More

    ಕ್ಯಾಂಪ್ಕೊ ಸಂಸ್ಥೆಯ ಹೊಸ ಉತ್ಪನ್ನ

    ಮಂಗಳೂರು: ಕ್ಯಾಂಪ್ಕೊ ಸಂಸ್ಥೆಯ ಹೊಸ ಉತ್ಪನ್ನಗಳಾದ ‘ದಿ ಡೈರಿ ಡ್ರೀಮ್ ಫ್ರೂಟ್ ನಟ್’ ಮತ್ತು ‘ವಿನ್ನರ್‌ವಿದ್ ಜಾಗರಿ’ಯನ್ನು, ಪುತ್ತೂರು ಚಾಕಲೆಟ್ ಫ್ಯಾಕ್ಟರಿಯಲ್ಲಿ ಅ.30ರಂದು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಬಿಡುಗಡೆಗೊಳಿಸಲಿದ್ದಾರೆ. ಇದೇ ವೇಳೆ ಕೋಕೋ ಪೌಡರ್ ಪ್ಲಾಂಟನ್ನು ಶಾಸಕ, ಕ್ಯಾಂಪ್ಕೊ ಮಾಜಿ ನಿರ್ದೇಶಕ ಸಂಜೀವ ಮಠಂದೂರು ಸಂಸ್ಥೆ ಆವರಣದಲ್ಲಿ ಉದ್ಘಾಟಿಸಲಿದ್ದಾರೆ.

     ದಿ ಡೈರಿ ಡ್ರೀಮ್ ಫ್ರೂಟ್ ನಟ್: ಸ್ವದೇಶಿ ಚಾಕಲೆಟ್ ಉತ್ಪನ್ನವಾದ ದಿ ಡೈರಿ ಡ್ರೀಮ್ ಫ್ರೂಟ್ ನಟ್ ಶುದ್ಧ ಹಾಲಿನ ಪುಡಿ, ಕೋಕೋ, ಬಾದಾಮಿ ಮತ್ತು ಒಣದ್ರಾಕ್ಷಿಗಳ ಮಿಶ್ರಣದೊಂದಿಗೆ ತಯಾರಿಸಲಾಗಿದೆ. ಈ ಉತ್ಪನ್ನ 40 ಗ್ರಾಂ ಸ್ಲ್ಯಾಬ್‌ನಲ್ಲಿ 40 ರೂ.ಗರಿಷ್ಠ ಮಾರಾಟ ಬೆಲೆಗೆ ಲಭ್ಯವಿದೆ.

    ವಿನ್ನರ್ ವಿದ್ ಜಾಗರಿ: ಈ ಉತ್ಪನ್ನ ಚಾಕಲೆಟ್ ಹಾಗೂ ಬೆಲ್ಲದೊಂದಿಗೆ ಕೂಡಿದ ವಿಶೇಷ ಪೇಯಮಿಶ್ರಣ. ಬೆಲ್ಲದ ನೈಸರ್ಗಿಕ ಪೋಷಕಾಂಶಗಳೊಂದಿಗೆ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಈ ಉತ್ಪನ್ನ ಸರ್ವ ಋತುಗಳಿಗೆ ಹಾಗೂ ಎಲ್ಲ ವಯೋಮಾನದವರಿಗೆ ಬಿಸಿ ಅಥವಾ ತಂಪು ರೂಪದಲ್ಲಿ ಸೇವಿಸಬಹುದು. ಉತ್ತಮ ಆರೋಗ್ಯಕ್ಕೆ ಸಹಕಾರಿ. 300 ಗ್ರಾಂ.ಪ್ಯಾಕ್ 180 ರೂ.ನಲ್ಲಿ ಪರಿಚಯಿಸಲಾಗುತ್ತಿದೆ.

    *ಕೋಕೋ ಪುಡಿ ಅರೆಯುವ ಯಂತ್ರ: ದಿನದಿಂದ ದಿನಕ್ಕೆ ಏರುತ್ತಿರುವ ಗ್ರಾಹಕರ ಬೇಡಿಕೆ ಪೂರೈಸುವ ಸಲುವಾಗಿ, ಕ್ಯಾಂಪ್ಕೊ ಸಂಸ್ಥೆ ಹೆಚ್ಚುವರಿ ತಂತ್ರಜ್ಞಾನದಿಂದ ಕೂಡಿದ ಕೋಕೋ ಕೇಕನ್ನು ಅರೆಯುವ ಯಂತ್ರವನ್ನು ಇಟಲಿಯಿಂದ ಆಮದು ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts