More

    ಎರಡನೇ ಪತ್ನಿಗೆ ಜೀವನಾಂಶ ನೀಡಲು ನಿರಾಕರಿಸುವಂತಿಲ್ಲ; ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

    ಮುಂಬೈ: ಮೊದಲ ಪತ್ನಿ ಬದುಕಿರುವಾಗಲೇ ಎರಡನೇ ಪತ್ನಿಗೆ ಜೀವನಾಂಶ ಭತ್ಯೆ ನೀಡುವ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಬ್ಬ ವ್ಯಕ್ತಿಯು ತನ್ನ ಮೊದಲ ಹೆಂಡತಿಯನ್ನು ಕಾನೂನುಬದ್ದವಾಗಿ ಮದುವೆಯಾಗಿರುವಾಗಲೇ ಮರುಮದುವೆ ಮಾಡಿಕೊಂಡರೆ, ಅವನು ಎರಡನೇ ಹೆಂಡತಿಗೆ ಜೀವನಾಂಶ ಭತ್ಯೆಯನ್ನು ನೀಡಲು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಪ್ರಸ್ತುತ ಪ್ರಕರಣದಲ್ಲಿ ಎರಡನೇ ಪತ್ನಿಯ ಜೀವನಾಂಶಕ್ಕಾಗಿ ಪ್ರತಿ ತಿಂಗಳು 2500 ರೂಪಾಯಿ ಜೀವನಾಂಶ ನೀಡುವ ನಿರ್ಧಾರವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಅಷ್ಟೇ ಅಲ್ಲ, ಈ ಪ್ರಕರಣದ ಮಹಿಳೆಗೆ ಜೀವನಾಂಶ ಭತ್ಯೆ ಹೆಚ್ಚಿಸುವಂತೆ ಅರ್ಜಿ ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಿದೆ.

    ಜೀವನಾಂಶವನ್ನು ಹೆಚ್ಚಿಸಲು ಅನುಮತಿ
    ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ರಾಜೇಶ್ ಪಾಟೀಲ್ ಅವರು, ಡಿಸೆಂಬರ್ 14 ರಂದು, 2015 ರ ಯೋಲಾ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನಿರ್ಧಾರವನ್ನು ಎತ್ತಿಹಿಡಿದರು, ಅದರಲ್ಲಿ ಮ್ಯಾಜಿಸ್ಟ್ರೇಟ್ ಅವರು ಪ್ರತಿ ತಿಂಗಳು 2500 ರೂಪಾಯಿ ಜೀವನಾಂಶವನ್ನು ಪಾವತಿಸಲು ಆದೇಶಿಸಿದ್ದರು. ಇದೀಗ ಜೀವನಾಂಶ ಭತ್ಯೆ ಹೆಚ್ಚಿಸುವಂತೆ ಹೊಸ ಅರ್ಜಿ ಸಲ್ಲಿಸಲು ಮಹಿಳೆಗೆ ಹೈಕೋರ್ಟ್ ಅನುಮತಿ ನೀಡಿದೆ.

    ಸೆಕ್ಷನ್ 125 ರ ಪ್ರಕಾರ ತಮ್ಮ ಜೀವನ ನಿರ್ವಹಣೆಗೆ ಸಾಧ್ಯವಾಗದ ಪತ್ನಿಗೆ ಜೀವನಾಂಶ ಭತ್ಯೆ ನೀಡಲು ಅವಕಾಶವಿದೆ ಎಂದು ಹೈಕೋರ್ಟ್ ಹೇಳಿದೆ. ನಂತರ ಅವನು ಬೇರೆಯಾದ ಮಹಿಳೆಯನ್ನು ಅವನ ಹೆಂಡತಿ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. 1999 ರ ಸುಪ್ರೀಂ ಕೋರ್ಟ್‌ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿದೆ. ಇದರಲ್ಲಿ ಸೆಕ್ಷನ್ 125 ರ ಅಡಿಯಲ್ಲಿ ವಿಚಾರಣೆಯಲ್ಲಿ ಮದುವೆಯ ಪುರಾವೆಯ ಮಾನದಂಡವು ಐಪಿಸಿಯ ಸೆಕ್ಷನ್ 494 ರ ಅಡಿಯಲ್ಲಿ ಅಪರಾಧದ ಸಂದರ್ಭದಲ್ಲಿ ಅಗತ್ಯವಿರುವಷ್ಟು ಕಟ್ಟುನಿಟ್ಟಾಗಿಲ್ಲ ಎಂದು ಹೇಳಲಾಗಿದೆ.

    ಏನಿದು ವಿಷಯ?
    2012ರಲ್ಲಿ ನಾಸಿಕ್‌ನಲ್ಲಿ ಮಹಿಳೆಯೊಬ್ಬರು ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಯೋಲಾ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ 2015ರ ಜನವರಿಯಲ್ಲಿ ತೀರ್ಪು ನೀಡಿ ಮಹಿಳೆಗೆ ಮಾಸಿಕ 2500 ರೂಪಾಯಿ ಜೀವನಾಂಶ ನೀಡಲು ನಿರ್ಧರಿಸಿದ್ದರು. ಗಂಡನ ತಿಂಗಳ ಆದಾಯವು 50 ಸಾವಿರದಿಂದ 60 ನಾವಿರದ ನಡುವೆ ಇತ್ತು. ಈ ತೀರ್ಪಿನ ವಿರುದ್ಧ ಪತಿ ನಿಫಾಡ್ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಮಹಿಳೆಯನ್ನು ಮದುವೆಯಾಗಿಲ್ಲ ಎಂದು ಪತಿ ಅರ್ಜಿಯಲ್ಲಿ ತಿಳಿಸಿದ್ದಾರೆ.

    ಏಪ್ರಿಲ್ 2022 ರಲ್ಲಿ, ಸೆಷನ್ಸ್ ನ್ಯಾಯಾಲಯವು ಯೋಲಾ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸಿತು. ಇದಾದ ಬಳಿಕ ಮಹಿಳೆ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ತಾನು 1989ರಲ್ಲಿ ಆ ವ್ಯಕ್ತಿಯನ್ನು ಮದುವೆಯಾಗಿ 1991ರಲ್ಲಿ ಮಗನಿಗೆ ಜನ್ಮ ನೀಡಿರುವುದಾಗಿ ಮಹಿಳೆ ಹೈಕೋರ್ಟ್‌ಗೆ ತಿಳಿಸಿದರು. ನಾನು ಮದುವೆಯಾಗಿ ಎರಡು ವರ್ಷಗಳ ನಂತರ ತನ್ನ ಗಂಡನ ಮೊದಲ ಪತ್ನಿ ಆತನೊಂದಿಗೆ ವಾಸಿಸಲು ಪ್ರಾರಂಭಿಸಿದಳು. ತದನಂತರ ಅವಳೂ ಮಗುವಿಗೆ ಜನ್ಮ ನೀಡಿದಳು ಎಂದು ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದರು. ಇದಾದ ನಂತರ ಎರಡನೇ ಪತ್ನಿ ಮತ್ತೊಬ್ಬ ಮಗನಿಗೆ ಜನ್ಮ ನೀಡಿದಳು. ಎರಡನೇ ಪತ್ನಿ ತನ್ನ ಮಕ್ಕಳ ಶಾಲಾ ದಾಖಲೆಗಳಲ್ಲಿ ಆ ವ್ಯಕ್ತಿಯ ಹೆಸರನ್ನು ತಂದೆ ಎಂದು ಹೆಸರಿಸಿದ್ದಾಳೆ.

    ತಮ್ಮ ಎರಡನೇ ಮಗ ಹುಟ್ಟಿದ ನಂತರ ನಮ್ಮ ನಡುವೆ ಸಮಸ್ಯೆಗಳು ಉದ್ಭವಿಸಲು ಪ್ರಾರಂಭಿಸಿದವು. ನಂತರ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದೆವು ಎಂದು ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದರು. 2011ರ ವರೆಗೆ ನಿರ್ವಹಣೆಯನ್ನೂ ಮಾಡಿದ್ದಾರೆ. ಆದರೆ ಇದಾದ ಬಳಿಕ ಮೊದಲ ಪತ್ನಿಯ ಒತ್ತಾಯದ ಮೇರೆಗೆ ಜೀವನಾಂಶ ನೀಡುವುದನ್ನು ನಿಲ್ಲಿಸಿದ್ದರು. ಇದೆಲ್ಲವನ್ನೂ ಪರಿಗಣಿಸಿ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ಕಳೆದ 9 ವರ್ಷಗಳ ಬಾಕಿಯನ್ನು ಮರುವಾವತಿಸಲು ಪತಿಗೆ 2 ತಿಂಗಳ ಕಾಲಾವಕಾಶ ನೀಡಿದೆ. ಇದರೊಂದಿಗೆ ನಿರ್ವಹಣಾ ಭತ್ಯೆ ಹೆಚ್ಚಿಸುವಂತೆ ಹೊಸ ಅರ್ಜಿ ಸಲ್ಲಿಸಲು ಮಹಿಳೆಗೆ ಅವಕಾಶ ಕಲ್ಪಿಸಲಾಗಿದೆ.

    ಮುಂಬೈ ದಾಳಿಯ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂಗೆ ವಿಷ ಕೊಟ್ರಾ, ಪಾಕಿಸ್ತಾನಿ ಪತ್ರಕರ್ತ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts