More

    ಈ ಪ್ರಮುಖ ಕಾರಣಗಳಿಗೆ ಭಾರತದಲ್ಲಿ ಕ್ಯಾನ್ಸರ್​​​​ನಿಂದ 2020 ರಲ್ಲಿ 2.25 ಲಕ್ಷ ಮಂದಿ ಸಾವು

    ನವದೆಹಲಿ: ಆಲ್ಕೋಹಾಲ್ ಸೇವನೆ, ತಂಬಾಕು ಸೇವನೆ, ಅಧಿಕ ತೂಕ ಮತ್ತು ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ನಿಂದ ಉಂಟಾಗುವ ಕ್ಯಾನ್ಸರ್ ನಿಂದಾಗಿ 2020 ರಲ್ಲಿ ಭಾರತದಲ್ಲಿ ಸುಮಾರು 2.25 ಲಕ್ಷ ಜನರು ಸಾವನ್ನಪ್ಪಿದ್ದಾರೆ.

    ಗರಿಷ್ಠ 1.10 ಲಕ್ಷ ಸಾವುಗಳು ಧೂಮಪಾನಕ್ಕೆ ಸಂಬಂಧಿಸಿದ ಕ್ಯಾನ್ಸರ್‌ಗಳಿಂದ ಉಂಟಾದರೆ, ಆ ನಂತರ ನಂತರ HPV (89,100), ಆಲ್ಕೋಹಾಲ್ ಸೇವನೆ (41,600) ಮತ್ತು ಅಧಿಕ ತೂಕ (8000)ದಿಂದ ಸಾವುಗಳು ಸಂಭವಿಸಿರುವುದಾಗಿ eClinicalMedicineನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿದುಬಂದಿದೆ.

    HPV 200 ಕ್ಕೂ ಹೆಚ್ಚು ಸಂಬಂಧಿತ ವೈರಸ್‌ಗಳ ಗುಂಪಾಗಿದೆ. ಈ ಕೆಲವು ವೈರಸ್‌ಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು, ಉದಾಹರಣೆಗೆ ಗರ್ಭಕಂಠದ ಕ್ಯಾನ್ಸರ್. ಆದರೆ HPV ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಲಸಿಕೆಗಳು ಲಭ್ಯವಿದೆ.

    ಗರಿಷ್ಠ ಸಂಖ್ಯೆಯ ಕ್ಯಾನ್ಸರ್ ಸಾವುಗಳು ಚೀನಾದಲ್ಲಿ (11.44 ಲಕ್ಷ), ಭಾರತ (2.25 ಲಕ್ಷ), ಯುಎಸ್ (2.22 ಲಕ್ಷ), ರಷ್ಯಾ (1.22 ಲಕ್ಷ), ಬ್ರೆಜಿಲ್ (73,500), ಯುಕೆ (59,500) ಮತ್ತು ದಕ್ಷಿಣ ಆಫ್ರಿಕಾ (18,100)ದಲ್ಲಿ ಸಂಭವಿಸಿವೆ. ಚೀನಾದಲ್ಲಿ ಅತಿ ಹೆಚ್ಚು ಕ್ಯಾನ್ಸರ್​​​​​ನಿಂದ ಮೃತಪಟ್ಟಿದ್ದಾರೆ. ನಂತರದ ಸ್ಥಾನದಲ್ಲಿ ಭಾರತ, ಯುಎಸ್, ರಷ್ಯಾ, ಬ್ರೆಜಿಲ್, ಯುಕೆ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿವೆ.

    ತಂಬಾಕು ಕ್ಯಾನ್ಸರ್ ನಿಂದಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದ್ದು, ಸುಮಾರು 1.3 ಮಿಲಿಯನ್ ಸಾವುಗಳು ಈ ಕ್ಯಾನ್ಸರ್​​​ನಿಂದ ಸಂಭವಿಸಿವೆ. ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾದ ಧೂಮಪಾನವು ಶ್ವಾಸಕೋಶದ ಜೀವಕೋಶಗಳು ಮತ್ತು ಡಿಎನ್‌ಎಗೆ ಹಾನಿ ಮಾಡುವ ಕಾರ್ಸಿನೋಜೆನ್‌ಗಳನ್ನು ಬಿಡುಗಡೆ ಮಾಡುತ್ತದೆ, ಇದು ರೂಪಾಂತರಗಳಿಗೆ ಕಾರಣವಾಗುತ್ತದೆ. ಆದರೆ ಇದಕ್ಕೆ ಪರಿಹಾರವೆಂದರೆ ಧೂಮಪಾನವನ್ನು ತ್ಯಜಿಸುವುದು ಮತ್ತು ಸಮಗ್ರ ತಂಬಾಕು ನಿಯಂತ್ರಣ ಕ್ರಮಗಳು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕವಾಗಿವೆ.

    ಸಿಲ್ಕ್ಯಾರಾ ಸುರಂಗದಿಂದ ರಕ್ಷಿಸಲ್ಪಟ್ಟ 41 ಕಾರ್ಮಿಕರಿಗೆ ತಲಾ ಒಂದು ಲಕ್ಷ ರೂ.ಆರ್ಥಿಕ ನೆರವು ಘೋಷಿಸಿದ ಸಿಎಂ ಧಾಮಿ

     

     

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts