More

    ಕ್ಯಾಲಿಗ್ರಫಿ, ಕೈಬರಹ ಸ್ಪರ್ಧೆ

    ಮಡಿಕೇರಿ: ಮಡಿಕೇರಿಯ ಜ್ಯೋತಿ ಕ್ಯಾಲಿಗ್ರಫಿ ಮತ್ತು ಕೈಬರಹ ತರಬೇತಿ ಕೇಂದ್ರದ ವತಿಯಿಂದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಕ್ಯಾಲಿಗ್ರಫಿ ಮತ್ತು ಕೈಬರಹ ಸ್ಪರ್ಧೆ ಆಯೋಜಿಸಲಾಗಿತ್ತು.
    ನಗರದ ಯುಕೆಜಿಯಿಂದ ಕಾಲೇಜುವರೆಗಿನ 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಗಳಿಗೆ ಡಾ.ದೀಪಾ, ಕಾವೇರಮ್ಮ, ಕವಿತಾ ವಿ ರಾಮ್ ಮತ್ತು ವೀಣಾ ಉಮೇಶ್ ತೀರ್ಪುಗಾರರಾಗಿದ್ದರು.
    1-5ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆದ ಕ್ಯಾಲಿಗ್ರಫಿ ಸ್ಪರ್ಧೆಯಲ್ಲಿ ಎನ್.ಕೆ.ಚಹನಾ(ಪ್ರ), ಎಚ್.ಪಿ.ಅಭಿಜ್ಞಾ(ದ್ವಿ), ಎಸ್.ಧೃತಿ(ತೃ), 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಆಂಚಲ್.ಎಸ್.ಜೋಶಿ(ಪ್ರ), ಬಿ.ಆರ್.ಆದಿತಿ(ದ್ವಿ), ಆಮ್ನಾ ಫಾತಿಮ(ತೃ), 8ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಜಿ.ಯು.ಶ್ರೀಲತಾ(ಪ್ರ), ನೀಹಾರಿಕಾ(ದ್ವಿ), ಜಿ.ಯು.ಶ್ರೀದೇವಿ(ತೃ) ಬಹುಮಾನ ಪಡೆದುಕೊಂಡಿದ್ದಾರೆ.
    ಯುಕೆಜಿಯಿಂದ 10ನೇ ತರಗತಿವರಗೆ ನಡೆದ ಕೈಬರಹ ಸ್ಪರ್ಧೆಯಲ್ಲಿ ಬಿ.ಕೃತಿಕಾ(ಪ್ರ), ಎಲೀಜಾ(ದ್ವಿ), ತೇಜಸ್‌ಶೆಟ್ಟಿ(ತೃ), 5ರಿಂದ 10ನೇ ತರಗತಿವರೆಗೆ ನಡೆದ ಸ್ಪರ್ಧೆಯಲ್ಲಿ ರುಮಾನ(ಪ್ರ), ಜಿ.ಯು.ಶ್ರೀದೇವಿ(ದ್ವಿ), ಅದಿತಿ(ತೃ) ಪಡೆದರೆ, ಅಭಿಜ್ಞಾ, ಪ್ರತ್ಯೂಷಾ, ಜಿ.ಯು.ಶ್ರೀಲತಾ ಸಮಾಧಾನಕರ ಬಹುಮಾನ ಪಡೆದುಕೊಂಡರು. ವಿಜೇತರಿಗೆ ಡಾ.ದೀಪಾ ವಿ, ಕಾವೇರಮ್ಮ, ಕವಿತಾ ವಿ.ರಾಮ್, ಉಷಾ ಅಯ್ಯಣ್ಣ ಬಹುಮಾನ ವಿತರಿಸಿದರು. ಸಂಸ್ಥೆಯ ಮುಖ್ಯಸ್ಥೆ ನಮಿತಾ ಆರ್.ರಾವ್, ಆತ್ರೇಯ ಸಂತೋಷ್, ಬಿ.ಎಂ.ಡೀನಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts