More

    ನಿಯಂತ್ರಣಕ್ಕೆ ಬರುತ್ತಿಲ್ಲ ಕರೊನಾ ; ಜಿಲ್ಲೆಯಲ್ಲಿ ಬರೋಬ್ಬರಿ 2221 ಜನರಿಗೆ ಪಾಸಿಟಿವ್

    ತುಮಕೂರು : ಜಿಲ್ಲೆಯಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ, ಬುಧವಾರ ಕೂಡ ಬರೋಬ್ಬರಿ 2221 ಜನರಿಗೆ ಸೋಂಕು ದೃಢವಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 14781ಕ್ಕೇರಿದೆ.

    ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಒಂದು ಸಾವಿರ ಆಸುಪಾಸಿನ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಾಧ್ಯವಿದ್ದು, 13 ಸಾವಿರಕ್ಕೂ ಹೆಚ್ಚಿನ ಸೋಂಕಿತರು ಹಾಗೂ ಅವರ ಸಂಪರ್ಕಿತರು ಮನೆಯಲ್ಲಿಯೇ ಉಳಿದಿದ್ದಾರೆ. ಗ್ರಾಮೀಣ ಭಾಗದಲ್ಲಿ ಸೋಂಕು ಪರೀಕ್ಷೆಯನ್ನು ಮಾಡಿಸಿಕೊಳ್ಳದೆ ಸಾವಿರಾರು ಸೋಂಕಿತರು ಓಡಾಡುತ್ತಿದ್ದು, ಭವಿಷ್ಯದಲ್ಲಿ ಸೋಂಕು ಸ್ಫೋಟದ ಮುನ್ಸೂಚನೆಯಿದೆ.

    ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 1490 ಜನರು ಗುಣಮುಖರಾಗಿ ಮನೆಗೆ ವಾಪಸಾಗಿದ್ದು ಈವರೆಗೆ 39117 ಜನರು ಕರೊನಾ ಗೆದ್ದಿದ್ದಾರೆ, ಆಸ್ಪತ್ರೆಗಳ ತುರ್ತು ನಿಗಾ ಘಟಕದಲ್ಲಿ ತೀವ್ರ ಉಸಿರಾಟದಿಂದ ಬಳಲುತ್ತಿರುವ 130 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಬುಧವಾರ 13 ಜನರನ್ನು ಕರೊನಾ ಬಲಿತೆಗೆದುಕೊಂಡಿದೆ.

    ಒಟ್ಟು ಸೋಂಕಿತರ ಪೈಕಿ 1350 ಪುರುಷರು, 862 ಮಹಿಳೆಯರಿದ್ದು ಐದು ವರ್ಷದೊಳಗಿನ 12 ಮಕ್ಕಳು, 60 ವರ್ಷ ಮೇಲ್ಪಟ್ಟ 313 ಹಿರಿಯರಿಗೆ ಸೋಂಕು ತಗುಲಿದೆ.
    ಗುಬ್ಬಿ ತಾಲೂಕು ಚೇಳೂರಿನ 48 ವರ್ಷದ ವ್ಯಕ್ತಿ, ತುಮಕೂರು ತಾಲೂಕು ಭೀಮಸಂದ್ರದ 47 ವರ್ಷದ ವ್ಯಕ್ತಿ, ಹೆಬ್ಬೂರಿನ 40 ವರ್ಷದ ಮಹಿಳೆ, ಗೂಳೂರಿನ 50 ವರ್ಷದ ವ್ಯಕ್ತಿ, ಕದರನಹಳ್ಳಿಯ 54 ವರ್ಷ ವ್ಯಕ್ತಿ, ಕೃಷ್ಣನಗರದ 76 ವರ್ಷದ ವೃದ್ಧ, ಕ್ಯಾತಸಂದ್ರದ 36 ವರ್ಷದ ಯುವಕ, ಶಿರಾ ತಾಲೂಕು ಚಿಕ್ಕಹುಲಿಕುಂಟೆಯ 65 ವರ್ಷದ ವೃದ್ಧೆ, ತಿಮ್ಮನಹಳ್ಳಿಯ 71 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.

    ಮಧುಗಿರಿಯ 84 ವರ್ಷದ ವೃದ್ಧ, ಶಿರಾ ತಾಲೂಕು ಉಮಾಪತಿ ಪಾಳ್ಯದ 65 ವರ್ಷದ ವೃದ್ಧೆ, ತುಮಕೂರು ನಗರದ ಪಿಜಿ ಲೇಔಟ್ 40 ವರ್ಷ ಪುರುಷ, ಹನುಮಂತಪುರದ 65 ವರ್ಷದ ವೃದ್ಧೆಯನ್ನು ಕರೊನಾ ಬಲಿತೆಗೆದುಕೊಂಡಿದೆ.

    ಜಿ.ಬಿ.ಜ್ಯೋತಿಗಣೇಶ್‌ಗೆ ಪಾಸಿಟಿವ್ : ತುಮಕೂರು ನಗರದಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ಸಿಗದೇ ತೀವ್ರ ತೊಂದರೆಯಾಗಿರುವ ನಡುವೆಯೇ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌ಗೂ ಸೋಂಕು ದೃಢವಾಗಿದೆ. ಕೆಲವು ದಿನಗಳಿಂದ ಜ್ಯೋತಿಗಣೇಶ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ ಬುಧವಾರ ಪ್ರಕಟಣೆ ಮೂಲಕ ಕ್ವಾರಂಟೈನ್ ಆಗಿರುವುದನ್ನು ಶಾಸಕ ದೃಢಪಡಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಗಾಂಧಿನಗರದ ಮನೆಯಲ್ಲಿ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದು, ಕಳೆದ ನಾಲ್ಕೈದು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿದ್ದವರು ತಪಾಸಣೆಗೆ ಒಳಗಾಗುವಂತೆ ಮನವಿ ಮಾಡಿದ್ದಾರೆ. ಸೋಂಕು ದೃಢವಾಗಿದ್ದು ಜನರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತದ ಜತೆ ಸಂಪರ್ಕದಲ್ಲಿದ್ದು ಆಮ್ಲಜನಕ, ಹಾಸಿಗೆ ವ್ಯವಸ್ಥೆ ಕಲ್ಪಿಸುತ್ತಿದ್ದೇನೆ ಎಂದು ಭರವಸೆ ನೀಡಿದ್ದಾರೆ.

    ರೇಷ್ಮೆ ಬೆಳೆಗಾರರಿಗೆ ಸಹಾಯವಾಣಿ: ಎಲ್ಲ ತಾಲೂಕುಗಳ ರೇಷ್ಮೆ ಸಹಾಯಕ ನಿರ್ದೇಶಕರು, ರೇಷ್ಮೆ ವಿಸ್ತರಣಾಧಿಕಾರಿಗಳು ತಮ್ಮ ತಮ್ಮ ಕಚೇರಿಯಲ್ಲಿ ರೇಷ್ಮೆ ಬೆಳೆಗಾರರಿಗೆ ಹಾಗೂ ಭಾಗಿದಾರರಿಗೆ ಯಾವುದೇ ಸಮಸ್ಯೆಯಾಗದಂತೆ ನಿಗಾವಹಿಸಲು ಮತ್ತು ಭಾಗಿದಾರರ ಸಮಸ್ಯೆಗಳಿಗೆ ಸ್ಪಂದಿಸಲು ತುರ್ತಾಗಿ ಸಹಾಯವಾಣಿ ಸ್ಥಾಪಿಸಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮೊಬೈಲ್ ಸ್ವಿಚ್ ಆಫ್ ವಾಡದೆ ರೈತರು ವಿಶೇಷವಾಗಿ ರೇಷ್ಮೆಗೂಡು ವಾರುಕಟ್ಟೆ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆ ತಿಳಿಸಿದರೆ ಕೂಡಲೇ ವಾರ್ಗದರ್ಶನ, ಕ್ರಮ ತೆಗೆದುಕೊಳ್ಳಬೇಕು ಎಂದು ರೇಷ್ಮೆ ಉಪನಿರ್ದೇಶಕ ಬಾಲಕೃಷ್ಣ ನಿರ್ದೇಶಿಸಿದ್ದಾರೆ. ಮಾಹಿತಿಗೆ ಪಾವಗಡ ಮೊ.9731939848, ವೈ.ಎನ್.ಹೊಸಕೋಟೆ 9880707439, ಮಧುಗಿರಿ 9945304756, 9845878994, ಕೊಡಿಗೇನಹಳ್ಳಿ 8105199107; ಕೊರಟಗೆರೆ 9945304756, 9113622593,9845607234, ಹೊಳವನಹಳ್ಳಿ 9900700856, ಶಿರಾ 7760363461, 6363181161, ಬರಗೂರು 9844072362, ತುಮಕೂರು 9448615358, 9449882568, ಗುಬ್ಬಿ/ತುರುವೇಕೆರೆ 9448708551, 9482158224, 8660630685, ಚಿಕ್ಕನಾಯಕನಹಳ್ಳಿ/ತಿಪಟೂರೂ 8123543499, 7829140638, 9008618707 ಸಂಪರ್ಕಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts