More

    ಆ ರೀತಿಯ ವಿಡಿಯೋವನ್ನು ಅಮ್ಮನಿಗೆ ಕಳುಹಿಸಿದ ಮಗಳು! ಇದೆಲ್ಲ ಆ್ಯಪ್​ ತಪ್ಪೆಂದು ಕ್ಷಮೆಯಾಚನೆ

    ಒಟ್ಟಾವಾ: ಡಿಜಿಟಲ್​ ಯುಗಕ್ಕೆ ಹೊಂದಿಕೊಳ್ಳುವುದು ನಮ್ಮ ಜೀವನವನ್ನು ಎಷ್ಟು ಸುಲಭಗೊಳಿಸುತ್ತದೆಯೋ ಕೆಲವೊಮ್ಮೆ ಅಷ್ಟೇ ಸಂಕಷ್ಟಕ್ಕೂ ತಂದೊಡುತ್ತದೆ. ಈ ಘಟನೆ ಅದಕ್ಕೆ ಒಂದು ಸಾಕ್ಷಿ. ಮಗನ ಫೋಟೋವನ್ನು ಅಮ್ಮನಿಗೆ ಕಳುಹಿಸಲು ಹೋದ ಮಹಿಳೆಯೊಬ್ಬಳು ತನ್ನ ಗಂಡನೊಂದಿಗೆ ರೊಮ್ಯಾನ್ಸ್​ ಮಾಡಿದ ವಿಡಿಯೋವನ್ನೇ ಕಳುಹಿಸಿರುವ ಘಟನೆಯಿದು.

    ಕೆನಡಾದ ಕಾರಾ ಟೋನ್ಯನ್ ಹೆಸರಿನ ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಈಗಾಗಲೇ ಮದುವೆಯಾಗಿ ಮಗನಿರುವ ಈಕೆ ತನ್ನ ತಾಯಿಯೊಂದಿಗೆ ಯಾವಾಗಲೂ ಸಂಪರ್ಕದಲ್ಲಿರುತ್ತಾರಂತೆ. ಮೊಮ್ಮಗನನ್ನು ಕಂಡರೆ ಹೆಚ್ಚು ಇಷ್ಟ ಪಡುವ ತಾಯಿಗೆ ತನ್ನ ಮೊಬೈಲ್​ನಲ್ಲಿರುವ ಮಗನ ಫೋಟೋಗಳೆಲ್ಲವೂ ಅಟೋಮೆಟಿಕ್​ ಆಗಿ ಹೋಗುವಂತೆ ಫೋನ್​ನಲ್ಲಿ ಸೆಟ್ಟಿಂಗ್​ ಮಾಡಿಟ್ಟುಕೊಂಡಿದ್ದಾರಂತೆ. ಆದರೆ ಈ ರೀತಿ ಮಾಡಿದ್ದೇ ಅವರಿಗೆ ನಾಚಿಕೆ ತರಿಸುವಂತಹ ಕೆಲಸ ಮಾಡಿದೆ.

    ಒಂದು ದಿನ ನೋಡಿದಾಗ, ತಾನು ತನ್ನ ಗಂಡನೊಂದಿಗೆ ಕಿಚನ್​ನಲ್ಲಿ ರೊಮ್ಯಾನ್ಸ್​ ಮಾಡುವ ವಿಡಿಯೋ ತಾಯಿಗೆ ಸೆಂಡ್​ ಆಗಿರುವುದು ಕಂಡುಬಂದಿದೆ. ಇದು ಹೇಗೆ ಆಯಿತು ಎಂದು ಕೂಲಂಕುಷವಾಗಿ ಹುಡುಕಿದಾಗ ನಿಜಾಂಶ ತಿಳಿದುಬಂದಿದೆ. ಅಡುಗೆ ಮನೆಯಲ್ಲಿದ್ದ ಫ್ರಿಜ್​ನ ಮೇಲೆ ಆಕೆಯ ಮಗನ ಫೋಟೋ ಫ್ರೇಮ್​ ಇತ್ತಂತೆ. ವಿಡಿಯೋದಲ್ಲಿ ಆತನ ಫೋಟೋ ಕೂಡ ಕಾಣಿಸಿಕೊಂಡಿದೆ. ಅದನ್ನು ಕಂಡ ಆ್ಯಪ್​, ಆ ವಿಡಿಯೋವನ್ನೂ ಮಗನ ವಿಡಿಯೋ ಕೆಟಗರಿಗೆ ಹಾಕಿ, ಕಾರಾಳ ತಾಯಿಗೆ ಕಳುಹಿಸಿಕೊಟ್ಟಿದೆ.

    ಈ ವಿಚಾರವನ್ನು ಸ್ವತಃ ಕಾರಾ ಅವರೇ ಟಿಕ್​ಟಾಕ್​ನಲ್ಲಿ ಹಂಚಿಕೊಂಡಿದ್ದಾರೆ. ಆ ರೀತಿಯ ವಿಡಿಯೋ ಕಳುಹಿಸಿದ್ದಕ್ಕೆ ತನ್ನ ತಾಯಿಯ ಬಳಿ ಕ್ಷಮೆ ಯಾಚಿಸಿದ್ದಾರೆ. (ಏಜೆನ್ಸೀಸ್​)

    ಭ್ರಷ್ಟಾಚಾರ ಆರೋಪದ ಸುಳಿಯಲ್ಲಿ ಸಿಕ್ಕಿಬಿದ್ದ ಬೆನ್ನಲ್ಲೇ ರಾಜೀನಾಮೆ ಸಲ್ಲಿಸಿದ ಗೃಹ ಸಚಿವ!

    ಚಿನ್ನಮ್ಮ ಜೈಲಿಂದ ಬಿಡುಗಡೆಯಾಗಿದ್ದರೂ ಮತ ಹಾಕುವಂತಿಲ್ಲ! ಕುತೂಹಲ ಕೆರಳಿಸಿದ ವೋಟರ್​ ಲಿಸ್ಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts