More

    300 ಕೋಟಿ ಹಣ ನನ್ನದಲ್ಲ ಆದರೆ… ಕೊನೆಗೂ ಬಾಯ್ಬಿಟ್ಟ ಕಾಂಗ್ರೆಸ್​ ಸಂಸದ, ಈ ಮಾತನ್ನು ನೀವು ಒಪ್ಪುವಿರಾ?

    ನವದೆಹಲಿ/ರಾಂಚಿ: ಕಾಂಗ್ರೆಸ್​​ ಸಂಸದ ಧೀರಜ್​ ಕುಮಾರ್​ ಸಾಹು ಕುಟುಂಬದ ಒಡೆತನದಲ್ಲಿರುವ ಒಡಿಶಾ ಮೂಲದ ಮದ್ಯ ತಯಾರಿಕಾ ಕಂಪನಿ ಮತ್ತು ಅದರ ಸಹ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ನಡೆಸಿದ ದಾಳಿಯಲ್ಲಿ ದಾಖಲೆಗಳಿಲ್ಲದ ಬರೋಬ್ಬರಿ 353.5 ಕೋಟಿ ರೂಪಾಯಿ ಪತ್ತೆಯಾದ ಸುದ್ದಿ ಇಡೀ ದೇಶದಲ್ಲೇ ಬಹಳ ಸಂಚಲನ ಮೂಡಿಸಿತು. ಹಣದ ಮೂಲದ ಬಗ್ಗೆ ಕಾಂಗ್ರೆಸ್​ ಸಂಸದ ಯಾವ ರೀತಿಯಲ್ಲಿ ಉತ್ತರ ನೀಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಕೊನೆಗೂ ಮೌನ ಮುರಿದಿರುವ ಧೀರಜ್​ ಕುಮಾರ್​ ಸಾಹು, ಕಾಂಗ್ರೆಸ್​ ಅಥವಾ ಇನ್ನಿತರ ಪಕ್ಷಗಳಿಗೂ ಪತ್ತೆಯಾಗಿರುವ ಹಣಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

    ಯಾರಿಗೂ ಸಂಬಂಧಿಸಿದ್ದಲ್ಲ ಅಂದ ಮೇಲೆ ಹಣದ ಯಜಮಾನ ಯಾರು ಎಂಬ ಪ್ರಶ್ನೆ ಮೂಡದೇ ಇರದು. ಅದಕ್ಕೆ ಉತ್ತರ ನೀಡಿರುವ ಸಾಹು, ಐಟಿ ಅಧಿಕಾರಿಗಳು ವಶಕ್ಕೆ ಪಡೆದಿರುವ ಹಣ ನನ್ನ ಮದ್ಯ ತಯಾರಿಕಾ ಸಂಸ್ಥೆಗಳಿಗೆ ಸಂಬಂಧಿಸಿದ್ದಾಗಿದೆ. ಮದ್ಯದ ವ್ಯವಹಾರದಿಂದ ಬಂದ ಹಣವಾಗಿದ್ದು, ಕಾಂಗ್ರೆಸ್​ ಮತ್ತು ಯಾವುದೇ ಪಕ್ಷಗಳಿಗೂ ಇದಕ್ಕೂ ಸಂಬಂಧ ಇಲ್ಲ. ನಾನು ಯಾವುದೇ ವ್ಯವಹಾರದಲ್ಲಿ ತೊಡಗಿಲ್ಲ. ಇದಕ್ಕೆಲ್ಲ ನನ್ನ ಕುಟುಂಬದ ಸದಸ್ಯರು ಉತ್ತರ ಕೊಡಬೇಕಿದೆ ಎಂದು ಹೇಳಿದ್ದಾರೆ.

    ಸಂಸದನ ಮಾತು ಒಪ್ಪುವಿರಾ?
    ವಶಕ್ಕೆ ಪಡೆದ ಹಣ ನನಗೆ ಸೇರಿದ್ದಲ್ಲ, ನನ್ನ ಕುಟುಂಬ ಮತ್ತು ಸಂಬಂಧಿತ ಇತರೆ ಸಂಸ್ಥೆಗಳಿಗೆ ಸೇರಿದ್ದಾಗಿದೆ. ಸದ್ಯ ಐಟಿ ದಾಳಿ ನಡೆದಿದೆ. ನಾನು ಐಟಿ ಅಧಿಕಾರಿಗಳು ಕೇಳುವ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ ಎಂದು ಸಾಹು ಹೇಳಿದರು. ಇನ್ನು ಸಾಹು ಕುಟುಂಬದ ಕಡೆ ಬೊಟ್ಟು ಮಾಡಿದ್ದಾರೆ. ಹಣ ನನ್ನದಲ್ಲ, ಆದ್ರೆ ಕುಟುಂಬಕ್ಕೆ ಸೇರಿದ್ದು, ಅಂತಾರೆ ಹಾಗಾದರೆ ಇವರಿಗೆ ಗೊತ್ತಿಲ್ಲದ ಹಾಗೆ ಎಲ್ಲ ವ್ಯವಹಾರ ನಡೆಯುತ್ತಾ? ಕುಟುಂಬ ಅಂದಮೇಲೆ ಸಂಸದರು ಕೂಡ ಅದರ ಭಾಗವಲ್ಲವೇ? ಇದೀಗ ಇವರ ಮಾತಿನಿಂದ ಇನ್ನಷ್ಟು ಅನುಮಾನಗಳು ಹುಟ್ಟಿಕೊಂಡಿದ್ದು, ತನಿಖೆಯಿಂದ ಸತ್ಯಾಂಶ ತಿಳಿದುಬರಬೇಕಿದೆ.

    ಐಟಿ ಅಧಿಕಾರಿಗಳು ವಶಕ್ಕೆ ಪಡೆದಿರುವುದು ಕಪ್ಪುಹಣ ಎಂಬ ಬಿಜೆಪಿ ಆರೋಪಕ್ಕೆ ಉತ್ತರ ನೀಡಿದ ಸಾಹು, ನನ್ನ ಕುಟುಂಬ ನಡೆಸುವ ವ್ಯವಹಾರಿಕ ಸಂಸ್ಥೆಗಳೇ ಹಣದ ಪ್ರಮುಖ ಮೂಲವಾಗಿವೆ. ಆದರೆ, ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಪುನರುಚ್ಛರಿಸಿದರು. ಅಲ್ಲದೆ, ವಶಪಡಿಸಿಕೊಂಡ ಹಣ ಕಪ್ಪುಹಣವೋ ಅಥವಾ ಅಧಿಕೃತ ಹಣವೋ ಎಂಬುದನ್ನು ಆದಾಯ ತೆರಿಗೆ ಇಲಾಖೆ ನಿರ್ಧರಿಸಲಿ ಎಂದು ಒತ್ತಾಯಿಸಿದರು.

    ಏನಿದು ಪ್ರಕರಣ?
    ಒಡಿಶಾದ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್​ನಲ್ಲಿ ತೆರಿಗೆ ವಂಚನೆ ನಡೆದಿದೆ ಎಂಬ ಶಂಕೆಯ ಮೇರೆಗೆ ಡಿ. 6ರಂದು ನಡೆದ ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ಭಾರೀ ಹಗರಣವೇ ಬಯಲಾಯಿತು. ಸಂಸದ ಧೀರಜ್ ಸಾಹು ಅವರು ಒಡಿಶಾದ ಮದ್ಯ ತಯಾರಿಕಾ ಕಂಪನಿ ಬಲದೇವ್ ಸಾಹು ಆಂಡ್ ಗ್ರೂಪ್ ಕಂಪನಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು 10 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಅದರಲ್ಲಿ ಬಲದೇವ್ ಸಾಹು ಕಂಪನಿಯ ಬೋಲಂಗಿರ್ ಕಚೇರಿಯಿಂದ 30 ಕಿ.ಮೀ ದೂರದಲ್ಲಿರುವ ಸಾತ್ಪುರ ಕಚೇರಿಯಲ್ಲಿ 230 ಕೋಟಿ ರೂಪಾಯಿ ಪತ್ತೆಯಾಯಾಯಿತು. ಉಳಿದ ಹಣವನ್ನು ತಿತ್ಲಗಢ, ಸಂಬಲ್ಪುರ್ ಮತ್ತು ರಾಂಚಿಯಲ್ಲಿ ವಶಕ್ಕೆ ಪಡೆಯಲಾಯಿತು. ಕಚೇರಿಯ ಒಂಬತ್ತು ಕಪಾಟುಗಳಲ್ಲಿ 500, 200 ಮತ್ತು 100 ರೂಪಾಯಿ ನೋಟುಗಳ ಬಂಡಲ್​ಗಳನ್ನು ಇರಿಸಲಾಗಿತ್ತು. ಎಲ್ಲ ಹಣವನ್ನು ಎಣಿಸಲು ಒಂದು ವಾರದ ಸಮಯ ತೆಗೆದುಕೊಂಡಿತು. ಸುಮಾರು 40 ದೊಡ್ಡ ಮತ್ತು ಚಿಕ್ಕದಾದ ನೋಟು ಎಣಿಕೆ ಯಂತ್ರಗಳನ್ನು ನೋಟು ಎಣಿಸಲು ಬಳಸಲಾಯಿತು. ಬ್ಯಾಂಕ್​ ಸಿಬ್ಬಂದಿ ಸೇರಿದಂತೆ ಅನೇಕ ಇಲಾಖೆಗಳ ಸಿಬ್ಬಂದಿ ನೋಟು ಎಣಿಸಲು ನಿಯೋಜಿಸಲಾಗಿತ್ತು.

    ಧೀರಜ್ ಸಾಹು ಯಾರು?
    ಜಾರ್ಖಂಡ್​ನ ಲೋಹರ್ಡಗಾ ನಿವಾಸಿಯಾಗಿರುವ ಧೀರಜ್ ಸಾಹು ಕಾಂಗ್ರೆಸ್​ನ ಹಿರಿಯ ನಾಯಕ. 1977ರಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಆರಂಭಿಸಿದ ಧೀರಜ್ ಮೂರನೇ ಬಾರಿ ರಾಜ್ಯಸಭಾ ಸಂಸದರಾಗಿದ್ದಾರೆ. ಇದಕ್ಕೂ ಮುನ್ನ ಅವರು 2010-2016ರ ಅವಧಿಯಲ್ಲಿ ಕಾಂಗ್ರೆಸ್​ನ ರಾಜ್ಯಸಭಾ ಸಂಸದರಾಗಿದ್ದರು. 2018ರಲ್ಲಿ ಅವರು ಜಾರ್ಖಂಡ್​ನಲ್ಲಿ ವಿರೋಧ ಪಕ್ಷದ ಜಂಟಿ ಅಭ್ಯರ್ಥಿಯಾಗಿ ಗೆದ್ದರು. ಸಾಹು ಅವರು 2003-05ರಲ್ಲಿ ರಾಜ್ಯ ಕಾಂಗ್ರೆಸ್ ಸಮಿತಿಯ ಸದಸ್ಯರೂ ಆಗಿದ್ದರು. (ಏಜೆನ್ಸೀಸ್​)

    300 ಕೋಟಿಗೂ ಅಧಿಕ ನಗದು ಪತ್ತೆಯಾದ ಬಳಿಕ ಬಚ್ಚಿಟ್ಟ ಚಿನ್ನದ ಶೋಧಕ್ಕೆ ಟೆಕ್ನಾಲಜಿ ಬಳಕೆ!

    ಪಠ್ಯದಲ್ಲಿ ಮತ್ತೆ ಟಿಪ್ಪು?; ಸಂಕ್ರಾಂತಿಗೆ ಪರಿಷ್ಕೃತ ಪಠ್ಯಕ್ರಮ ಸಿದ್ಧ

    ಫೀಲ್ಡಿಂಗ್​ನಲ್ಲಿ ಚಿನ್ನದ ಪದಕ ಗೆದ್ದ ಸಿರಾಜ್​; ಸೂರ್ಯಕುಮಾರ್​ಗೆ ಅವಳಿ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts