ಶಾಂಘೈ: ಟೆಸ್ಟ್ ಡ್ರೈವ್ ವೇಳೆ ಕಾರೊಂದು ಕಟ್ಟಡವೊಂದರ ಮೂರನೇ ಮಹಡಿಯಿಂದ ಕೆಳಕ್ಕೆ ಉರುಳಿದ್ದರಿಂದ ಕಾರು ಛಿದ್ರವೊಂಡಿದ್ದು, ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇದು ಚೀನಾ ಕಂಪನಿಯ ನೂತನ ನಿಯೊ ಕಾರಿನ ಟೆಸ್ಟ್ ಡ್ರೈವ್ ವೇಳೆ ಈ ಅವಘಡ ಸಂಭವಿಸಿದೆ.
ನಿಯೊ ಕಂಪನಿಯ ಹೆಡ್ ಕ್ವಾರ್ಟರ್ಸ್ನ ಮೂರನೇ ಮಹಡಿಯಲ್ಲಿ ಇಂದು ಮಧ್ಯಾಹ್ನ ನೂತನ ಇಲೆಕ್ಟ್ರಿಕ್ ಕಾರಿನ ಟೆಸ್ಟ್ ಡ್ರೈವ್ ನಡೆಯುತ್ತಿದ್ದಾಗ ಕಾರು ಮೇಲಿನಿಂದ ಕೆಳಕ್ಕೆ ಬಿದ್ದಿದೆ. ಸಾವಿಗೀಡಾದವರ ಪೈಕಿ ಒಬ್ಬರು ನಿಯೊ ಉದ್ಯೋಗಿಯಾಗಿದ್ದು, ಇನ್ನೊಬ್ಬರು ಪೂರೈಕೆದಾರರಲ್ಲಿ ಒಬ್ಬರು.
ಕಾರು ಬಿದ್ದ ಸ್ಥಳದ ದೃಶ್ಯಾವಳಿಯ ವಿಶ್ಲೇಷಣೆ ಪ್ರಕಾರ ಪ್ರಾಥಮಿಕವಾಗಿ ಇದು ಅಪಘಾತ ಎಂದು ಪರಿಗಣಿಸಲಾಗಿದೆ, ಇದು ವಾಹನದಿಂದಾದ ಅಪಘಾತವಲ್ಲ ಎಂದು ಕಂಪನಿಯು ಚೀನಾದಲ್ಲಿನ ಟ್ವಿಟರ್ ರೀತಿಯ ಸೋಷಿಯಲ್ ಮೀಡಿಯಾ ವೀಬೊದಲ್ಲಿ ಹೇಳಿಕೊಂಡಿದೆ.
ಅಪಘಾತ ಹೇಗೆ ಸಂಭವಿಸಿತು ಎಂಬ ಬಗ್ಗೆ ಕಂಪನಿ ಇನ್ನೂ ಏನೂ ಹೇಳಿಕೊಂಡಿಲ್ಲ. ಟೆಸ್ಟ್ ಡ್ರೈವ್ ನಡೆಯುತ್ತಿದ್ದ ಮೂರನೇ ಮಹಡಿ ಕಾರ್ ಪಾರ್ಕ್ ಅಥವಾ ಶೋರೂಮ್ ಎನ್ನಲಾಗಿದೆ. ಅದಾಗ್ಯೂ ಕಂಪನಿಯಿಂದ ಮಾಧ್ಯಮದವರಿಗೆ ಇನ್ನೂ ಅಧಿಕೃತ ಹೇಳಿಕೆ ಲಭಿಸಿಲ್ಲ. ಬಿದ್ದಿರುವ ಕಾರು ಈ ಕಂಪನಿಯ ಇಟಿ5 ಮಾಡೆಲ್ ಎಂದು ಹೇಳಲಾಗಿದೆ. ಇದು ಸ್ವಯಂ ಚಾಲನಾ ತಂತ್ರಜ್ಞಾನ ಹೊಂದಿದೆ. ಇದು ಟೆಸ್ಲಾದ ಪ್ರತಿಸ್ಪರ್ಧಿ ಕಂಪನಿ ಎಂದೂ ಹೇಳಲಾಗುತ್ತಿದೆ. ಈ ಹಿಂದೆ ನಿಯೊ ಇಎಸ್8 ಕಾರು ಅಪಘಾತಕ್ಕೆ ಒಳಗಾಗಿದ್ದು, ಚೀನಾದ ಉದ್ಯಮಿಯೊಬ್ಬರು ಸಾವಿಗೀಡಾಗಿದ್ದರು. -ಏಜೆನ್ಸೀಸ್
ಸರ್ಕಾರಿ ಶಿಕ್ಷಕರ ಮಕ್ಕಳು ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲೇ ಕಲಿಯಬೇಕು: ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ?
ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!