More

    ರಾಜಮೌಳಿಗೆ ಹೊಸ ತಲೆನೋವು ತಂದಿಟ್ಟ ಲೇಡಿ! ರಿಲೀಸ್​ಗೂ ಮುನ್ನ ಕೋರ್ಟ್ ಮೆಟ್ಟಿಲೇರಿದ RRR

    RRR ಚಿತ್ರದ ಬಿಡುಗಡೆಗೆ ದೇಶದಾದ್ಯಂತ ಸಿನಿ ಪ್ರೇಕ್ಷಕರು ಕಾದುಕುಳಿತಿದ್ದಾರೆ. ಆದರೆ, ಈ ಚಿತ್ರದ ರಿಲೀಸ್​ಗೆ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇವೆ. ಜನವರಿ 7 ರಂದು ಬಿಡುಗಡೆಯಾಗ ಬೇಕಿದ್ದ ಚಿತ್ರ ಮತ್ತೆ ರಿಲೀಸ್ ಅನ್ನು ಮುಂದೂಡಿದೆ. ಇದಕ್ಕೆ ಲಾಕ್​ಡೌನ್, ಟಿಕೆಟ್ ಬೆಲೆ ಕಡಿತ ಅಂತ ಹೀಗೆ ಹಲವಾರು ಕಾರಣಗಳನ್ನು ಕೊಟ್ಟಿದೆ. ಇದೀಗ, ಈ ಸಿನಿಮಾ ಮೇಲೆ ಹೊಸದೊಂದು ದೂರು ದಾಖಲಾಗಿದೆ. ಹೌದು, ತೆಲಂಗಾಣ ಹೈಕೋರ್ಟ್​ನಲ್ಲಿ RRR ಸಿನಿಮಾ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.
    ಹೌದು, ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಅಲ್ಲುರಿ ಸೌಮ್ಯ ಅವರು RRR ಚಿತ್ರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. RRR ಚಿತ್ರ ಆಂಧ್ರ ಪ್ರದೇಶದ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮ ರಾಜು ಹಾಗೂ ಕೊಮರಂ ಭೀಮ್ ಕುರಿತ ಕಥೆಯಾಗಿದೆ. ಹಾಗಾಗಿ, ಅಲ್ಲುರಿ ಸೌಮ್ಯ ಅವರು ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯನ್ನು ಈ ಚಿತ್ರದಲ್ಲಿ ತಿರುಚಲಾಗಿದೆ ಎಂಬ ಕಾರಣಕ್ಕೆ ದೂರು ದಾಖಲಿಸಿದ್ದಾರೆ. ಜೊತೆಗೆ, ಅಲ್ಲುರಿ ಸೀತಾರಾಮ ರಾಜು ಹಾಗೂ ಕೊಮರಂ ಭೀಮ್ ಅವರ ಬೆಂಬಲಿಗರಿಗೆ RRR ಸಿನಿಮಾದಲ್ಲಿ ಅವಮಾನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
    ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿರುವುದರಿಂದ ಈ ದೂರು ಕೂಡಲೆ ನ್ಯಾಯಾಧೀಶರಾದ ಉಜ್ವಲ್ ಭುಯಾನ್ ಹಾಗೂ ವೆಂಕಟೇಶ್ವರ ರಡ್ಡಿಯವರ ಗಮನಕ್ಕೆ ಬಂದಿದೆ. ನ್ಯಾಯಾಧೀಶರು ಕೇಸ್ ಆಲಿಸುವುದಾಗಿ ಹೇಳಿದ್ದಾರಂತೆ. ಹೀಗಾಗಿ, RRR ಚಿತ್ರ ರಿಲೀಸ್​​ಗೂ ಮುನ್ನವೇ ಕೋರ್ಟ್ ಮೆಟ್ಟಿಲೇರುತ್ತೆ ಎನ್ನಲಾಗಿದೆ. ಒಂದು ಕಡೆ ಸಿನಿಮಾ ಬಿಡುಗಡೆಗೆ ಸಂಕಷ್ಟಗಳು. ಮತ್ತೊಂದು ಕಡೆ ಈ ಹೊಸ ದೂರು. ಇದರಿಂದ, RRR ಚಿತ್ರ ನೋಡಲು ಅಭಿಮಾನಿಗಳಿಗೆ ಯಾವಾಗ ಸಮಯ ಕೂಡಿಬರಲಿದೆ ಎಂದು ಕಾದು ನೋಡಬೇಕಿದೆ. 

    ಅಪ್ಪು ಹಾಡಿದ ಮತ್ತೊಂದು ಹೊಸ ಹಾಡು ರಿಲೀಸ್! ಭಾವುಕರಾದ ಅಭಿಮಾನಿಗಳು..

    ಈಜುಕೊಳದಲ್ಲಿ ನಟಿ ಶ್ರಿಯಾ ಲಿಪ್ ಲಾಕ್! ಪೋಟೋ ವೈರಲ್ ಮಾಡಿದ ನೆಟ್ಟಿಗರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts