More

    ಬ್ರಾಥ್‌ವೇಟ್ ಅವರ ಈಡನ್ ಗಾರ್ಡನ್ಸ್ ಸಾಧನೆಯ ನೆನಪಿನಲ್ಲಿ ಅರಳಿದ ಈಡನ್ ರೋಸ್!

    ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆದಿದ್ದ 2016ರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಲ್ರೌಂಡರ್ ಕಾರ್ಲೋಸ್ ಬ್ರಾಥ್‌ವೇಟ್, ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಎಸೆದ ಕೊನೇ ಓವರ್‌ನಲ್ಲಿ 19 ರನ್ ಬೇಕಿದ್ದಾಗ ಸತತ 4 ಸಿಕ್ಸರ್ ಸಿಡಿಸಿ ವೆಸ್ಟ್ ಇಂಡೀಸ್ ತಂಡವನ್ನು ಗೆಲ್ಲಿಸಿದ್ದರು. ಕೋಲ್ಕತದ ಈಡನ್ ಗಾಡನ್ಸ್ ಕ್ರೀಡಾಂಗಣದಲ್ಲಿ ಸಾಧಿಸಿದ್ದ ಈ ಅಪೂರ್ವ ಗೆಲುವಿನ ನೆನಪಿನಲ್ಲಿ ಇದೀಗ ಬ್ರಾಥ್‌ವೇಟ್ ತಮ್ಮ ಮಗಳಿಗೆ ‘ಈಡನ್ ರೋಸ್ ಬ್ರಾಥ್‌ವೇಟ್’ ಎಂದು ಹೆಸರಿಟ್ಟಿದ್ದಾರೆ!

    ಭಾನುವಾರವಷ್ಟೇ ಬ್ರಾಥ್‌ವೇಟ್ ಪತ್ನಿ ಜೆಸ್ಸಿಕಾ ಫೆಲಿಕ್ಸ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅದರ ಬೆನ್ನಲ್ಲೇ ಬ್ರಾಥ್‌ವೇಟ್ ಪುತ್ರಿಗೆ ‘ಈಡನ್ ರೋಸ್ ಬ್ರಾಥ್‌ವೇಟ್’ ಎಂದು ನಾಮಕರಣ ಮಾಡಿದ್ದಾರೆ. ‘ಈ ಹೆಸರು ನೆನಪಿಟ್ಟುಕೊಳ್ಳಿ’ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಕೂಡ ಹಾಕಿದ್ದಾರೆ. 2016ರ ಫೈನಲ್‌ನಲ್ಲಿ ಬ್ರಾಥ್‌ವೇಟ್ ಸತತ 4 ಸಿಕ್ಸರ್ ಸಿಡಿಸಿದಾಗ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಇಯಾನ್ ಬಿಷಪ್ ಕೂಡ ‘ಕಾರ್ಲೋಸ್ ಬ್ರಾಥ್‌ವೇಟ್, ಈ ಹೆಸರು ನೆನಪಿಟ್ಟುಕೊಳ್ಳಿ’ ಎಂದಿದ್ದು ಜನಪ್ರಿಯವಾಗಿತ್ತು. ಅದನ್ನೇ ಅವರು ಪುತ್ರಿಯ ಹೆಸರು ಪ್ರಕಟಿಸುವ ವೇಳೆ ಮೆಲುಕುಹಾಕಿದ್ದಾರೆ.

    ಆ ಅಮೋಘ ಸಾಧನೆಯ ಬಳಿಕ ಬ್ರಾಥ್‌ವೇಟ್ ಜೀವನವೇ ಬದಲಾಗಿತ್ತು. ವಿಂಡೀಸ್ ಟಿ20 ತಂಡದ ನಾಯಕತ್ವವೂ ಅವರಿಗೆ ಒಲಿದಿತ್ತು. ಐಪಿಎಲ್‌ನಲ್ಲಿ ದೊಡ್ಡ ಮೊತ್ತದ ಒಪ್ಪಂದಗಳನ್ನೂ ಪಡೆದಿದ್ದರು. 35 ವರ್ಷದ ಬ್ರಾಥ್‌ವೇಟ್ ವಿಂಡೀಸ್ ಪರ ಇದುವರೆಗೆ 44 ಏಕದಿನ ಮತ್ತು 41 ಟಿ20 ಪಂದ್ಯ ಆಡಿದ್ದಾರೆ.

    ರಣಜಿ ಟ್ರೋಫಿಯಲ್ಲಿ ಚೇತೇಶ್ವರ ಪೂಜಾರ V/s ಅಜಿಂಕ್ಯ ರಹಾನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts