More

    ತಾನೇ ಸಿದ್ಧಪಡಿಸಿದ ಚಿತೆಗೆ ಹಾರಿ ಪ್ರಾಣಬಿಟ್ಟ ಕ್ಯಾನ್ಸರ್​ ರೋಗಿ… ಸಾವಿಗೂ ಮುನ್ನ ಭಗವದ್ಗೀತೆಯನ್ನು ಪ್ರಸ್ತಾಪಿಸಿದ್ದೇಕೆ?

    ಯಲ್ಲಾಪುರ: ವೃದ್ಧರೊಬ್ಬರು ತಾವೇ ಸಿದ್ಧಪಡಿಸಿಕೊಂಡ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ತಾಲೂಕಿನ ಕೊಂಕಣಕೊಪ್ಪದಲ್ಲಿ ಸಂಭವಿಸಿದೆ. ಸಾವಿಗೂ ಮುನ್ನ ಅವರು ಬರೆದಿಟ್ಟ ಪತ್ರದಲ್ಲಿ ಭಗವದ್ಗೀತೆಯ 13ನೇ ಅಧ್ಯಾಯದ ಒಂದು ವಿಷಯ ಮತ್ತು ದೇಹತ್ಯಾಗದ ಕುರಿತಾಗಿ ಉಲ್ಲೇಖಿಸಿದ್ದಾರೆ.

    ಗಂಟಲು ಕ್ಯಾನ್ಸರ್​ನಿಂದ ಬಳಲುತ್ತಿದ್ದ ಶಿವರಾಮ ರಾಮಕೃಷ್ಣ ಹೆಗಡೆ(60) ಮೃತರು. ಚಿತೆ ಸಿದ್ಧಪಡಿಸಿಕೊಂಡು ಅಂತ್ಯ ಸಂಸ್ಕಾರದ ವೇಳೆ ಮಾಡುವ ಧಾರ್ಮಿಕ ವಿಧಿವಿಧಾನಗಳನ್ನೂ ಮಾಡಿಕೊಂಡು, ನಂತರ ಬೆಂಕಿ ಹಚ್ಚಿ ಬಳಿಕ ಆ ಚಿತೆಗೆ ಹಾರಿ ಪ್ರಾಣಬಿಟ್ಟಿದ್ದಾರೆ.

    ಇದನ್ನೂ ಓದಿರಿ ಎಂ-ಸ್ಯಾಂಡ್‌ಗೆ ಅಕ್ರಮ ಅಡ್ಡಗಾಲು

    ಗಂಟಲು ಕ್ಯಾನ್ಸರ್​ನಿಂದ ಬಳಲುತ್ತಿದ್ದ ಇವರಿಗೆ ಮೂರು ತಿಂಗಳಿಂದ ಊಟ ತಿಂಡಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಮನನೊಂದು ಮಂಗಳವಾರ ರಾತ್ರಿ ಮನೆ ಸಮೀಪದ ಕಾಡಿನಲ್ಲಿ ಕಟ್ಟಿಗೆಗಳನ್ನು ಕೂಡಿಸಿ, ಚಿತೆ ಸಿದ್ಧಪಡಿಸಿಕೊಂಡು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಬುಧವಾರ ಬೆಳಗ್ಗೆ ಮನೆಯಲ್ಲಿ ರಾಮಕೃಷ್ಣ ಹೆಗಡೆ ಅವರು ಕಾಣಿಸದಿದ್ದಾಗ ಕುಟುಂಬಸ್ಥರು ಹುಡುಕಾಡಿದ್ದಾರೆ. ಆಗ ಕಾಡಿನಲ್ಲಿ ಸುಟ್ಟು ಬೂದಿಯಾಗಿರುವುದು ಕಂಡು ಬಂದಿದೆ. ಪಕ್ಕದಲ್ಲೇ ಶಿವರಾಮ ಅವರ ಅಂಗಿ, ಟಾರ್ಚ್ ಹಾಗೂ ಪತ್ರ ಸಿಕ್ಕಿ ವಿಷಯ ಬೆಳಕಿಗೆ ಬಂದಿದೆ.

    ಇದನ್ನೂ ಓದಿರಿ ಪತ್ನಿ ಜತೆಗಿದ್ದ ಪರಪುರುಷನ ಗಂಟಲು ಬಗೆದು ರಕ್ತ ಕುಡಿದ… ಬೆಚ್ಚಿ ಬೀಳೀಸುತ್ತೆ ಆರೋಪಿ ಬಾಯ್ಬಿಟ್ಟ ಸತ್ಯ!

    ಕೆಲ ದಿನಗಳಿಂದ ಸಿದ್ಧತೆ: “ನನ್ನ ಕ್ಯಾನ್ಸರ್​ ಕಾಯಿಲೆಯಿಂದ ಮನೆಯವರಿಗೆ ತೊಂದರೆಯಾಗಬಾರದು ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಪತ್ರದಲ್ಲಿ ಶಿವರಾಮ ಹೆಗಡೆ ಬರೆದುಕೊಂಡಿದ್ದಾರೆ. ಕೆಲ ದಿನಗಳಿಂದ ಇದಕ್ಕೆ ಸಿದ್ಧತೆಯಲ್ಲಿ ತೊಡಗಿದ್ದು, ಆಗಾಗ ಕಟ್ಟಿಗೆ ಸಂಗ್ರಹಿಸಲು ಕಾಡಿಗೆ ಹೋಗುತ್ತಿದ್ದರು. ಕಾಡಿಗೆ ಹೋಗುವ ಕುರಿತು ಕುಟುಂಬದವರು ಪ್ರಶ್ನಿಸಿದಾಗಲೆಲ್ಲ, ಗಂಟಲ ಕ್ಯಾನ್ಸರ್​ನ ಬೇನೆ ತಡೆದುಕೊಳ್ಳಲು ಅಗತ್ಯವಾದ ಗಿಡಮೂಲಿಕೆ, ಬೇರು ತರಲು ಹೋಗುವುದಾಗಿ ಹೇಳುತ್ತಿದ್ದರಂತೆ.

    ಇದನ್ನೂ ಓದಿರಿ ಮಲಗಿದ್ದಲ್ಲೇ ವೃದ್ಧ ದಂಪತಿಯನ್ನು ಉಸಿರುಗಟ್ಟಿಸಿ ಕೊಂದರು…

    ದೇಹತ್ಯಾಗ ಪತ್ರ!: ಶಿವರಾಮ ಹೆಗಡೆ ಪತ್ರವೊಂದನ್ನು ಬರೆದಿದ್ದು, ಅದಕ್ಕೆ ದೇಹತ್ಯಾಗ ಪತ್ರ ಎಂದು ಶೀರ್ಷಿಕೆ ನೀಡಿದ್ದಾರೆ. ಅದರಲ್ಲಿ ಭಗವದ್ಗೀತೆಯ 13ನೇ ಅಧ್ಯಾಯವಾದ ಕ್ಷೇತ್ರ ಕ್ಷೇತ್ರಜ್ಱ ವಿಭಾಗ ಯೋಗದಲ್ಲಿನ ವಿಷಯವನ್ನು ಉಲ್ಲೇಖಿಸಿದ್ದಾರೆ.

    “ಶಿವರಾಮನೆಂಬ ಜಡ ಶರೀರ ನಾನಲ್ಲ, ನನ್ನದೆಂಬುದು ಯಾವುದೂ ಇಲ್ಲ, ನಾನು ಪ್ರಕೃತಿಯನ್ನು ಬಿಟ್ಟಿದ್ದೇನೆ, ನನಗಿನ್ನು ಹುಟ್ಟು ಸಾವುಗಳಿಲ್ಲ. ಶ್ರೀಕೃಷ್ಣನು ತನ್ನ ಅನನ್ಯ ಭಕ್ತರ ಬಗೆಗೆ ಹೇಳಿದಂತೆ ದೇಹತ್ಯಾಗಕ್ಕೆ ಸಿದ್ಧನಾಗಿದ್ದೇನೆ. ಭಗವಂತನು ಕ್ಷೇತ್ರನನ್ನು ಕ್ಷೇತ್ರಕ್ಕೆ ಸೇರಿಸುವವ ನಾನೇ ಎಂದು ಹೇಳುತ್ತಾನೆ. ಕ್ಷೇತ್ರನು ಕ್ಷೇತ್ರದ ಮೂರು ಮಾಯಾ ಗುಣಗಳನ್ನು ಗೆದ್ದಾಗ ಕ್ಷೇತ್ರದ ಹಾಗೂ ದೇಹದ ಬಿಡುಗಡೆಯಾಗುತ್ತದೆ” ಎಂದು ಬರೆದುಕೊಂಡಿದ್ದು, ಸೊಪ್ಪಿನ ಬೆಟ್ಟದಲ್ಲಿ ಅಗ್ನಿಪ್ರವೇಶ ಮಾಡುವುದಾಗಿಯೂ ಬರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಿವರಾಮ ಹೆಗಡೆ ಭಗವದ್ಗೀತೆಯನ್ನು ಹೆಚ್ಚಾಗಿ ಓದುತ್ತಿದ್ದರೆಂದು ಕುಟುಂಬದವರು ಹೇಳಿದ್ದು, ಈ ಪತ್ರದಲ್ಲಿ ಅದು ಸ್ಪಷ್ಟವಾಗಿ ಗೋಚರಿಸುವಂತಿದೆ.

    ಇದನ್ನೂ ಓದಿರಿ ಇದು ಟ್ರೈಂಗಲ್ ಲವ್ ಸ್ಟೋರಿ… ಬ್ರೇಕ್​ ಅಪ್​ ಬಳಿಕ ಎಂಟ್ರಿಕೊಟ್ಟ ಮಾಜಿ ಪ್ರಿಯಕರ ಕಿರಿಕ್​ ಪ್ರೇಯಸಿಗೆ ಹೀಗಾ ಮಾಡೋದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts