More

    ಬಿಜೆಪಿ ಜೊತೆ ಸೀಟು ಹಂಚಿಕೆಗೆ ಸಿದ್ಧ: ಕಾಂಗ್ರೆಸ್​ ತೊರೆದ ಮಾಜಿ ಸಿಎಂ ಉವಾಚ

    ಚಂಡೀಗಡ: ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಪಂಜಾಬಿನಲ್ಲಿ ಭಾರೀ ರಾಜಕೀಯ ಬದಲಾವಣೆಗಳು ನಡೆಯುತ್ತಿವೆ. ಅಂತಃಕಲಹಗಳ ನಡುವೆ ಕಾಂಗ್ರೆಸ್​, ದಲಿತ ಮುಖಂಡ ಚನ್ನಿ ಅವರನ್ನು ಹೊಸ ಮುಖ್ಯಮಂತ್ರಿಯಾಗಿ ನೇಮಿಸಿದೆ. ಮತ್ತೊಂದೆಡೆ, ಅಸಮಾಧಾನದಿಂದ ಕಾಂಗ್ರೆಸ್​ ತೊರೆದಿರುವ ನಿಕಟಪೂರ್ವ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್​ ಸಿಂಗ್​ ತಮ್ಮದೇ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ.

    ಇಂದು ಚಂಡೀಗಡದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಂಗ್​, ತಮ್ಮ ನೂತನ ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಜೊತೆಗೆ, ಚುನಾವಣೆಯಲ್ಲಿ ತಮ್ಮ ಪಕ್ಷವು ಬಿಜೆಪಿಯೊಂದಿಗೆ ಸೀಟು ಹಂಚಿಕೆ ಮಾಡಿಕೊಳ್ಳಲು ಸಿದ್ಧವಿದೆ. ಆದರೆ, ಅಕಾಲಿ ದಳದೊಂದಿಗೆ ಯಾವುದೇ ಹೊಂದಾಣಿಕೆಗೆ ಸಿದ್ಧವಿಲ್ಲ ಎಂದು ಘೋಷಿಸಿದರು.

    ಇದನ್ನೂ ಓದಿ: ನನ್ನ ಜತೆಗೇ ಓದಿರೋರು ಲಕ್ಷ ಸಂಪಾದನೆ ಮಾಡ್ತಿರುವಾಗ ನಾನ್ಯಾಕೆ ಹೀಗೆ ಮೇಡಂ? ಲೈಫೇ ಬೇಡ ಅನ್ನಿಸ್ತಿದೆ…

    ಹೆಚ್ಚಿನ ಸಂಖ್ಯೆಯಲ್ಲಿ ಸಮರ್ಥಕರನ್ನು ಹೊಂದಿರುವ ಕ್ಯಾಪ್ಟನ್​ ಸಿಂಗ್​ ಬಿಜೆಪಿ ಕಡೆಗೆ ಒಲವು ತೋರಿರುವುದು ಕಾಂಗ್ರೆಸ್​ನ ಚುನಾವಣಾ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಅವರ ಹೊಸ ಪಕ್ಷವು ಪಂಜಾಬ್​ ರಾಜಕೀಯದ ನಕ್ಷೆ ಬದಲಿಸಬಹುದು ಎಂಬ ನಿರೀಕ್ಷೆ ಇದೆ.

    ಡ್ರೋನ್​ ಡೇಂಜರ್​: ರಾಜ್ಯದಲ್ಲಿ ಶಸ್ತ್ರಾಸ್ತ್ರಗಳನ್ನು ಮತ್ತು ಮಾದಕವಸ್ತುಗಳನ್ನು ಸಾಗಿಸಲು ಈ ಹಿಂದೆ ಡ್ರೋನ್​ಗಳನ್ನು ಬಳಸಿದ್ದಾರೆ. ಇದೀಗ ಸ್ಫೋಟಕ ವಸ್ತುಗಳನ್ನು ಕಳುಹಿಸಲು ಕೂಡ ಡ್ರೋನ್​ ಬಳಕೆ ನಡೆಯುತ್ತಿದೆ. ರಾಜ್ಯದ ಭದ್ರತೆಗೆ ಸವಾಲು ಎದುರಾಗಿದ್ದು, ನಾವು, ರಾಜಕಾರಣಿಗಳು ಪಂಜಾಬನ್ನು ರಕ್ಷಿಸಬೇಕಿದೆ ಎಂದು ಅಮರಿಂದರ್ ಸಿಂಗ್ ಹೇಳಿದರು. (ಏಜೆನ್ಸೀಸ್)

    ಬಹುತೇಕ ತುಂಬಿರುವ ಕೆಆರ್​ಎಸ್​ ಡ್ಯಾಂ… ತಡವಾಗಿ ಹೆಚ್ಚಿದ ನೀರಿನ ಮಟ್ಟ

    ಶಿಕ್ಷಕರು ಮತ್ತು ಪೊಲೀಸರ ನಡುವೆ ಘರ್ಷಣೆ: 23 ಜನರಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts