ನವದೆಹಲಿ: ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಸಾರಾ ಅಲಿ ಖಾನ್ ಆಗಾಗ ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುತ್ತಾ ಅದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಾವು ಬಾಲಕಿಯಾಗಿದ್ದಾಗ ಮುದ್ದು ಮುದ್ದಾಗಿ ಕ್ಯಾಮರಾಗೆ ಕಣ್ಣಿನಲ್ಲಿ ಸೆರೆಯಾಗಿದ್ದ ಫೋಟೋವನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದು, ಫೋಟೋ ವೈರಲ್ ಆಗಿದೆ.
ಸಾರಾ ಅವರು ತಮ್ಮ ಚೈಲ್ಡ್ಹುಡ್ ಆಲ್ಬಮ್ನಿಂದ ಸದ್ಯ ಇನ್ಸ್ಟಾಗ್ರಾಂನಲ್ಲಿ ಮತ್ತೊಂದು ಫೋಟೋವನ್ನು ಹರಿಬಿಟ್ಟಿದ್ದಾರೆ. ಗುಲಾಬಿ ಬಣ್ಣದ ತುಂಡುಡುಗೆ ಧರಿಸಿ, ದೊಡ್ಡ ಕ್ಯಾಮರಾವನ್ನು ಹಿಡಿದು ಫೋಸ್ ನೀಡಿದ್ದಾರೆ. ಫೋಟೋ ಹಿಂದೆ ಸಂಜೆ ಸೂರ್ಯನ ಬಿಸಿಲಿನ ಬ್ಯಾಕ್ಗ್ರೌಂಡ್ ಇದೆ. ಇದಕ್ಕೆ ಹಲವು ಸೂರ್ಯನಿಗಾಗಿ, ಸೂರ್ಯನನ್ನು ಪ್ರೀತಿಸಿದೆ ಎಂದು ಸಾರಾ ಅಡಿಬರಹ ಬರೆದುಕೊಂಡಿದ್ದಾರೆ.
https://www.instagram.com/p/B7LqXCsJTBF/
ಜಾಲತಾಣದಲ್ಲಿ ಸಂಚಲನ ಸೃಷ್ಟಿರುವ ಫೋಟೊ ಅಪ್ಲೋಡ್ ಮಾಡಿದ ಕೇವಲ 18 ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ನೆಚ್ಚನ ನಟಿಯ ಬಾಲ್ಯದ ಅವತಾರ ಕಂಡು ಅಭಿಮಾನಿಗಳು ಅಭಿಪ್ರಾಯಗಳ ಸುರಿಮಳೆಗೈಯುತ್ತಿದ್ದಾರೆ.
ಇದೇ ಮೊದಲೇನಲ್ಲ. ಈ ಹಿಂದೆ 2000ನೇ ಇಸವಿಯ ಬಾಲ್ಯದ ಫೋಟೋವೊಂದನ್ನು ಹರಿಬಿಟ್ಟಿದ್ದರು. ಅಂದಿನಿಂದ ಶೂಟಿಂಗ್ಗಾಗಿ ಕಾಯುತ್ತಿದ್ದೇನೆ ಎಂದು ಸಾರಾ ಬರೆದುಕೊಂಡಿದ್ದರು, ಸಾಂಪ್ರದಾಯಿಕ ಉಡುಗೆಯಾಗಿರುವ ಲೆಹಂಗಾ-ಚೋಲಿ ಧರಿಸಿ, ತಲೆಯ ಮೇಲೆ ದುಪ್ಪಟ್ಟ ಹೊದ್ದುಕೊಂಡು ಸಾರಾ ಮುದ್ದು ಮುದ್ದಾಗಿ ಪೋಸ್ ನೀಡಿದ ಫೋಟೋ ಆಗಿತ್ತು. ನನ್ನ ಸಮಯ ಬಂತು ಹಾಗೂ ಸಾರಾ ಕಾ ಡ್ರಾಮಾ ಎಂದು ಹ್ಯಾಷ್ಟ್ಯಾಗ್ ಹಾಕಿ ಫೋಟೋವನ್ನು ಸಾರಾ ಶೇರ್ ಮಾಡಿಕೊಂಡಿದ್ದರು.
https://www.instagram.com/p/B4jz9KnJtVC/?utm_source=ig_embed
ಅಂದಹಾಗೆ ಇತ್ತೀಚೆಗಷ್ಟೇ ಸಾರಾ ಮಾಲ್ಡಿವ್ಸ್ ಪ್ರವಾಸ ಮುಗಿಸಿ ಬಂದಿದ್ದಾರೆ. ಈ ವೇಳೆ ತೆಗೆದ ಸಾಕಷ್ಟು ಬೋಲ್ಡ್ ಫೋಟೋಗಳನ್ನು ಸಾರಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು.
ಸಾರಾ ಅಲಿ ಖಾನ್, ನಟ ಸೈಫ್ ಅಲಿಖಾನ್ ಅವರ ಮೊದಲ ಪತ್ನಿ ಅಮೃತ ಸಿಂಗ್ ಮಗಳಾಗಿದ್ದು, ತಂದೆ ಸೈಫ್ ಜತೆಯಲ್ಲಿಯೂ ಸಂಪರ್ಕದಲ್ಲಿದ್ದಾರೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಸದ್ಯ ಲವ್ ಆಜ್ ಕಲ್ ಸೀಕ್ವೆಲ್ ಚಿತ್ರವನ್ನು ಸಾರಾ ಮುಗಿಸಿದ್ದು, ವರುಣ್ ಧವನ್ ಅಭಿನಯದ ಕೂಲಿ ನಂ.1 ಚಿತ್ರದ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್)
https://www.instagram.com/p/B65v8fppdmw/
https://www.instagram.com/p/B6hnERZpZhg/
https://www.instagram.com/p/B62H86RpzO8/
https://www.instagram.com/p/B6297JvJZ4P/
https://www.instagram.com/p/B7EJDbBpPHw/