More

    ಅಧ್ಯಯನ, ಪರಿಶ್ರಮದಿಂದ ಹೆಚ್ಚಲಿದೆ ವೃತ್ತಿ ನೈಪುಣ್ಯ

    ಅರಕಲಗೂಡು: ವಕೀಲ ವೃತ್ತಿ ಮಹತ್ವದ್ದಾಗಿದ್ದು, ಸತತ ಅಧ್ಯಯನ ಮತ್ತು ಪರಿಶ್ರಮದಿಂದ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡು ಸಮರ್ಥವಾಗಿ ವಾದ ಮಂಡಿಸಿದಾಗ ಕಕ್ಷಿದಾರರಿಗೆ ನ್ಯಾಯ ದೊರಕಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ತ್ಯಾಗರಾಜ್ ಎನ್.ಇನವಳ್ಳಿ ಹೇಳಿದರು.


    ಪಟ್ಟಣದ ಜೆಎಂಎಫ್ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ ಇತ್ತೀಚೆಗೆ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾನೂನಿನ ಆಳವಾದ ಜ್ಞಾನ ಹೊಂದುವುದಲ್ಲದೆ, ಹೊಸದಾಗಿ ಬರುತ್ತಿರುವ ಕಾನೂನುಗಳ ಕುರಿತು ಅರಿವು ಮೂಡಿಸಿಕೊಂಡು ಎತ್ತರಕ್ಕೆ ಬೆಳೆಯುತ್ತ ಸಾಗಿದಾಗ ವೃತ್ತಿಯಲ್ಲಿ ಉನ್ನತ ಸಾಧನೆ ಸಾಧ್ಯ. ಮೊದಲ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್ ಜನ್ಮದಿನದ ಪ್ರಯುಕ್ತ ವಕೀಲರ ದಿನಾಚರಣೆ ಆಚರಿಸುತ್ತಿದ್ದು, ಇವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಇಲ್ಲಿನ ನ್ಯಾಯಾಲಯದಲ್ಲಿ ವಕೀಲರಾಗಿದ್ದ ಎ. ವಿ. ಚಂದ್ರಶೇಖರ್ ತಮ್ಮ ಕಾರ್ಯದಕ್ಷತೆಯಿಂದ ನ್ಯಾಯಾಧೀಶರಾಗಿ, ಹೈಕೋರ್ಟ್ ನ್ಯಾಯಮೂರ್ತಿಯಾಗಿ ಉನ್ನತ ಸ್ಥಾನಕ್ಕೆ ಏರಿದ್ದು ಯುವ ವಕೀಲರಿಗೆ ಆದರ್ಶವಾಗಬೇಕು ಎಂದು ತಿಳಿಸಿದರು.


    ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಕೆ.ನಾಗೇಶ ಮೂರ್ತಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಬಹಳಷ್ಟು ಮುತ್ಸದ್ಧಿಗಳು, ಮುಖ್ಯಮಂತ್ರಿ, ಸಚಿವರು ಸೇರಿದಂತೆ ಬಹಳಷ್ಟು ರಾಜಕೀಯ ಮುಖಂಡರು ವಕೀಲರಾಗಿದ್ದರು ಎಂಬುದು ಹೆಮ್ಮ ತರುವ ಸಂಗತಿಯಾಗಿದೆ ಎಂದರು.


    5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆನಂದ್, ವಕೀಲರ ಸಂಘದ ಅಧ್ಯಕ್ಷ ಕೆ.ಆರ್. ವಿಜಯಕುಮಾರ್ ಮಾತನಾಡಿದರು.

    ನ್ಯಾಯಾಧೀಶರಾದ ಪ್ರೀತಿ ಎಲ್.ಮಳವಳ್ಳಿ, ಚೇತನಾ, ಎಂ.ರಘು, ವಕೀಲರ ಸಂಘದ ಕಾರ್ಯದರ್ಶಿ ಎಚ್.ಡಿ.ರವಿಚಂದ್ರ, ಖಜಾಂಚಿ ಎಸ್.ಎ.ಕೃಷ್ಣ ಇತರರು ಇದ್ದರು.


    ಹಿರಿಯ ವಕೀಲರಾದ ಓದೇಗೌಡ, ಸೈಯದ್ ಅಹಮದ್ ದಂಪತಿಯನ್ನು ಗೌರವಿಸಲಾಯಿತು. ವಕೀಲರ ದಿನಾಚರಣೆ ಪ್ರಯುಕ್ತ ನಡೆದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts