More

    ಬಂಡವಾಳಶಾಹಿಗಳಿಗೆ ಸರ್ಕಾರ ಮಣೆ – ಗಜಾನನ ಮಂಗಸೂಳಿ

    ಅಥಣಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ಭೂ ಸುಧಾರಣೆ, ಎಪಿಎಂಸಿ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಮುಂಖಡರು ಸೋಮವಾರ ಪ್ರತಿಭಟಿಸಿದರು.

    ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ರೈತ ಸಂಘಟನೆಗಳು ಕೈಗೊಂಡಿರುವ ಹೋರಾಟ ನ್ಯಾಯಯುತವಾಗಿದೆ. ರೈತರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ, ಬಂಡವಾಳ ಶಾಹಿಗಳಿಗೆ ಮಣೆ ಹಾಕುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.ಮುಖಂಡರಾದ ಸತ್ಯಪ್ಪ ಬಾಗೆನ್ನವರ, ಶಿವು ಗುಡ್ಡಾಪುರ, ಸಿದ್ದಾರ್ಥ ಸಿಂಗೆ ಮಾತನಾಡಿ, ಹಣ ಇದ್ದವರು ಭೂಮಿ ಕೊಂಡುಕೊಳ್ಳುತ್ತಾರೆ.

    ಇದರಿಂದ ಬಡವರು ಭೂಮಿ ಕಳೆದುಕೊಳ್ಳುತ್ತಾರೆ. ಹೀಗಾಗಿ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಹಿರಿಯ ಮುಖಂಡ ಎಸ್.ಕೆ. ಬುಟಾಳಿ, ಬಸವರಾಜ ಬುಟಾಳಿ, ಶ್ರೀಕಾಂತ ಪೂಜಾರಿ, ಸಲಾಂ ಕಲ್ಲಿ, ಬೀರಪ್ಪ ಯಂಕಚ್ಚಿ, ಅನಿಲ ಸುಣದೋಳಿ, ರವಿ ಬಡಕಂಬಿ, ಮಂಜು ಹೋಳಿಕಟ್ಟಿ ಮತ್ತಿತರರಿದ್ದರು. ರೈತರ ಪ್ರತಿಭಟನೆಗೆ ಜೆಡಿಎಸ್ ಮುಖಂಡರು ಬೆಂಬಲ ನೀಡಿದರು. ಚಿಕ್ಕೋಡಿ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಗಿರೀಶ ಬುಟಾಳಿ ಭೂಸುಧಾರಣೆ ಕಾಯ್ದೆ ತಿದ್ದುಪಡಿ ತರುವ ಅವಶ್ಯಕತೆ ಇರಲಿಲ್ಲ.

    ಸರ್ಕಾರ, ತರಾತುರಿಯಲ್ಲಿ ಈ ಕಾಯ್ದೆ ಪಾಸ್ ಮಾಡಿ ಕಾರ್ಪೋರೆಟ್ ಕಂಪನಿಗಳ ಬೆಂಬಲಕ್ಕೆ ನಿಂತಿದೆ ಆರೋಪಿಸಿದರು. ಅಥಣಿ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಅಣಾರಾಯ ಹಾಲಳ್ಳಿ, ಅಯಾಜ ಮಾಸ್ಟರ್, ಜಗದೀಶ ಹಿರೇಮಠ, ಶಿವು ಐಗಳಿ, ಮುರುಗೇಶ ನಾಯಿಕ, ಅಪ್ಪಾಸಾಬ ಹಳ್ಳದಮಳ, ಬಾಬು ಬಕಾರಿ, ಪ್ರಭು ರೆಡ್ಡಿ, ಮಹಾಂತೇಶ ಅವಟಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts