More

    ಕ್ಷೇತ್ರದಲ್ಲಿ ಲೋಕ ಸಮರಕ್ಕಿಳಿದಿದ್ದ ಅಭ್ಯರ್ಥಿ ಸಾವು, ಚುನಾವಣಾಧಿಕಾರಿಗಳ ನಡೆ ಏನು?

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಣದಲ್ಲಿರುವ 29 ಅಭ್ಯರ್ಥಿಗಳ ಪೈಕಿ ಒಬ್ಬರು ಪಕ್ಷೇತರ ಅಭ್ಯರ್ಥಿ ನಿಧನರಾಗಿದ್ದಾರೆ.
    ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಭ್ಯರ್ಥಿ ರಾಜಾರೆಡ್ಡಿ (58) ಮೃತರು. ಕಳೆದ ವಾರ ಹೃದಯಾಘಾತದಿಂದ ಮನೆಯಲ್ಲಿ ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ನಿವಾಸಿಯಾಗಿರುವ ರಾಜಾರೆಡ್ಡಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ, ಪಕ್ಷದ ಬಿ ಫಾರಂ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಉಳಿದುಕೊಂಡಿದ್ದು ನಾಮಪತ್ರ ಅಂಗೀಕಾರಗೊಂಡಿತ್ತು. ಮೃತರಿಗೆ ಪತ್ನಿ ಇಲ್ಲ. ಅವಲಂಬಿತರು ಇಲ್ಲ. ಆಸ್ತಿಪಾಸ್ತಿ, ಸಾಲ ಯಾವುದು ಇಲ್ಲ. ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂಬುದಾಗಿ ಚುನಾವಣಾ ಘೋಷಣಾ ಪತ್ರದಲ್ಲಿ ತಿಳಿಸಿದ್ದಾರೆ.

    *ಮತದಾರರಿಗೆ ಮಾಹಿತಿ
    ಈಗಾಗಲೇ ಅಭ್ಯರ್ಥಿಗಳ ಕ್ರಮ ಸಂಖ್ಯೆ, ಹೆಸರು, ಚಿಹ್ನೆಯನ್ನು ಅಳವಡಿಸಿರುವ ಇವಿಎಂ ಯಂತ್ರಗಳನ್ನು ಮತಗಟ್ಟೆಗಳಿಗೆ ಪೂರೈಸಲಾಗಿದೆ. ಇದರ ನಡುವೆ ಪ್ರತಿಯೊಂದು ಕಡೆ ಅಭ್ಯರ್ಥಿ ರಾಜಾರೆಡ್ಡಿ ಮೃತಪಟ್ಟಿರುವುದರ ಬಗ್ಗೆ ಮತದಾರರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

    * ಅಭ್ಯರ್ಥಿ ಮೃತಪಟ್ಟರೆ?
    ಪ್ರಭಾವಿ ಇಲ್ಲವೇ ರಾಜಕೀಯ ಪಕ್ಷದ ಅಭ್ಯರ್ಥಿ ಮೃತಪಟ್ಟಲ್ಲಿ ಒಂದು ವಾರ ಪ್ರಚಾರದ ಗಡುವನ್ನು ವಿಸ್ತರಿಸಿ, ಸಂಬಂಧಪಟ್ಟ ಪಕ್ಷಗಳಿಗೆ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಉಮೇದುವಾರಿಕೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಇಲ್ಲಿ ಪಕ್ಷೇತರ ಅಭ್ಯರ್ಥಿ ನಿಧನರಾಗಿರುವುದರಿಂದ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರುವುದಿಲ್ಲ ಎಂಬ ಮಾತುಗಳು ಅಧಿಕಾರಿಗಳ ವಲಯದಿಂದ ಕೇಳಿ ಬಂದಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts