More

    ಗೋಮಯ ಹಣತೆ ತಯಾರಿಸಿದ ಬಾಲಕ

    ಮೂಡುಬಿದಿರೆ: ಪರಿಸರ ಸ್ನೇಹಿ ದೀಪಾವಳಿ ಆಚರಣೆಗಾಗಿ ರಾಷ್ಟ್ರೀಯ ಕಾಮಧೇನು ಆಯೋಗ ಗೋಮಯದಿಂದ (ಸಗಣಿ) ಹಣತೆ ತಯಾರಿಸುವ ಅಭಿಯಾನ ಕೈಗೆತ್ತಿಕೊಳ್ಳುವ ಮೊದಲೇ ಏಳನೇ ತರಗತಿ ವಿದ್ಯಾರ್ಥಿಯೋರ್ವ ಹಣತೆ ತಯಾರಿಸಿಯೇಬಿಟ್ಟಿದ್ದಾನೆ.

    ಮೂಡುಬಿದಿರೆ ಜವಳಿ ಉದ್ಯಮಿ ಎಸ್.ಎನ್.ಬೋರ್ಕರ್-ಸ್ವಾತಿ ದಂಪತಿ ಪುತ್ರ, ರೋಟರಿ ಸೆಂಟ್ರಲ್ ಸ್ಕೂಲ್‌ನ ಏಳನೇ ತರಗತಿ ವಿದ್ಯಾರ್ಥಿ ಶಶಾಂಕ್ ಬೋರ್ಕರ್ ಸಗಣಿ ಜತೆ ಮೈದಾ ಬೆರೆಸಿ ಹಣತೆ ನಿರ್ಮಿಸಿದ್ದಾನೆ. ಒಂದೆರಡು ದಿನ ಚೆನ್ನಾಗಿ ಬಿಸಿಲಲ್ಲಿ ಒಣಗಿಸಿದ್ದರಿಂದ ಬಿದ್ದರೂ ಒಡೆಯುವುದಿಲ್ಲ. ಸಗಣಿ ಜತೆ ಅಕ್ಕಿ ಹುಡಿ ಬೆರೆಸಿ ಪೂರ್ಣ ದೇಸಿ ರೂಪದಲ್ಲೂ ಈ ಹಣತೆಗಳನ್ನು ರೂಪಿಸುವ ಉತ್ಸಾಹ ಶಶಾಂಕ್‌ಗಿದೆ.

    ದೇಸಿ ಹಣತೆಯ ಚಿಂತನೆ ‘ವೋಕಲ್ ಫಾರ್ ಲೋಕಲ್’ ಪರಿಕಲ್ಪನೆಯಡಿ ಉಜ್ವಲ ಭವಿಷ್ಯ ಮತ್ತು ಉದ್ಯೋಗಾವಕಾಶವನ್ನೂ ಹೊಂದಿದೆ. ಮಗನ ಉತ್ಸಾಹವನ್ನು ಪ್ರೋತ್ಸಾಹಿಸಿದ್ದೇವೆ ಎಂದು ಪಾಲಕರು ತಿಳಿಸುತ್ತಾರೆ. ಸ್ಕೌಟ್ಸ್ ವಿದ್ಯಾರ್ಥಿಯಾಗಿ ಶಶಾಂಕ್ ತನ್ನ ಕಲ್ಪನೆಯನ್ನು ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts