More

    2.13 ಲಕ್ಷ ಕುಟುಂಬಗಳಿಗೆ ಅಕ್ಕಿ ಬದಲು ಹಣ

    ಚಿಕ್ಕಮಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ವರ್ಗಾವಣೆ ಮಾಡಲು ಆರಂಭವಾಗಿದ್ದು, ಜಿಲ್ಲೆಯ 2.13ಲಕ್ಷ ಫಲಾನುಭವಿಗಳ ಬ್ಯಾಂಕ್‌ಖಾತೆಗೆ ಡಿಬಿಟಿ (ನೇರ ಲಾಭ ವರ್ಗಾವಣೆ) ಮೂಲಕ ವರ್ಗಾವಣೆ ಮಾಡಲಾಗಿದೆ.

    ಚಿಕ್ಕಮಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ವರ್ಗಾವಣೆ ಮಾಡಲು ಆರಂಭವಾಗಿದ್ದು, ಜಿಲ್ಲೆಯ 2.13ಲಕ್ಷ ಫಲಾನುಭವಿಗಳ ಬ್ಯಾಂಕ್‌ಖಾತೆಗೆ ಡಿಬಿಟಿ (ನೇರ ಲಾಭ ವರ್ಗಾವಣೆ) ಮೂಲಕ ವರ್ಗಾವಣೆ ಮಾಡಲಾಗಿದೆ.
    ಜಿಲ್ಲೆಯಲ್ಲಿ ಒಟ್ಟು 2,65,257 ಪಡಿತರ ಚೀಟಿಗಳಿದ್ದು, 25,682 ಪಡಿತರ ಚೀಟಿದಾರರು ರೇಷನ್ ಕಾರ್ಡ್‌ಗೆ ಆಧಾರ್‌ಲಿಂಕ್ ಮಾಡಿಸಿಲ್ಲ. ಅಂತಹವರನ್ನು ನ್ಯಾಯಬೆಲೆ ಅಂಗಡಿ ಮೂಲಕ ಸಂಪರ್ಕಿಸಿ ಕೂಡಲೇ ಬ್ಯಾಂಕ್ ಖಾತೆಗೆ ಹೊಂದಿರುವ ಆಧಾರ್‌ಲಿಂಕ್ ಮಾಡಲು ಅರಿವು ಮೂಡಿಸಲಾಗುತ್ತಿದೆ. 2,13,257 ಮಂದಿ ಯಶಸ್ವಿಯಾಗಿ ಪಡಿತರ ಚೀಟಿಗೆ, ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದೆ.
    ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ಅನ್ನಭಾಗ್ಯದಡಿ ತಲಾ 10 ಕೆಜಿ ಅಕ್ಕಿ ವಿತರಿಸುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ನಂತರ ಅಕ್ಕಿ ಹೊಂದಿಸಲು ಸಾಧ್ಯವಾಗದಿರುವುದರಿಂದ ತಲಾ 5 ಕೆ.ಜಿ ಅಕ್ಕಿ ಹಾಗೂ ಬಾಕಿ 5 ಕೆ.ಜಿ ಅಕ್ಕಿ ಬದಲು ಕೆಜಿಗೆ 34 ರೂ. ನಂತೆ 5 ಕೆಜಿಗೆ 170 ರೂ ಫಲಾನುಭವಿ ಖಾತೆಗೆ ಜಮೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅಗತ್ಯ ಆಹಾರ ಧಾನ್ಯವನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ಟೆಂಡರ್ ಕರೆಯಲು ನಿರ್ಧರಿಸಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಬಿಡ್‌ದಾರರು ಆಹಾರ ಧಾನ್ಯ ಸರಬರಾಜು ಮಾಡುವವರೆಗೆ 5 ಕೆ.ಜಿಗೆ ಹಣ ವರ್ಗಾವಣೆಯಾಗಲಿದೆ.
    25,682 ಆಧಾರ್‌ಲಿಂಕ್ ಬಾಕಿ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆಹಾರ ಇಲಾಖೆ ಉಪನಿರ್ದೇಶಕರು ಡಿಬಿಟಿ ವ್ಯವಸ್ಥೆಗಾಗಿ ಅಲ್ಪಾವಧಿಯಲ್ಲಿ 2,64,610 ಬಿಪಿಎಲ್ ಕುಟುಂಬಗಳ ಪಡಿತರ ಚೀಟಿಗೆ ಬ್ಯಾಂಕ್ ಖಾತೆ ಜೋಡಣೆ ಮಾಡಿ ಕುಟುಂಬ ಮುಖ್ಯಸ್ಥರನ್ನು ಗುರುತಿಸಿದ್ದಾರೆ. ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡದೆ ಬಾಕಿ ಇರುವ 25,682 ಕಾರ್ಡ್‌ದಾರರನ್ನು ಗುರುತಿಸಿ ಲಿಂಕ್‌ಮಾಡಿಸಲು ಇಲಾಖೆ ಕ್ರಮಕೈಗೊಂಡಿದೆ. ಮೂರು ವರ್ಷಗಳಿಂದ ಇ-ಕೆವೈಸಿ ಮಾಡಿಸಿರುವುದರಿಂದ ಫಲಾನುಭವಿಗಳ ಬ್ಯಾಂಕ್ ಖಾತೆ ವಿವರ ಲಭ್ಯವಾಗಿದೆ. ಬಾಕಿ ಇರುವವರು ಕೂಡಲೇ ಆಧಾರ್ ಲಿಂಕ್ ಮಾಡಿಸಲು ನ್ಯಾಯ ಬೆಲೆ ಅಂಗಡಿ ಮಾಲೀಕರ ಮೂಲಕ ತಿಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.
    ಸದಸ್ಯರ ಅನುಗುಣವಾಗಿ ಹಣ ಜಮೆ: ಅಂತ್ಯೋದಯ ಅನ್ನ ಯೋಜನೆಯಡಿ ಪಡಿತರ ಚೀಟಿ ಹೊಂದಿರುವ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಕ್ಕೆ 21 ಕೆ.ಜಿ ಅಕ್ಕಿ, 14 ಕೆ.ಜಿ ರಾಗಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಹೀಗಾಗಿ ಈ ಕುಟುಂಬಕ್ಕೆ ನಗದು ವರ್ಗಾವಣೆಯ ಸೌಲಭ್ಯ ಸಿಗುವುದಿಲ್ಲ. 4 ಸದಸ್ಯರಿದ್ದರೆ ಆ ಕುಟುಂಬಕ್ಕೆ 170 ರೂ. ಹೆಚ್ಚುವರಿ ಸದಸ್ಯರ ಅನುಗುಣವಾಗಿ ಹಣ ಸಿಗುತ್ತದೆ. ಶೃಂಗೇರಿ, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ರಾಗಿ ಉಪಯೋಗಿಸದ ಕಾರಣ ಎಎವೈ ಕಾರ್ಡ್‌ಗೆ 35 ಕೆಜಿ ಅಕ್ಕಿ , ಬಿಪಿಎಲ್ ಕಾರ್ಡ್‌ಗೆ 5 ಕೆಜಿ, ಚಿಕ್ಕಮಗಳೂರು, ತರೀಕೆರೆ, ಕಡೂರು, ಅಜ್ಜಂಪುರ ತಾಲೂಕು ವ್ಯಾಪ್ತಿಯಲ್ಲಿ ಎಎವೈಗೆ 21 ಕೆಜಿ ಅಕ್ಕಿ, 14 ಕೆಜಿ ರಾಗಿ ಮತ್ತು ಬಿಪಿಎಲ್ ಕಾರ್ಡ್‌ದಾರರಿಗೆ 3 ಕೆಜಿ ಅಕ್ಕಿ, 2 ಕೆಜಿ ರಾಗಿ ಹಾಗೂ ಎಪಿಎಲ್ ಕಾರ್ಡ್‌ದಾರರಿಗೆ 10 ಕೆಜಿ ಅಕ್ಕಿ ಪ್ರತಿ ಕೆಜಿಗೆ 15 ರೂ.ಲೆಕ್ಕದಲ್ಲಿ ವಿತರಣೆ ಮಾಡಲಾಗುತ್ತಿದೆ.
    ಎರಡು ಅಂಗಡಿ ಪರವಾನಗಿ ರದ್ದು: ನ್ಯಾಯಬೆಲೆ ಅಂಗಡಿ ಮಾಲೀಕರು ಫಲಾನುವಿಗಳಿಗೆ ಪಡಿತರ ವಿತರಣೆ ಸಂದರ್ಭದಲ್ಲಿ ಹಣ ವಸೂಲಿ ಮಾಡಿರುವುದು, ಸಮಯಕ್ಕೆ ಸರಿಯಾಗಿ ಅಂಗಡಿ ತೆರೆಯದೆ ಇರುವ ಸಂಬಂಧ ಒಟ್ಟು 41 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದ್ದು, 2 ಅಂಗಡಿ ಪರವಾನಗಿ ರದ್ದು ಪಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts