More

    ಕೆನಡಾ ಸಂಸತ್​​ನಲ್ಲಿ ಕನ್ನಡದ ಕಂಪು: ಕುವೆಂಪು ಅವರ ಗೀತೆ ಹಾಡಿದ ಸಂಸದನ ವಿಡಿಯೋ ವೈರಲ್​​

    ಕೆನಡಾ: ವಿಶ್ವದಾದ್ಯಂತ ಕನ್ನಡಿಗರು ನೆಲೆಸಿದ್ದು, ಆಗ್ಗಾಗ್ಗೆ ಕನ್ನಡದ ಬಗ್ಗೆ ಹೆಮ್ಮೆ ತರಿಸುವಂತಹ ಕಾರ್ಯವನ್ನು ಮಾಡುತ್ತಿರುತ್ತಾರೆ. ಕನ್ನಡದ ಕಂಪು ಎಲ್ಲೆಲ್ಲೂ ಪಸರಿಸಿದ್ದು, ವಿದೇಶದಲ್ಲಿ ನೆಲೆಸಿದ್ದರು ಮಾತೃಭಾಷೆಯ ಮೇಲಿನ ಅಭಿಮಾನವನ್ನು ಬಿಡುವುದಿಲ್ಲ.

    ಕನ್ನಡಾಭಿಮಾನ ತೋರಿಸುವ ಹೀಗೊಂದು ಸನ್ನಿವೇಶವನ್ನು ಸದ್ಬಳಕೆ ಮಾಡಿಕೊಂಡಿರುವ ಕೆನಡಾದ ಸಂಸದ ಚಂದ್ರ ಆರ್ಯ ಅವರು ಸಂಸತ್​ನಲ್ಲಿ ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರೂ ಇರು.. ಎಂತಾದರೂ ಇರು…ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಗೀತೆಯನ್ನು ಹೇಳಿದ್ದಾರೆ.

    ಸಂಸತ್​ನಲ್ಲಿ ಮಾತನಾಡಲು ಆರಂಭಿಸಿದ ಅವರು, ನಾನು ನನ್ನ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡಿದ ಬಳಿಕ ಮಾತು ಆರಂಭಿಸುತ್ತೇನೆ ಎಂದು ಹೇಳಿ ಕುವೆಂಪು ಅವರ ಈ ಪದ್ಯವನ್ನು ಹಾಡಿದ್ದಾರೆ.

    ಇದೇ ಮೊಲದ ಬಾರಿಗೆ ವಿದೇಶದ ಸಂಸತ್​​ನಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಿರುವುದು. ಅವರ ಈ ಮಾತೃ ಭಾಷೆ ಮೇಲಿನ ಪ್ರೇಮಕ್ಕೆ ಟ್ವಿಟ್ಟಿಗರಿಂದ ಭಾರೀ ಮೆಚ್ಚುಗೆ ಪಡೆದಿದ್ದಾರೆ.

    ಕುವೆಂಪು ಅವರ ಈ ಗೀತೆಯನ್ನು ವರನಟ ಡಾ.ರಾಜ್​ಕುಮಾರ್​ ಅವರು ಹಾಡಿದ್ದು, ನಮ್ಮದು ಸುಂದರವಾದ ಭಾಷೆ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

    ಇದನ್ನು ವೀಕ್ಷಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್​.ಅಶ್ವತ್ಥ್​ ನಾರಾಯಣ್​ ಅವರೇ ಮೆಚ್ಚಿಕೊಂಡಿದ್ದು, ಈ ವಿಡಿಯೋವನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಕಾಂಗ್ರೆಸ್​ ವಕ್ತಾರ ರಣದೀಪ್​ ಸಿಂಗ್​ ಸುರ್ಜೇವಾಲಾ ಅವರು ಕೂಡ ಮೆಚ್ಚಿದ್ದಾರೆ. ಇನ್ನು ಚಂದ್ರ ಆರ್ಯ ಅವರು ತುಮಕೂರು ಮೂಲದವರಾಗಿದ್ದಾರೆ.  (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts