More

    ವೃತ್ತಿ ಯಶಸ್ಸಿಗೆ ನೈಪುಣ್ಯತೆ ಅಗತ್ಯ

    ಬೆಳಗಾವಿ: ಸ್ವ-ಉದ್ಯೋಗ ಶ್ರೇಷ್ಠ ಕಾಯಕ. ಅದರಲ್ಲಿ ಯಶಸ್ವಿ ಆಗಬೇಕಾದರೆ ಕೌಶಲ, ನೈಪುಣ್ಯತೆ ಅಗತ್ಯ ಎಂದು ಕೆನರಾ ಬ್ಯಾಂಕ್ ಬೆನಕನಹಳ್ಳಿ ಶಾಖೆ ವ್ಯವಸ್ಥಾಪಕಿ ಅಖಿಲಾ ನಾಯಕ ಹೇಳಿದರು.

    ನಗರದ ಆಟೋನಗರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಮಹಿಳೆಯರಿಗಾಗಿ ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಹಾಗೂ ಜಿಪಂ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ 13 ದಿನದ ಕೃತಕ ಆಭರಣಗಳ ತಯಾರಿಕೆ ತರಬೇತಿ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವ-ಉದ್ಯೋಗ ಕೈಗೊಳ್ಳುವವರಿಗೆ ಮಾರುಕಟ್ಟೆ ಅರಿವು ಮುಖ್ಯ. ಕೆಲಸದಲ್ಲಿ ಪ್ರಾಮಾಣಿಕತೆ ಇರಬೇಕು. ಶ್ರದ್ಧೆಯಿಂದ ಕೆಲಸ ಮಾಡಿ ಯಶಸ್ವಿಯಾಗಬೇಕು ಎಂದು ಸಲಹೆ ನೀಡಿದರು. ಸಂಸ್ಥೆಯ ನಿರ್ದೇಶಕ ಸುರೇಂದ್ರ ಮಾತನಾಡಿ, ಸ್ವ-ಉದ್ಯೋಗಕ್ಕೆ ಶಿಕ್ಷಣದ ಅವಶ್ಯಕತೆ ಇಲ್ಲ. ಆದರೆ, ಕೌಶಲ ಅರಿತ ವ್ಯಕ್ತಿ ಸ್ವ- ಉದ್ಯೋಗ ಮಾಡಬಹುದು.

    ಬ್ಯಾಂಕ್ ವ್ಯವಹಾರಗಳ ಬಗ್ಗೆ ತಿಳಿದುಕೊಂಡು, ಮುದ್ರಾ ಯೋಜನೆಯ ಸದುಪಯೋಗ ಪಡೆಯಬೇಕು ಎಂದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಂಸ್ಥೆಯ ಉಪನ್ಯಾಸಕಿ ರಾಜೇಶ್ವರಿ ದೇವಲಾಪುರ ನಿರೂಪಿಸಿದರು. ಚಂದ್ರಕಾಂತ ಹಿರೇಮಠ ಸ್ವಾಗತಿಸಿದರು. ಸಂಸ್ಥೆ ಸಿಬ್ಬಂದಿ ಬಸವರಾಜ ಕುಬಸದ, ಅಬ್ದುಲ್ ರಜಾಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts