More

    ಶಾಲಾ ಆವರಣ ಗೋಡೆಗಳ ಮೇಲೀಗ ಕರೊನಾ ಜಾಗೃತಿ ಚಿತ್ರಗಳು

    ಅಲಪ್ಪುಳ: ವಿವಿಧ ಕಲಾವಿದರು, ವೃತ್ತಿಪರರು, ಜನಸಾಮಾನ್ಯರು ಕರೊನಾ ವೈರಸ್ ವಿರುದ್ಧ ತಮ್ಮದೇ ಶೈಲಿ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
    ದನ ಕಾಯುವವರು ಎಮ್ಮೆ ಮೇಲೆ ಕುಳಿತು ಜಾಗೃತಿ ಮೂಡಿಸಿದ್ದೂ ಆಯಿತು. ಇದೀಗ ಕಾರ್ಟೂನಿಸ್ಟ್​​​ಗಳು ಶಾಲಾ ಆವರಣ ಗೋಡೆಗಳ ಮೇಲೆ ಚಿತ್ರ ಬಿಡಿಸಿ, ಅಡಿ ಬರಹ ಬರೆಯುವ ಮೂಲಕ ಕರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.

    ಇದನ್ನೂ ಓದಿ: ಅಂತರದ ಅರಿವು ಮೂಡಿಸುವ ‘ಅರಿಕಿಲ್​​’

    ಕರೊನಾ ವೈರಸ್ ‘ಸರಪಳಿ ಹರಿಯುವ ಅಭಿಯಾನ’ದ ಭಾಗವಾಗಿ ಪಟ್ಟಣದಲ್ಲಿ ಕೋವಿಡ್- 19 ತಡೆಗಟ್ಟುವಲ್ಲಿ ಮಹತ್ವದ ಸಂದೇಶ ಸಾರುವ ಗೋಡೆ ಮೇಲೆ ಕಾಟೂರ್ನ್ ಚಿತ್ರ ಬಿಡಿಸುವ ಕಾರ್ಯ ಇಲ್ಲಿ ನಡೆದಿದೆ.
    ಇಲ್ಲಿಯ ಕೆಲ ಆವರಣ ಗೋಡೆಗಳ ಮೇಲೆ ರಕ್ಷಣೆ ಮತ್ತು ಮುಂಜಾಗೃತೆಯ ಸಂಕೇತವಾಗಿ ಕೆಲವು ಕಾರ್ಟೂನ್ ಚಿತ್ರಗಳು ಮೂಡಿಬಂದಿವೆ.
    ಸಾಮಾಜಿಕ ಭದ್ರತಾ ಅಭಿಯಾನ ಮತ್ತು ಕೇರಳ ಕಾರ್ಟೂನ್ ಅಕಾಡೆಮಿ ಜಂಟಿಯಾಗಿ ಮಹಮ್ಮದನ್ಸ್ ಶಾಲೆಯ ಗೋಡೆಗಳ ಮೇಲೆ ಈ ಕರೊನಾ ವೈರಸ್ ‘ಸರಪಳಿ ಹರಿಯುವ’ ಅಭಿಯಾನದ ಒಂದು ಭಾಗವಾಗಿ ಬಿತ್ರ ಬಿಡಿಸುವ ಕಾರ್ಯದಲ್ಲಿ ತೊಡಗಿವೆ.

    ಇದನ್ನೂ ಓದಿ: ಕರಾಮುವಿ: ಜೂನ್ 30ರೊಳಗೆ ಪರೀಕ್ಷಾ ಶುಲ್ಕ ಪಾವತಿಸಿ

    ಒಂದೆಡೆ ಪ್ರಸಿದ್ಧ ನಟ ಶಮ್ಮಿ ಚಿತ್ರವಿದ್ದು, ಅದರ ಕೆಳಗೆ ಸಂಭಾಷಣೆಯೊಂದರ ತುಣುಕು ಇದೆ. ‘ನೀವು ರಕ್ಷಣೆ ಬಗ್ಗೆ ಕಾಳಜಿ ವಹಿಸಿದರೆ ಹೀರೋ. ಇಲ್ಲದಿದ್ದರೆ ಜೀರೋ’ ಎಂಬ ಅಡಿಬರಹವಿದೆ.
    ಮುಖದ ಕೆಳಗೆ ಜಾರಿದ ಮಾಸ್ಕ್ ಇರುವ ಬೈಕ್ ಸವಾರನನ್ನು ನೋಡಿ ಕರೊನಾ ವೈರಸ್ ನಗುವಂತೆ ಒಂದು ಚಿತ್ರವಿದೆ.

    ಅರೆರೆ..! ಹುಲಿರಾಜ ಬೀದಿಗಿಳಿದ …!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts