More

    ಟ್ರಯಲ್ ರೂಂನಲ್ಲಿ ಕ್ಯಾಮರಾ, ಕಾಲ್ಕಿತ್ತ ಆರೋಪಿ

    ಕುಂಬಳೆ: ಬಂದ್ಯೋಡು ಸ್ಪೋರ್ಟ್ಸ್ ಸೆಂಟರೊಂದರ ಟ್ರಯಲ್ ರೂಂನಲ್ಲಿ ಹಿಡನ್ ಕ್ಯಾಮರಾ ಪತ್ತೆಯಾಗಿದೆ. ಶನಿವಾರ ಸಂಜೆ ಕ್ರೀಡಾ ಸ್ಪರ್ಧೆಗೆ ಜೆರ್ಸಿ ಮತ್ತಿತರ ವಸ್ತುಗಳನ್ನು ಪಡೆಯಲು ಆಗಮಿಸಿದ್ದ 16ರ ಬಾಲಕಿ ಟ್ರಯಲ್ ರೂಂಗೆ ತೆರಳಿದಾಗ ಅಲ್ಲಿ ಹಿಡನ್ ಕ್ಯಾಮರಾ ಇಟ್ಟಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಸ್ಥೆಯ ಉದ್ಯೋಗಿಯೊಬ್ಬರು ಕ್ಯಾಮರಾ ಅಳವಡಿಸಿರುವುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts