More

  ಕೊಳಕು ಮಂಡಲ ಹಾವು ಸೆರೆ

  ಸಾಗರ: ತಾಲೂಕಿನ ಆವಿನಹಳ್ಳಿಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಫಿಯಾ ಅವರ ಮನೆಯ ಹಿಂಭಾಗದಲ್ಲಿ ಕಟ್ಟಿಗೆಯ ಮಧ್ಯೆ ಸೇರಿಕೊಂಡಿದ್ದ ಕೊಳಕು ಮಂಡಲ ಅಥವಾ ಕನ್ನಡಿ ಹಾವನ್ನು ಗುರುವಾರ ಸಾಗರದ ಉರಗ ಪ್ರೇಮಿ ಅನೂಪ್ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

  ಕೊಳಕು ಮಂಡಲ ಹಾವಿನಲ್ಲಿ ವಿಷದ ಪ್ರಮಾಣ ಹೆಚ್ಚಿದ್ದು ಅದು ಕಚ್ಚಿದ ಭಾಗ ನಿಧಾನವಾಗಿ ಕೊಳೆಯುತ್ತ ಬರುತ್ತದೆ. ಇಂದು ಕಂಡುಬಂದಿರುವ ಹಾವು 3.45 ಅಡಿ ಉದ್ದ ಇದ್ದು ಇಷ್ಟು ಉದ್ದದ ಕೊಳಕು ಮಂಡಲ ಕಾಣಸಿಗುವುದು ಅಪರೂಪ. ಇದು ಎಂಟು ವರ್ಷದ ಪ್ರಾಯದ್ದಾಗಿದ್ದು ಗಂಡು ಜಾತಿಯದ್ದು. ಎರಡು ದಿನಗಳ ಹಿಂದೆ ಬಹುಶಃ ಆಹಾರ ಸೇವಿಸಿ ವಿಶ್ರಾಂತಿಗಾಗಿ ಕಟ್ಟಿಗೆ ಸಂಧಿ ಸೇರಿತ್ತು ಎಂದು ಅನೂಪ್ ಅಭಿಪ್ರಾಯಪಟ್ಟರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts