More

    ಮಾನಸಿಕ ಆರೋಗ್ಯ ಜಾಗೃತಿಗಾಗಿ ಕಾರ್ ರ‍್ಯಾಲಿ

    ಹುಬ್ಬಳ್ಳಿ : ವಿದ್ಯಾನಗರ ರೋಟರಿ ಕ್ಲಬ್ ವತಿಯಿಂದ ಮಾನಸಿಕ ಆರೋಗ್ಯ ಕುರಿತು ಜಾಗೃತಿ ಕಾರ್ ರ್ಯಾಲಿಯನ್ನು ಅ. 28ರಂದು ಹುಬ್ಬಳ್ಳಿಯಿಂದ ಗೋವಾವರೆಗೆ ಹಮ್ಮಿಕೊಳ್ಳಲಾಗಿದೆ.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಕ್ಲಬ್​ನ ಮಹಿಮಾ ದಂಡ, ಅಂದು ಬೆಳಿಗ್ಗೆ 6 ಗಂಟೆಗೆ ಗೋಕುಲ ರಸ್ತೆ ಕೆಎಲ್​ಇ ಇಂಜಿನಿಯರಿಂಗ್ ಕಾಲೇಜಿನಿಂದ ಕಾರ್ ರ‍್ಯಾಲಿ ಆರಂಭವಾಗಲಿದೆ ಎಂದರು.

    ಮಾಸಿಕ ಆರೋಗ್ಯ ಕುರಿತು ಜಾಗೃತಿ ಮೂಡಿಸುವುದು ರ್ಯಾಲಿಯ ಮುಖ್ಯ ಉದ್ದೇಶವಾಗಿದೆ. ಹುಬ್ಬಳ್ಳಿಯಿಂದ ಗೋವಾವರೆಗೆ ರ‍್ಯಾಲಿ ನಿಧಾನ ವೇಗವಾಗಿ ನಡೆಯಲಿದೆ. ಈಗಾಗಲೇ 50 ಕಾರ್ ಗಳು ನೋಂದಣಿಯಾಗಿದ್ದು, 80 ಕಾರ್​ಗಳು ರ್ಯಾಲಿಯಲ್ಲಿ ಪಾಲ್ಗೊಳ್ಳುವ ನೀರಿಕ್ಷೆ ಇದೆ ಎಂದು ಹೇಳಿದರು.

    ಗೋಕುಲ್ ರಸ್ತೆಯ ಕೆಎಲ್​ಇ ಕಾಲೇಜ್ ಮುಂಭಾಗದಲ್ಲಿ ರೋಟರಿ ಗವರ್ನರ್ ನಾಸೀರ್ ಬೋರಸಡವಾಲಾ ರ್ಯಾಲಿಗೆ ಚಾಲನೆ ನೀಡುವರು. ರ‍್ಯಾಲಿ ಉದ್ದಕ್ಕೂ ಸಿಗುವ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಮಾನಸಿಕ ಆರೋಗ್ಯದ ತೊಂದರೆಗೆ ಒಳಗಾದವರನ್ನು ಗುರುತಿಸಿ, ಅವರಿಗೆ ಹುಬ್ಬಳ್ಳಿಯ ಕಿಮ್್ಸ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.

    ರೊಟೇರಿಯನ್ ಆನಂದಕುಮಾರ ಪಾಟ್ವಾ, ಅರವಿಂದ ಪಾಟೀಲ, ಪ್ರವೀಣ ಜೈನ್, ಗೋವಿಂದ ಮಗಜಿಕೊಂಡಿ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts