More

    PHOTOS| ಬಿಕಿನಿ ಬ್ಯೂಟಿ ಯಾರೆಂದು ಗುರುತಿಸುವಿರಾ? ಕನ್ನಡಿಗರಿಗೂ ಚಿರಪರಿಚಿತ ಈ ಮಾದಕ ನಟಿ!

    ನವದೆಹಲಿ: ಮಾಲ್ಡೀವ್ಸ್​ ಪ್ರವಾಸಿಗರ ನೆಚ್ಚಿನ ತಾಣ ಎಂಬುದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ಸಿನಿಮಾ ನಟಿಯರಿಗಂತೂ ಮಾಲ್ಡೀವ್ಸ್​ ಕಡಲ ಕಿನಾರೆಯೆಂದರೆ ಎಲ್ಲಲ್ಲಿದ ಪ್ರೀತಿ. ಹೀಗಾಗಿಯೇ ಬಿಕಿನಿ ತೊಟ್ಟು ಬೀಚ್​ನಲ್ಲಿ ಮಿಂದೇಳುವ ಮೂಲಕ ಸಖತ್​ ಎಂಜಾಯ್​ ಮಾಡುತ್ತಾರೆ. ಇದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಭಿಮಾನಿಗಳ ಮನತಣಿಸುವುದಲ್ಲದೇ ಸಖತ್​ ಲೈಕ್ಸ್​ಗಳನ್ನು ಗಿಟ್ಟಿಸಿಕೊಳ್ಳುತ್ತಾರೆ.

    ಕರೊನಾ ಲಾಕ್​ಡೌನ್​ನಿಂದ ಮನೆಯಲ್ಲೇ ಲಾಕ್​ ಆಗಿದ್ದ ನಟಿಯರು ಲಾಕ್​ಡೌನ್​ ಮುಕ್ತವಾಗುತ್ತಿದ್ದಂತೆ ಸಾಲು ಸಾಲಾಗಿ ಮಾಲ್ಡೀವ್ಸ್​ ಕಡೆ ಹೆಜ್ಜೆ ಇಟ್ಟಿದ್ದಾರೆ. ಇತ್ತೀಚೆಗಷ್ಟೇ ಸಮಂತಾ, ಶಾನ್ವಿ ಶ್ರೀವಾತ್ಸವ್, ಸೋನಾಕ್ಷಿ ಸಿನ್ಹಾ, ದಿಶಾ ಪಟಾನಿ, ಕಾಜಲ್​ ಅಗರವಾಲ್​, ಪ್ರಣೀತಾ, ರಾಕುಲ್​ ಪ್ರೀತ್​ ಸಿಂಗ್​ ಸೇರಿದಂತೆ ಅನೇಕ ನಟಿಯರು ಮಾಲ್ಡೀವ್ಸ್​ಗೆ ಭೇಟಿ ನೀಡಿದ್ದರು. ಇದೀಗ ಬಾಲಿವುಡ್​ ನಟಿ ಡೈಸಿ ಷಾ ಮಾಲ್ಡೀವ್ಸ್​ ಬೀಚ್​ನಲ್ಲಿ ಬಿಕಿನಿ ತೊಟ್ಟು ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.

    ಕಪ್ಪು ಬಣ್ಣದ ಬಿಕಿನಿ ತೊಟ್ಟು, ತಲೆಗೆ ಹ್ಯಾಟ್​ ಧರಿಸಿ ಬಿಸಿಲಿಗೆ ಮೈ ಒಡ್ಡಿರುವ ಫೋಟೋವನ್ನು ಡೈಸಿ ಷಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ. ಮಾಲ್ಡೀವ್ಸ್​ನಲ್ಲಿ ಸಖತ್​ ಎಂಜಾಯ್​ ಮಾಡುತ್ತಿರುವ ಡೈಸಿ ಸಾಕಷ್ಟು ಫೋಟೋಗಳನ್ನು ಸಹ ಶೇರ್​ ಮಾಡಿಕೊಂಡಿದ್ದು, ವೈರಲ್​ ಆಗಿವೆ. ಡೈಸಿ ಷಾ ಅವರ ಮಾದಕ ನೋಟಕ್ಕೆ ಫಿದಾ ಆಗಿರುವ ಅಭಿಮಾನಿಗಳು ಲೈಕ್ಸ್​ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

     

    View this post on Instagram

     

    A post shared by Daisy (@shahdaisy)

    ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಕನ್ನಡಿಗರಿಗೂ ಪರಿಚಿತರಾಗಿರುವ ಡೈಸಿ ಷಾ, 2011ರಲ್ಲಿ ನಟ ಪ್ರಜ್ವಲ್​ ದೇವರಾಜ್​ ಅಭಿನಯದ ಭದ್ರ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಜಗ್ಗೇಶ್​ ಅಭಿನಯದ ಬಾಡಿಗಾರ್ಡ್ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಸುದೀಪ್​ ಅಭಿನಯದ ಬಚ್ಚನ್​ ಸಿನಿಮಾದಲ್ಲಿ ಐಟಂ ಸಾಂಗ್​ ಒಂದಕ್ಕೆ ಸೊಂಟ ಬಳುಕಿಸಿದ್ದಾರೆ. ಹಿಂದಿಯಲ್ಲಿ ಜೈಹೋ, ರೇಸ್​ 3 ಮತ್ತು ಹೇಟ್​ ಸ್ಟೋರಿ 3ರಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

     

    View this post on Instagram

     

    A post shared by Daisy (@shahdaisy)

     

    View this post on Instagram

     

    A post shared by Daisy (@shahdaisy)

     

    View this post on Instagram

     

    A post shared by Daisy (@shahdaisy)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts