More

    ಗೇರು ಕೃಷಿಕರಿಗೆ ಕ್ಯಾಶ್ಯೂ ಇಂಡಿಯಾ ಆಪ್

    ಮಂಗಳೂರು: ಗೇರು ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ ‘ಕ್ಯಾಶ್ಯೂ ಇಂಡಿಯಾ’ ಆ್ಯಪ್ ಅಭಿವೃದ್ಧಿ ಪಡಿಸಿದೆ.
    ಗೇರು ಕಸಿಗಿಡಗಳು, ನರ್ಸರಿ, ಕೃಷಿ, ಕೀಟ ಮತ್ತು ರೋಗ ನಿರ್ವಹಣೆ, ಕೊಯ್ಲೋತ್ತರ ಸಂಸ್ಕರಣೆ, ಮಾರುಕಟ್ಟೆ ಮಾಹಿತಿ, ಇ-ಮಾರುಕಟ್ಟೆ, ಗೇರಿಗೆ ಸಂಬಂಧಪಟ್ಟ ಕೃಷಿಕರು, ಸಂಶೋಧಕರು, ಅಭಿವೃದ್ಧಿ ಇಲಾಖೆಗಳು, ಸಂಸ್ಕರಣಾ ಘಟಕಗಳು ಸಹಿತ ಎಲ್ಲ ಮಾಹಿತಿ ಆ್ಯಪ್‌ನಲ್ಲಿ ಲಭ್ಯ.
    ಕೃಷಿಕ ಅಥವಾ ಬಳಕೆದಾರ ತನ್ನ ಗೇರು ತೋಟದ ಛಾಯಾಚಿತ್ರ ಹಾಗೂ ವಿಡಿಯೋಗಳನ್ನು ಕೃಷಿ ವಿಭಾಗದಲ್ಲಿರುವ ಉಪವಿಭಾಗ ‘ನನ್ನ ಗೇರು ಬೆಳೆ’ಯಡಿಯಲ್ಲಿ ಸಂಗ್ರಹಿಸಿಡಬಹುದು. ‘ತಜ್ಞರನ್ನು ಕೇಳಿ’ ಮೂಲಕ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಬಹುದು. ‘ಚರ್ಚಾಕೋಣೆ’ಯಲ್ಲಿ ಇತರ ಬಳಕೆದಾರರೊಂದಿಗೆ ಚ್ಯಾಟ್ ಮಾಡಬಹುದು. ಇ-ಸ್ಪೀಕ್ ಮೂಲಕ ಬರಹಗಳ ಧ್ವನಿರೂಪ ಆಲಿಸಬಹುದು. ಮಾರುಕಟ್ಟೆ ಮಾಹಿತಿ ವಿಭಾಗದಲ್ಲಿ ಗೇರು ಉತ್ಪನ್ನಗಳನ್ನು ಕೊಡು/ಕೊಳ್ಳಲು ಸಾಧ್ಯವಿದೆ ಎಂದು ಸಂಶೋಧನಾ ಕೇಂದ್ರದ ನಿರ್ದೇಶಕ (ಪ್ರಭಾರ) ಡಾ.ಎಂ.ಜಿ.ನಾಯಕ್ ತಿಳಿಸಿದ್ದಾರೆ.
    ಇಂಗ್ಲಿಷ್, ಕನ್ನಡ ಸಹಿತ 11 ಭಾಷೆಗಳಲ್ಲಿ ಲಭ್ಯವಿದ್ದು, ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

    ತಂತ್ರಾಂಶದ ರೂವಾರಿಗಳು: ರಾಜಸ್ಥಾನ ಜೈಪುರದ ಮಾರ್ಕೆಟಿಂಗ್ ಮೈಂಡ್ಸ್ ಸಂಸ್ಥೆ ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ಕೇಂದ್ರದ ಹಿರಿಯ ವಿಜ್ಞಾನಿ ಡಾ.ಮೋಹನ್ ತಲಕಾಲುಕೊಪ್ಪ ಪರಿಕಲ್ಪನೆ, ವಿನ್ಯಾಸ ಮಾಡಿದ್ದಾರೆ. ನವದೆಹಲಿಯ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ತೋಟಗಾರಿಕೆಯ ಸಮಗ್ರ ಅಭಿವೃದ್ಧಿ ಮಿಷನ್ ಮತ್ತು ಕೊಚ್ಚಿಯ ಗೇರು ಮತ್ತು ಕೊಕೊ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ವೆಂಕಟೇಶ್ ಹುಬ್ಬಳ್ಳಿ ಆರ್ಥಿಕ ನೆರವು ನೀಡಿದ್ದಾರೆ. ಪುತ್ತೂರು ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ ಹಾಗೂ ಅಖಿಲ ಭಾರತ ಸಮನ್ವಿತ ಗೇರು ಸಂಶೋಧನಾ ಪ್ರಾಯೋಜಿತ ಕೇಂದ್ರಗಳ ವಿಜ್ಞಾನಿಗಳು ತಾಂತ್ರಿಕ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts