More

    ಜಾತಿಗಳ ನಡುವೆ ಕಿತ್ತಾಟದಿಂದ ಸಮಾಜದಲ್ಲಿ ಅಶಾಂತಿ: ಸಾಹಿತಿ ಬಿ.ಎಲ್.ವೇಣು ಬೇಸರ

    ಹೊಸದುರ್ಗ: ಜಾತಿ, ಧರ್ಮಗಳ ನಡುವೆ ಕಿತ್ತಾಟ, ದ್ವೇಷ ಹೆಚ್ಚಾಗಿ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ ಎಂದು ಸಾಹಿತಿ ಬಿ.ಎಲ್.ವೇಣು ಬೇಸರ ವ್ಯಕ್ತಪಡಿಸಿದರು.

    ಪಟ್ಟಣದ ಗುರು ಒಪ್ಪತ್ತಿನಸ್ವಾಮಿ ವಿರಕ್ತಮಠದಲ್ಲಿ ಭಾನುವಾರ ಅನಿಕೇತನ ವಿಚಾರ ವೇದಿಕೆ ಆಯೋಜಿಸಿದ್ದ ಸಮಾರಂಭದಲ್ಲಿ ಬಾಗೂರು ನಾಗರಾಜಪ್ಪ ಅವರ ಹೊಸದುರ್ಗದ ಸಿರಿ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

    ಜಾತಿ ವ್ಯವಸ್ಥೆಯನ್ನು ನಾಶಮಾಡಲು ಮಠಾಧೀಶರು ಹಾಗೂ ರಾಜಕಾರಣಿಗಳ ಪ್ರಯತ್ನ ಸಾಲುತ್ತಿಲ್ಲ. ಹಿಂದುಳಿದ ಸಮುದಾಯಗಳ ಮೀಸಲಾತಿಯನ್ನು ಮೇಲ್ವರ್ಗದ ಸಮುದಾಯಗಳೂ ಕೇಳುತ್ತಿವೆ. ಎಂದರು.

    ಬಾಗೂರು ನಾಗರಾಜಪ್ಪ ಅವರು ತಮ್ಮ ಪುಸ್ತಕದ ಮೂಲಕ ಹೊಸದುರ್ಗದ ಇತಿಹಾಸವನ್ನು ಜನರಿಗೆ ತಿಳಿಸುವಂತಹ ಕೆಲಸ ಮಾಡಿದ್ದಾರೆ ಎಂದರು.

    ಹೈಕೋರ್ಟ್‌ನ ವಿಶ್ರಾಂತ ನ್ಯಾಯಾಧೀಶ ಎಚ್.ಬಿಲ್ಲಪ್ಪ ಮಾತನಾಡಿ, ಅನಿಕೇತನ ವಿಚಾರ ವೇದಿಕೆ ಹೊಸದುರ್ಗ ಸಿರಿ ಪುಸ್ತಕ ಪ್ರಕಟಿಸುವ ಮೂಲಕ ತಾಲೂಕಿನ ಇತಿಹಾಸ, ನಾಗರಾಜಪ್ಪ, ಪರಪ್ಪಸ್ವಾಮಿ ಹಾಗೂ ಪ್ರಭಜ್ಜಯ್ಯ ಅವರಂತಹ ಅವಧೂತರ ಬದುಕನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ ಎಂದರು.

    ಬನಶಂಕರಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್, ಕಸಾಪ ಮಾಜಿ ಅಧ್ಯಕ್ಷ ಪಿ.ಎಲ್.ಲೋಕೇಶ್ವರ, ಉದ್ಯಮಿ ಕೆ.ಎಸ್.ಕಲ್ಮಠ್, ಬಿ.ಪಿ.ಓಂಕಾರಪ್ಪ, ಬಾಗೂರು ನಾಗರಾಜಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts