ನೆದರ್ಲೆಂಡ್-0

    ವಿಶ್ವಕಪ್ ಮುಖಾಮುಖಿ-3
    ಇಂಗ್ಲೆಂಡ್-3
    ನೆದರ್ಲೆಂಡ್-0

    ಆರಂಭ: ಮಧ್ಯಾಹ್ನ 2ಕ್ಕೆ
    ನೇರಪ್ರಸಾರ:ಸ್ಟಾರ್ ಸ್ಪೋರ್ಟ್ಸ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts