More

    ಜಾತಿ, ಧರ್ಮದ ರಾಜಕಾರಣದಿಂದ ಆತಂಕ ಎಂದ ಡಾ.ಸಿದ್ದನಗೌಡ ಪಾಟೀಲ್

    ದಾವಣಗೆರೆ: ಪ್ರಸ್ತುತ ರಾಜಕಾರಣದಲ್ಲಿ ಧರ್ಮ, ಜಾತಿ, ಭಾಷೆ ಪ್ರಧಾನವಾಗಿರುವುದು ನಿಜಕ್ಕೂ ಆತಂಕ ಮೂಡಿಸಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ್ ಹೇಳಿದರು.

    ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನರ ಮೂಲ ಸಮಸ್ಯೆಗಳಾದ ಆಹಾರ, ವಸತಿ, ನಿರುದ್ಯೋಗ, ಅನಾರೋಗ್ಯ, ಬೆಲೆ ಏರಿಕೆಯಂತಹ ವಿಷಯಗಳು ಮುನ್ನೆಲೆಗೆ ಬರುತ್ತಿಲ್ಲ. ಬದಲಿಗೆ, ಜಾತಿ, ಧರ್ಮದ ವಿಷಯಗಳು ಚರ್ಚೆಯಾಗುತ್ತಿದೆ. ಮತ ಬ್ಯಾಂಕ್‌ಗಾಗಿ ಯಾವ ಪಕ್ಷದಲ್ಲೂ ನೀತಿ, ನಿಲುವುಗಳು ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಲಿಂಗಾಯತ ಧರ್ಮದ ವಿಷಯವನ್ನು ಬಿಜೆಪಿ ಚರ್ಚಿಸುತ್ತಿದ್ದು, ಗುತ್ತಿಗೆದಾರರಂತೆ ವರ್ತಿಸುತ್ತಿದೆ. ಬಿಜೆಪಿ ಮಾತೃ ಸಂಸ್ಥೆಯಾದ ಆರ್‌ಎಸ್‌ಎಸ್ ಲಿಂಗಾಯತ ತತ್ವಗಳಿಗೆ ವಿರುದ್ಧವಾಗಿದೆ. ಪಕ್ಷದಲ್ಲಿರುವವರು ನಿಜವಾದ ಲಿಂಗಾಯತರಲ್ಲ. ಶರಣ ಸಂಸ್ಕೃತಿಯ ದ್ರೋಹಿಗಳು ಎಂದು ಹರಿಹಾಯ್ದರು.

    ಬಿಜೆಪಿ ಕಾರ್ಪೋರೇಟ್ ಕಂಪೆನಿಗಳ ಹಿತಾಸಕ್ತಿಗಾಗಿ ದೇಶ ಬಲಿಕೊಡುತ್ತಿದೆ. ಸರ್ಕಾರಿ ಸೇವಾ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ಬಿಜೆಪಿ ಪಕ್ಷದ್ದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಯನ್ನು ಕಾರ್ಪೊರೇಟ್‌ಗಳ ಕೈಗೆ ನೀಡುವ ಉದ್ದೇಶ ಹೊಂದಿರುವುದು ಸರಿಯಲ್ಲ. ಹೀಗಾಗಿ, ಈ ಚುನಾವಣೆಯಲ್ಲಿ ಬಿಜೆಪಿ ಸೋಲಿಸಬೇಕು ಎಂದು ಹೇಳಿದರು.

    ರಾಜ್ಯದ 215 ಕ್ಷೇತ್ರಗಳಲ್ಲಿ ಸಿಪಿಐ ಕಾಂಗ್ರೆಸ್ ಬೆಂಬಲಿಸುತ್ತಿದ್ದು, ಮೂಡಿಗೆರೆ, ಕೆಜಿಎಫ್, ಶಿರಾ, ಕೂಡ್ಲಿಗಿ, ಆಳಂದ, ಜೇವರ್ಗಿ ಹಾಗೂ ಪಡುವನಹಳ್ಳಿ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದೆ ಎಂದರು.

    ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಎಚ್.ಜಿ. ಉಮೇಶ್ ಆವರಗೆರೆ, ಆವರಗೆರೆ ವಾಸು, ಆನಂದರಾಜ್, ಟಿ.ಎಸ್. ನಾಗರಾಜ, ಪಿ. ಷಣ್ಮುಖಸ್ವಾಮಿ, ಐರಣಿ ಚಂದ್ರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts