More

    ಸಿಎಆರ್, ಡಿಎಆರ್ ಪರೀಕ್ಷೆಗಾಗಿ ಬಿಗಿಬಂದೋಬಸ್ತ್

    ಗಂಗಾವತಿ: ಸಶಸ ಕಲ್ಯಾಣ ಕರ್ನಾಟಕ ಪೊಲೀಸ್ ಪೇದೆ (ಸಿಎಆರ್/ಡಿಎಆರ್) ಹುದ್ದೆಗಳ ನೇಮಕಕ್ಕಾಗಿ ನಗರ ಮತ್ತು ತಾಲೂಕಿನ 15 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ಶಾಂತಿಯುತವಾಗಿ ಜರುಗಿದ್ದು, ಬಿಗಿಬಂದೋಬಸ್ತ್ ಆಯೋಜಿಸಲಾಗಿತ್ತು.

    ಇದನ್ನೂ ಓದಿ: ಪೊಲೀಸ್ ನೇಮಕಕ್ಕೆ ಪ್ರವೇಶ ಪರೀಕ್ಷೆ

    2022-23ನೇ ಸಾಲಿನ 420 ಹುದ್ದೆಗಳ ಭರ್ತಿಗಾಗಿ ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜು, ಎಚ್‌ಆರ್‌ಎಸ್‌ಎಂ ಪದವಿ ಕಾಲೇಜು, ಬೆಥೆಲ್ ಆಂಗ್ಲ ಮಾಧ್ಯಮ ಶಾಲೆ, ಬಾಲಕರ ಸ.ಪ.ಪೂ.ಕಾಲೇಜು, ಎಂಎನ್‌ಎಂ ಬಾಲಕಿಯರ ಸರ್ಕಾರಿ ಪದವಿ ಕಾಲೇಜು,

    ಲಯನ್ಸ್ ಸ್ಕೂಲ್, ಸಂಕಲ್ಪ ಪದವಿ ಕಾಲೇಜು, ಲಿಟಲ್ ಹಾರ್ಟ್ಸ್, ಜೆಎಸ್‌ಇಎಸ್ ಶಾಲೆ, ವಿದ್ಯಾನಿಕೇತನ ಪಿಯು ಕಾಲೇಜು, ಕೊಟ್ಟೂರೇಶ್ವರ ಪ.ಪೂ.ಕಾಲೇಜು, ಕಾರುಣ್ಯ ಪಿಯು ಕಾಲೇಜು, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಶ್ರೀರಾಮನಗರ ಎಕೆಆರ್‌ಡಿ ಪದವಿ ಕಾಲೇಜು ಮತ್ತು ವಿದ್ಯಾನಿಕೇತನ ಸ್ಕೂಲ್‌ನಲ್ಲಿ ಪರೀಕ್ಷೆ ಆಯೋಜಿಸಲಾಗಿತ್ತು.

    ಪ್ರತಿಯೊಂದು ಕೇಂದ್ರದಲ್ಲೂ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ಜರುಗಿದ್ದು, ಅಭ್ಯರ್ಥಿಗಳ ಗುರುತುಗಾಗಿ ಬಯೋ ಮೆಟ್ರಿಕ್ ವ್ಯವಸ್ಥೆ ಮಾಡಲಾಗಿತ್ತು. ಕೇಂದ್ರದೊಳಗೆ ಯಾವುದೇ ವಸ್ತುಗಳನ್ನು ಕೊಂಡಯ್ಯಲು ಅವಕಾಶವಿರಲಿಲ್ಲ.

    ಮೆಟಲ್ ಡಿಕ್ಟೆಕ್ಟರ್ ಮೂಲಕವೇ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು, ಆಲಿಕೆ ಡಿವೈಎಸ್‌ಗಳ ಪರಿಶೀಲನೆಗೆ ವೈದ್ಯಕೀಯ ತಂಡ ನಿಯೋಜಿಸಲಾಗಿತ್ತು. ಕೇಂದ್ರದ 200 ಮೀ. ಸುತ್ತಲೂ ನಿಷೇದಾಜ್ಞೆ ಜಾರಿಗೊಳಿಸಿದ್ದು, ಜಿರಾಕ್ಸ್, ಟೈಪಿಂಗ್, ಕಂಪ್ಯೂಟರ್ ಸೆಂಟರ್‌ಗಳನ್ನು ಬಂದ್ ಮಾಡಲಾಯಿತು.

    ಡಿವೈಎಸ್ಪಿ, ಪಿಐ, ಪಿಎಸೈ, ಎಸೈ ಸೇರಿ 300ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿತ್ತು. 371ಜೆ ಆರ್ಹತೆಯಡಿ ಹುದ್ದೆಗಳ ನೇಮಕ ಹಿನ್ನೆಲೆಯಲ್ಲಿ ಬೀದರ್, ಕಲಬುರಗಿ, ಯಾದಗಿರಿ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಯ ಅಕಾಂಕ್ಷಿ ಅಭ್ಯರ್ಥಿಗಳು ಬಂದಿದ್ದು,

    ಕೇಂದ್ರಗಳ ಮಾಹಿತಿ ಕೊರತೆಯಿಂದ ಕೆಲಕಾಲ ಪರದಾಡಿದರು. ನಗರದ ಎಲ್ಲ ಹೋಟೆಲ್ ಅಂಗಡಿಗಳು ುಲ್ ಆಗಿದ್ದು, ಆಟೋಗಳಿಗೂ ಡಿಮ್ಯಾಂಡ್ ಹೆಚ್ಚಾಯಿತು. ಬೇರೆ ಊರಿನಿಂದ ಬೆಳಗ್ಗೆ ಬಂದಿದ್ದರಿಂದ ಬಹುತೇಕ ಅಭ್ಯರ್ಥಿಗಳ ನಗರದ ಕ್ರೀಡಾ ಮೈದಾನ,

    +ಪಾಕ್ ರ್ ಮತ್ತು ಬಸ್ ಸ್ಟಾೃಂಡ್‌ನಲ್ಲಿ ವಿಶ್ರಾಂತಿ ಪಡೆದರು. ಸ್ಥಳೀಯ ಸಂಘಟನೆ ನೆರವಿನೊಂದಿಗೆ ಪೊಲೀಸರು ಹೆಲ್ಪ್ ಡೆಸ್ಕ್ ಆರಂಭಿಸಿದ್ದರೇ ಉತ್ತಮವಾಗಿರುತ್ತಿತ್ತು. ಬಿಗಿ ಬಂದೋಬಸ್ತ್ ಹಿನ್ನೆಲೆಯಲ್ಲಿ ಕೈ ಮತ್ತು ಕೊರಳಲ್ಲಿದ್ದ ಧಾರ್ಮಿಕ ವಸ್ತುಗಳನ್ನು ಕಳಚಿ ಕೇಂದ್ರಕ್ಕೆ ಹೋಗ ಬೇಕಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts