More

    ಅಪ್ರಾಪ್ತೆಯನ್ನು ‘ಐಟಂ’ ಎಂದು ಕರೆದ ಯುವಕನಿಗೆ 1.5 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್!​

    ಮುಂಬೈ: ಬಾಲಕಿಯನ್ನು “ಐಟಂ” ಎಂದು ಕರೆಯುವುದು ಸಹ ಲೈಂಗಿಕ ಕಿರುಕುಳ ಪ್ರಕರಣದ ಅಡಿಯಲ್ಲಿ ಬರುತ್ತದೆ ಎಂದು ಮುಂಬೈ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

    16 ವರ್ಷದ ಅಪ್ರಾಪ್ತೆಯನ್ನು ಅಬ್ರಾರ್​ ಖಾನ್​ ಎಂಬ ಯುವಕ “ಐಟಂ” ಎಂದು ಕರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ತೀರ್ಪು ನೀಡಿದ್ದು, ಆರೋಪಿ ಯುವಕನಿಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 154 ಅಡಿಯಲ್ಲಿ 1.5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

    ಪ್ರಕರಣದ ವಿವರಣೆಗೆ ಬರುವುದಾದರೆ, ಮುಂಬೈನ ಸಾಕಿ ನಾಕಾ ಮೂಲದ ಬಾಲಕಿಗೆ ಆರೋಪಿ ಮತ್ತು ಆತನ ಸ್ನೇಹಿತರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಈ ಘಟನೆ 2015ರ ಜುಲೈ 1 ರಂದು ನಡೆದಿತ್ತು. ಆಗ ಸಂತ್ರಸ್ತೆಗೆ 16 ವರ್ಷ ವಯಸ್ಸಾಗಿತ್ತು. ಬಾಲಕಿ ಶಾಲೆ ಮುಗಿಸಿ, ಮನೆಗೆ ಮರಳುತ್ತಿದ್ದಾಗ ಆರೋಪಿಯು ಆಕೆಯ ಕೂದಲನ್ನು ಎಳೆದುಕೊಂಡು ಎಂಥಾ ಐಟಂ ಇದು ಎನ್ನುವ ಮೂಲಕ ಆಕೆಯನ್ನು ನಿಂದಿಸಿದ್ದ. ಸಂತ್ರಸ್ತೆ ವಿರೋಧಿಸಿದಾಗ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದ.

    ಘಟನೆಯ ಬಳಿಕ ಬಾಲಕಿ ಪೊಲೀಸ್ ಸಹಾಯವಾಣಿ ಮೂಲಕ ದೂರು ನೀಡಿದ್ದಳು. ಬಳಿಕ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆದರೆ ಆರೋಪಿ ಅಬ್ರಾರ್ ಖಾನ್ ನಿರೀಕ್ಷಣಾ ಜಾಮೀನು ಪಡೆದಿದ್ದ. ತನಗೂ ದೂರುದಾರರಿಗೂ ಸಂಬಂಧವಿದ್ದು, ತನ್ನ ವಿರುದ್ಧ ನಕಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪ್ರಕರಣದ ವಿಚಾರಣೆ ಹಂತದಲ್ಲಿ ನ್ಯಾಯಾಲಯದಲ್ಲಿ ವಾದ ಮಂಡಿಸಿ, ಜಾಮೀನು ಪಡೆದಿದ್ದ.

    ಅಂದಿನಿಂದ ವಿಚಾರಣೆ ನಡೆದುಕೊಂಡೇ ಬರುತ್ತಿತ್ತು. ದೂರುದಾರರ ಹೇಳಿಕೆಯನ್ನು ಆಧರಿಸಿ, ನ್ಯಾಯಾಧೀಶ ಎಸ್‌ಜೆ ಅನ್ಸಾರಿ ಅವರು ಆರೋಪಿ, ಅಪ್ರಾಪ್ತ ಬಾಲಕಿಯ ನಮ್ರತೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಇದೀಗ ತೀರ್ಪು ನೀಡಿದ್ದಾರೆ. ಅಪರಾಧಿಗಳ ಪರಿವೀಕ್ಷಣಾ ಕಾಯ್ದೆಯಡಿ ಅಪರಾಧ ತಪ್ಪಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಧೀಶ, ಆರೋಪಿ ಶಿಕ್ಷೆಯನ್ನು ವಿಧಿಸಿದ್ದಾರೆ. ಈ ತೀರ್ಪು ಹುಡುಗಿಯರನ್ನು ಕಿಚಾಯಿಸುವ ರೋಡ್​ ರೋಮಿಯೋಗಳಿಗೆ ತಕ್ಕ ಪಾಠವಾಗಿದೆ. (ಏಜೆನ್ಸೀಸ್​)​

    ಮಂಡ್ಯ ಬಾಲಕಿಯ ಅತ್ಯಾಚಾರ, ಕೊಲೆ ಕೇಸ್​: ಚಾರ್ಜ್​ಶೀಟ್​ನಲ್ಲಿ ಕೀಚಕ ಕಾಂತರಾಜ್​ನ ಕರಾಳ ಇತಿಹಾಸ ಬಯಲು​

    ತೋಟದಲ್ಲಿ ಕೆಲ್ಸ ಮಾಡಲು ಹೋಗಿದ್ದ ಮಹಿಳೆಯನ್ನು ಜೀವಂತ ನುಂಗಿದ ಹೆಬ್ಬಾವು! ಭಯಾನಕ ಫೋಟೋಗಳು ವೈರಲ್​

    ರಿಷಿ ಬ್ರಿಟನ್ 57ನೇ ಪ್ರಧಾನಿ; ರಾಜ ಮೂರನೇ ಚಾರ್ಲ್ಸ್​ರಿಂದ ಪ್ರಧಾನಿಯಾಗಿ ನೇಮಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts