More

    ಸೌಲಭ್ಯ ವಂಚಿತ ಮಕ್ಕಳಿಗಾಗಿ ಕೇರ್ ಮೋರ್ ಫೌಂಡೇಷನ್​​ನಿಂದ ವಿನೂತನ ಅಭಿಯಾನ: ಬಳಸದಿರೋ ಬ್ಯಾಗ್ ಕೊಟ್ಟು ನೀವೂ ಪಾಲ್ಗೊಳ್ಳಿ!

    ಬೆಂಗಳೂರು: ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿವೆ. ಮಕ್ಕಳೆಲ್ಲ ಖುಷಿಯಾಗಿ ಶಾಲೆಗೆ ತೆರಳುತ್ತಾರೆ. ಆದರೆ ಅದೆಷ್ಟೋ ಮಕ್ಕಳಿಗೆ ಮನೆಯಲ್ಲಿನ ಬಡತನದ ಕಾರಣದಿಂದ ಇಂಥಾ ಖುಷಿಯನ್ನು ಸಂಪೂರ್ಣವಾಗಿ ಅನುಭವಿಸುವ ಅವಕಾಶ ಸಿಗುವುದೇ ಇಲ್ಲ. ಇಂತಹ ಸೌಲಭ್ಯ ವಂಚಿತ ಮಕ್ಕಳಿಗೆ ಆಸರೆಯಾಗುವಂತಹ ಕಾರ್ಯಕ್ರಮವನ್ನು ‘ಕೇರ್ ಮೋರ್’ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾಗಿಯಾಗಿ ಬಡ ಮಕ್ಕಳಿಗೆ ನೆರವಾಗುವ ಅವಕಾಶವನ್ನು ಪ್ರತಿಯೊಬ್ಬರಿಗೂ ಕಲ್ಪಿಸಲಾಗಿದೆ.

    ಸೌಲಭ್ಯ ವಂಚಿತ ಮಕ್ಕಳಿಗಾಗಿ ಕೇರ್ ಮೋರ್ ಫೌಂಡೇಷನ್​​ನಿಂದ ವಿನೂತನ ಅಭಿಯಾನ: ಬಳಸದಿರೋ ಬ್ಯಾಗ್ ಕೊಟ್ಟು ನೀವೂ ಪಾಲ್ಗೊಳ್ಳಿ!

    ಹಾಗಾದರೆ ಇಂಥಾದ್ದೊಂದು ಸಾರ್ಥಕ ಅಭಿಯಾನದಲ್ಲಿ ಪಾಲ್ಗೊಳ್ಳುವುದು ಹೇಗೆಂಬ ಪ್ರಶ್ನೆ ಎದುರಾಗುತ್ತೆ. ಅದಕ್ಕೂ ಸಲೀಸಾದ ಮಾರ್ಗಗಳನ್ನೇ ಈ ಫೌಂಡೇಶನ್ ತೆರೆದಿಟ್ಟಿದೆ. ನಿಮ್ಮ ಮನೆಯಲ್ಲಿ ಬಳಸದೇ ಹಾಗೇ ಇಟ್ಟಿರುವ ಮಕ್ಕಳ ಶಾಲಾ ಬ್ಯಾಗುಗಳಿದ್ದರೆ ಅವುಗಳನ್ನು ಸದರಿ ಫೌಂಡೇಷನ್​​​ಗೆ ದಾನ ಮಾಡುವಂತೆ ವಿನಂತಿಸಲಾಗಿದೆ. ದಿನಾಂಕ ಜೂನ್​​ 6 ರಿಂದ 20ರವರೆಗೂ ಬ್ಯಾಗುಗಳನ್ನು ದಾನವಾಗಿ ನೀಡಲು ಅವಕಾಶವಿದೆ. ಬ್ಯಾಗ್​ಗಳನ್ನು ದಾನ ಮಾಡಲಿಚ್ಚಿಸುವವರು CareMore Foundation@Caremorefdn ಟ್ವಿಟ್ಟರ್ ಮತ್ತು ಇನ್​​ಸ್ಟಾಗ್ರಾಂನಲ್ಲಿ ಮಾಹಿತಿ ಪಡೆದುಕೊಳ್ಳಬಹುದು.


    ‘ಕೇರ್ ಮೋರ್’ ಫೌಂಡೇಶನ್ ಈಗಾಗಲೇ ಪರಿಸರ ಪ್ರೇಮಿಗಳದ್ದೊಂದು ತಂಡದ ಮೂಲಕ ಪ್ರಕೃತಿಗೆ ಪೂರಕವಾಗಿರುವ ಅನೇಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಮೆಚ್ಚುಗೆ ಗಳಿಸಿಕೊಂಡಿರುವ ಸಂಸ್ಥೆ. ಇದರಲ್ಲಿ ಬೆಂಗಳೂರಿನ ಸಿನಿಮಾ ಕಲಾವಿದರು, ಉದ್ಯಮಿಗಳು, ಪೂರ್ಣ ಪ್ರಮಾಣದ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ನಾನಾ ವರ್ಗಗಳ ಯುವ ಜನರು ಭಾಗಿಯಾಗಿದ್ದಾರೆ. ಇದೀಗ ಮರು ಬಳಕೆ ಮರು ಉಪಯೋಗ ಎಂಬ ಕಾನ್ಸೆಪ್ಟ್​​ನಲ್ಲಿ ಬಡ ಮಕ್ಕಳಿಗೆ ನೆರವಾಗುವಂತಹ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುಲಾಗಿದೆ.

    ಸೌಲಭ್ಯ ವಂಚಿತ ಮಕ್ಕಳಿಗಾಗಿ ಕೇರ್ ಮೋರ್ ಫೌಂಡೇಷನ್​​ನಿಂದ ವಿನೂತನ ಅಭಿಯಾನ: ಬಳಸದಿರೋ ಬ್ಯಾಗ್ ಕೊಟ್ಟು ನೀವೂ ಪಾಲ್ಗೊಳ್ಳಿ!

    ಇದರಲ್ಲಿ ಎಲ್ಲರೂ ಪಾಲ್ಗೊಂಡು ತಮ್ಮ ಪರಿಚಯಸ್ಥರು, ಸ್ನೇಹಿತರು, ಸಹೋದ್ಯೋಗಿಗಳು, ಕುಟುಂಬಸ್ಥರು ಎಲ್ಲರನ್ನೂ ಪಾಲ್ಗೊಳ್ಳಲು ಪ್ರೇರೇಪಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ‘ಕೇರ್ ಮೋರ್’ ಫೌಂಡೇಶನ್ ವಿನಂತಿಸಿಕೊಂಡಿದೆ.

    ಈಗಾಗಲೇ ಹಲವು ಪರಿಸರ ಕಾರ್ಯಕ್ರಮಗಳ ಮೂಲಕ ಕೇರ್​ ಮೋರ್​ ಫೌಂಡೇಷನ್​​ ಹೆಸರುವಾಸಿಯಾಗಿದ್ದು, ನಟಿ ಸಂಯುಕ್ತಾ ಹೊರನಾಡು ಅವರೂ ಕೂಡ ಈ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts